ಯಲಬುರ್ಗಾ ತಾಲೂಕಿನ ಚೌಡಾಪುರಲ್ಲಿ ಹಿಂದು ಸೇವಾ ಪ್ರತಿಷ್ಠಾನದಿಂದ ಪರಿಸರ ಸಂರಕ್ಷಣೆ ಜಾಗೃತಿ ಜಾಥಾ ನಡೆಯಿತು. ಗ್ರಾಪಂ ಸದಸ್ಯ ರಮೇಶ ಕುಂಟೋಜಿ, ಪ್ರತಿಷ್ಠಾನದ ತಾಲೂಕು ಸಮಿತಿ ಸದಸ್ಯ ನರಸಿಂಗರಾವ್ ದೇಸಾಯಿ, ತಾಲೂಕು ಸೇವಾಮಿತ್ರ ಈರನಗೌಡ ಈಳಿಗೇರ್, ಗ್ರಾಮ ಸೇವಾ ಮಿತ್ರ ಹನುಮೇಶ ಬ್ಯಾಳಿ, ಮುಖ್ಯಶಿಕ್ಷಕ ಯುವರಾಜ ಕಲಾಲ ಇದ್ದರು.  
ಜಿಲ್ಲೆ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಕುರುವತ್ತಿ ಶ್ರೀಕಾಂತಪ್ಪ

ಯಲಬುರ್ಗಾ: ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಗ್ರಾಪಂ ಸದಸ್ಯ ರಮೇಶ ಕುಂಟೋಜಿ ಹೇಳಿದರು.

ತಾಲೂಕಿನ ಚೌಡಾಪುರದಲ್ಲಿ ಹಿಂದು ಸೇವಾ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣೆ ಜಾಗೃತಿ ಜಾಥಾದಲ್ಲಿ ಬುಧವಾರ ಮಾತನಾಡಿದರು.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪ್ರತಿಯೊಬ್ಬರು ಮನೆ ಮುಂದೆ ಒಂದು ಗಿಡ ನೆಟ್ಟು ಪೋಷಿಸಲು ಪ್ರತಿಜ್ಞೆ ಮಾಡಬೇಕು. ಪರಿಸರ ರಕ್ಷಣೆ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸಬೇಕಿದೆ. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವುದರ ಜತೆಗೆ ಹಸಿರೀಕರಣಕ್ಕೆ ಆದ್ಯತೆ ನೀಡಬೇಕು ಎಂದರು.

ಇದೇ ವೇಳೆ ವಿದ್ಯಾರ್ಥಿಗಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪರಿಸರ ಜಾಗೃತಿ ಕುರಿತು ಜಾಥಾ ನಡೆಸಲಾಯಿತು. ಪ್ರತಿಷ್ಠಾನದ ತಾಲೂಕು ಸಮಿತಿ ಸದಸ್ಯ ನರಸಿಂಗರಾವ್ ದೇಸಾಯಿ, ತಾಲೂಕು ಸೇವಾಮಿತ್ರ ಈರನಗೌಡ ಈಳಿಗೇರ್, ಗ್ರಾಮ ಸೇವಾ ಮಿತ್ರ ಹನುಮೇಶ ಬ್ಯಾಳಿ, ಮುಖ್ಯಶಿಕ್ಷಕ ಯುವರಾಜ ಕಲಾಲ, ಶಿಕ್ಷಕ ಗುರುರಾಜ ಇತರರಿದ್ದರು.