ಯಲಬುರ್ಗಾ: ತಾಲೂಕಿನ ಮುರಡಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಪ್ರೇಮ ತಂಡ ಹಾಗೂ ವಿಶ್ವಗುರು ಸೇವಾ ಬಳಗದಿಂದ ಭಾನುವಾರ ಶ್ರಮದಾನ ಕಾರ್ಯ ನಡೆಯಿತು.
ಇದನ್ನೂ ಓದಿ: ಪರಿಸರ ಉಳಿಸುವ ಕೆಲಸ ಆಗಲಿ
ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿ, ಪರಿಸರ ಪ್ರೇಮ ಎನ್ನುವ ತಂಡ ಕಟ್ಟಿಕೊಂಡು ಸ್ವಂತ ಖರ್ಚಿನಲ್ಲಿ ಶಾಲೆ, ಅಂಗನವಾಡಿ ಕೇಂದ್ರ ಗುರುತಿಸಿ ರಜೆ ದಿನವಾದ ಭಾನುವಾರಕ್ಕೊಮ್ಮೆ ಕೊಠಡಿಗಳ ಗೋಡೆಗಳಿಗೆ ಸುಣ್ಣ-ಬಣ್ಣ ಬಳಿಯುವುದು, ಚಿತ್ರಬರಹ ಬರೆಯುವ ಕಾರ್ಯ ಮಾಡಲಾಗುತ್ತಿದೆ.
ರಜೆ ದಿನದಲ್ಲಿ ಕಾಲ ಹರಣ ಮಾಡದೇ ಸೇವಾ ಮನೋಭಾವ ಬೆಳೆಸುತ್ತಿರುವ ತಂಡದ ಕಾರ್ಯ ಶ್ಲಾಘನೀಯ. ಗ್ರಾಮೀಣ ಪ್ರದೇಶದ ಮಕ್ಕಳನ್ನು ಶಾಲೆಗಳತ್ತ ಆಕರ್ಷಿಸಲು ಮತ್ತು ಶಿಕ್ಷಣಕ್ಕೆ ಮಹತ್ವ ಕೊಡುವ ಉದ್ದೇಶದಿಂದ ಇಂತಹ ಸಮಾಜಮುಖಿ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಯಮನಪ್ಪ ಮಾಳಿ, ಎಸ್ಡಿಎಂಸಿ ಅಧ್ಯಕ್ಷ ಲಕ್ಷ್ಮಣ ರಾಠೋಡ, ಪಿಡಿಒ ಪುಷ್ಪಲತಾ ಮಾಲಿಪಾಟೀಲ್, ಜಿಪಂ ಎನ್‌ಆರ್‌ಎಲ್‌ಎಂ ಅಂಬಣ್ಣ, ಚಿತ್ರಬರಹಗಾರ ನಾಗರಾಜ, ರಾಮು, ನೌಕರರಾದ ರಾಮಣ್ಣ, ಬಸಯ್ಯ, ಮಾಲತೇಶ ಕುಷ್ಟ್ಟಗಿ, ಶಾಮ ಸುಂದರ, ಜಾಕೀರ್‌ಹುಸೇನ್, ಶಿವು, ಶರಣಪ್ಪ, ಪ್ರವೀಣ ಮುಕ್ಕುಂಪಿ, ರಾಘವೇಂದ್ರ, ಅನಿತಾ ಬಡಿಗೇರ್, ಸುಜಾತಾ ಮಾಲಿಪಾಟೀಲ್, ಮುಖ್ಯಶಿಕ್ಷಕ ರಮೇಶ ಕಾರಬಾರಿ, ಪ್ರಮುಖರಾದ ಕಮಲಪ್ಪ ನಾಯ್ಕ, ಗಿಡ್ಡಪ್ಪ ಲಮಾಣಿ ಇತರರಿದ್ದರು.