ಯಲಬುರ್ಗಾ ತಹಸೀಲ್ದಾರ್ ಬಸವರಾಜ ತೆನ್ನಳ್ಳಿಗೆ ರೈತರು ಹಾಗೂ ಸಮಾಜವಾದಿ ಪಕ್ಷದ ತಾಲೂಕು ಘಟಕದ ಸದಸ್ಯರು ಶುಕ್ರವಾರ ಮನವಿ ಸಲ್ಲಿಸಿದರು. ಪಕ್ಷದ ತಾಲೂಕು ಅಧ್ಯಕ್ಷ ಸೋಮಲಿಂಗಪ್ಪ ಕೊಳಜಿ, ಪ್ರಮುಖರಾದ ಮಾರುತೆಪ್ಪ ಚಂಡೂರು, ಪ್ರಭುಗೌಡ ಪಾಟೀಲ್, ಸುನೀಲ್‌ರಾವ್, ಸಿದ್ದನಗೌಡ ಪಾಟೀಲ್, ನಿಂಗಜ್ಜ ಖರಡದ, ಶರಣಪ್ಪ, ನಿಂಗಯ್ಯ ಹಿರೇಮಠ ಇದ್ದರು.  
ಜಿಲ್ಲೆ

ಬೆಳೆವಿಮೆ ಯೋಜನೆಯಲ್ಲಿ ಅವ್ಯವಹಾರ

ಯಲಬುರ್ಗಾ: ಬೆಳೆವಿಮೆ ಯೋಜನೆಯಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆ ನಡೆಸುವಂತೆ ಒತ್ತಾಯಿಸಿ ರೈತರು, ಸಮಾಜವಾದಿ ಪಕ್ಷದ ತಾಲೂಕು ಘಟಕದ ಸದಸ್ಯರು ತಹಸೀಲ್ದಾರ್ ಬಸವರಾಜ ತೆನ್ನಳ್ಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಪಕ್ಷದ ತಾಲೂಕು ಅಧ್ಯಕ್ಷ ಸೋಮಲಿಂಗಪ್ಪ ಕೊಳಜಿ ಮಾತನಾಡಿ, ಚಿಕ್ಕಮ್ಯಾಗೇರಿ ಗ್ರಾಪಂ ವ್ಯಾಪ್ತಿಯ ರೈತರ ಪಹಣಿಗೆ ಬೇರೆ ರೈತರ ಖಾತೆ ಸಂಖ್ಯೆ ಸೇರಿಸಿ ಹಣ ಲಪಟಾಯಿಸಲಾಗಿದೆ. ತಹಸೀಲ್ದಾರ್ ತನಿಖೆ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಮಾರುತೆಪ್ಪ ಚಂಡೂರು, ಪ್ರಭುಗೌಡ ಪಾಟೀಲ್, ಸುನೀಲ್‌ರಾವ್, ಸಿದ್ದನಗೌಡ ಪಾಟೀಲ್, ನಿಂಗಜ್ಜ ಖರಡದ, ಶರಣಪ್ಪ, ನಿಂಗಯ್ಯ ಹಿರೇಮಠ, ಬಾಲಪ್ಪ ಗೊಬ್ಬಿ, ಗೌಸುಸಾಬ್ ಜಕ್ಕಲಿ, ಬಸಪ್ಪ ಹರಿಜನ, ಬಸವರಾಜ ಛಲವಾದಿ ಇತರರಿದ್ದರು.