ಯಲಬುರ್ಗಾ: ತಾಲೂಕಿನ ಗೆದಗೇರಿ ಗ್ರಾಮದ ರೈತ ಕಲ್ಲಪ್ಪ ಚಂಡೂರಿಗೆ ಸೇರಿದ ತೋಟಗಾರಿಕೆ ಬೆಳೆಗೆ ಬುಧವಾರ ಆಕಸ್ಮಿಕ ಬೆಂಕಿ ತಗುಲಿ ನಾನಾ ಬೆಳೆಗಳು ಸುಟ್ಟಿವೆ.
ಜಮೀನಲ್ಲಿ ಬೆಳೆಯಲಾದ ಶೇಂಗಾ, ತೆಂಗಿನಮರ ಹಾಗೂ ನುಗ್ಗಿ ಬೆಳೆಗೆ ಬೆಂಕಿ ತಗುಲಿ ನಷ್ಟವಾಗಿದೆ. ಮಾಹಿತಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ವಿರೂಪಾಕ್ಷಪ್ಪ, ಸಿಬ್ಬಂದಿ ಹನುಮಂತಪ್ಪ ತಿಡಿಗೋಳ, ಮಂಜುನಾಥ ಬಂಡಿ, ಪ್ರಕಾಶ ರಾಠೋಡ್ ಇದ್ದರು.