ಪಂ.ದೀನ್ ದಯಾಳ್ ಉಪಾಧ್ಯಾಯ, ಡಾ.ಶ್ಯಾಮ್‌ಪ್ರಸಾದ್ ಮುಖರ್ಜಿ ಭಾವಚಿತ್ರಕ್ಕೆ ಪೂಜೆ
ಯಲಬುರ್ಗಾ: ಭಾರತದ ಭವಿಷ್ಯ ಐಕ್ಯತೆಗೆ ಮತ್ತು ಸರ್ವಾಂಗೀಣ ಪ್ರಗತಿಗೆ ಬಿಜೆಪಿ ಕೊಡುಗೆ ಅಪಾರ ಎಂದು ಪಕ್ಷದ ತಾಲೂಕು ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್ ಹೇಳಿದರು.
ಪಟ್ಟಣದ ಪಕ್ಷದ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ನಿಮಿತ್ತ ದೀನ್ ದಯಾಳ್ ಉಪಾಧ್ಯಾಯ, ಡಾ.ಶ್ಯಾಮ್‌ಪ್ರಸಾದ್ ಮುಖರ್ಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡಿದರು. ಕಮಲ ಪಕ್ಷ ಉದಯಿಸಿ ನಾಲ್ಕು ದಶಕ ಗತಿಸಿವೆ. ಮಾಜಿ ಪ್ರಧಾನಿ ದಿ.ವಾಜಪೇಯಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ವಿಶ್ವಮಟ್ಟಕ್ಕೆ ಪರಿಚಯಿಸುವ ಅದ್ಬುತ ಕೆಲಸ ಮಾಡಿದ್ದಾರೆ. ಪಕ್ಷ ದೇಶದ ಎಲ್ಲ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು. ಕರೊನಾ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ಸೈನಿಕರು, ಪೊಲೀಸರು, ವೈದ್ಯರು, ಆಶಾ ಕಾರ್ಯಕರ್ತೆಯರು, ಮಾಧ್ಯಮದವು, ಪೌರ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸಲು ಒಂದು ದಿನ ಉಪವಾಸ ಆಚರಿಸಲಾಗುವುದು ಎಂದರು.
ಪ್ರಮುಖರಾದ ಸಿದ್ರಾಮೇಶ ಬೆಲೇರಿ, ವಸಂತ ಭಾವಿಮನಿ, ಬಸಲಿಂಗಪ್ಪ ಕೊತ್ತಲ್, ಅಮರೇಶ ಹುಬ್ಬಳ್ಳಿ, ಕಳಕಪ್ಪ ತಳವಾರ್, ಅಶೋಕ ಅರಕೇರಿ, ದೊಡ್ಡಯ್ಯ ಗುರವಿನ್, ಈರಪ್ಪ ಬಣಕಾರ್, ರವೀಂದ್ರ ತೋಟದ್, ಚಂದ್ರು ಮರದಡ್ಡಿ ಸುಭಾಸ್ ಇತರರು ಇದ್ದರು.
ಹಿರೇಮ್ಯಾಗೇರಿ: ತಾಲೂಕಿನ ಹಿರೇಮ್ಯಾಗೇರಿಯ ಮನೆ ಮಾಳಿಗೆ ಮೇಲೆ ಸೋಮವಾರ ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲಾಯಿತು. ಗ್ರಾಪಂ ಸದಸ್ಯದ ಮಹಂತೇಶ ಮಾಡಲಗೇರಿ, ಬಸವರಾಜ ಉಳ್ಳಾಗಡ್ಡಿ, ಪ್ರಮುಖರಾದ ನಿಂಗರಾಜ ಗಾಣಿಗೇರ್, ಭೀಮೆಶ ಬಂಡಿವಡ್ಡರ್, ಕಳಕೇಶ, ಇಬ್ರಾಹಿಂ, ನಾಗರಾಜ, ಪ್ರಕಾಶ ಗಾಣಿಗೇರ್ ಇದ್ದರು.