ಯಲಬುರ್ಗಾ: ಸಮಾಜ ಸುಧಾರಣೆಗೆ ಪೂರ್ವಿಕರು ಶ್ರಮಿಸಿದರು ಆದರೆ, ಈಗಿನ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗುತ್ತಿದೆ ಪ್ರಾಚಾರ್ಯ ಹಮೀದ್‌ಸಾಬ್ ಅತ್ತಾರ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಡಾ.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ಸೋಮವಾರ ಏರ್ಪಡಿಸಿದ್ದ ಸ್ವಾಸ್ಥೃ ಸಂಕಲ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮನಸ್ಸು ಸದೃಢವಿದ್ದಾಗ ಒಳ್ಳೆ ವಿಚಾರಗಳು ಬರುತ್ತವೆ. ಅದಕ್ಕೆ ಚಿತ್ತ ಚಂಚಲವಾಗದಂತೆ ಮನ ನಿಗ್ರಹ ಮಾಡಿಕೊಂಡು ಸಂಸ್ಕಾರಯುತ ಜೀವನ ಸಾಗಿಸಬೇಕು ಎಂದು ತಿಳಿಸಿದರು.
ವೈದ್ಯಾಧಿಕಾರಿ ಶೇಖರ ಭಜಂತ್ರಿ ಮಾತನಾಡಿ, ಸ್ವಾವಲಂಬಿ ಜೀವನ ನಡೆಸಲು ಅನೇಕ ಜನಪರ ಯೋಜನೆಗಳನ್ನು ಧರ್ಮಸ್ಥಳ ಸಂಸ್ಥೆ ಅನುಷ್ಠಾನ ಮಾಡುತ್ತಿದೆ. ಪ್ರತಿಯೊಬ್ಬರ ಆರೋಗ್ಯ ಸದೃಢವಾಗಿರಬೇಕೆಂಬ ನಿಟ್ಟಿನಲ್ಲಿ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಜನಜಾಗೃತಿ ಸಮಿತಿ ಉಪಾಧ್ಯಕ್ಷ ಸಂಗಣ್ಣ ಟೆಂಗಿನಕಾಯಿ, ಸದಸ್ಯರಾದ ಶರಣಬಸಪ್ಪ ದಾನಕೈ, ನವಜೀವನ ಸಮಿತಿ ಅಧ್ಯಕ್ಷ ಸಿದ್ಧಾರೂಢ ಬಾವಿಕಟ್ಟಿ ಮಾತನಾಡಿದರು. ಮೇಲ್ವಿಚಾರಕಿ ಕಾವ್ಯ ಸಿರಿಗೇರಿ ಉಪನ್ಯಾಸ ನೀಡಿದರು.
ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ವೀರಣ್ಣ ನಿಂಗೋಜಿ, ಪ್ರಮುಖರಾದ ವಿ.ಎಸ್. ಶಿವಪ್ಪಯ್ಯನಮಠ, ವಿಜಯಲಕ್ಷ್ಮೀ ವಕ್ಕಳದ, ಬಸವರಾಜ ಹನಸಿ, ಮಹೇಶ ಕೊಳ್ಳಿ, ಮುತ್ತವ್ವ ಕುರಿ, ಮಂಜುನಾಥ ರಾಠೋಡ, ರೇಖಾರೆಡ್ದಿ, ಲಕ್ಷ್ಮೀದೇವಿ ಕುಂಬಾರ, ಶಾಹೀನಾ ಮಕಂದಾರ ಇತರರಿದ್ದರು.