ಯಲಬುರ್ಗಾ ತಾಲೂಕಿನ ಮರಕಟ್‌ನಲ್ಲಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ, ಪ್ರಮುಖರಾದ ಸವರಾಜ ಉಳ್ಳಾಗಡ್ಡಿ, ಶರಣೇಗೌಡ ಪಾಟೀಲ್, ರುದ್ರಪ್ಪ ಮರಕಟ್, ನಿರುಪಾದೆಪ್ಪ ಹುಣಸಿಹಾಳ ಇದ್ದರು. 
ಜಿಲ್ಲೆ

ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಕಲಿಸಿ: ಮಾಜಿ ಸಚಿವ ಬಸವರಾಜ ರಾಯರಡ್ಡಿ ಸಲಹೆ

ಯಲಬುರ್ಗಾ: ಸಾಮೂಹಿಕ ವಿವಾಹಗಳು ಬಡವರ ಆರ್ಥಿಕ ಹೊರೆ ತಗ್ಗಿಸಲು ಸಹಕಾರಿಯಾಗಿವೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಮರಕಟ್ ಗ್ರಾಮದ ಶ್ರೀ ಶರಣಸಬವೇಶ್ವರ ಜಾತ್ರೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೇಕು. ಒಳ್ಳೆಯ ಸಂಸ್ಕಾರ ಪಡೆದು ಇತರರನ್ನು ಗೌರವದಿಂದ ಕಾಣಬೇಕು ಎಂದರು. ಎಂಟು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದವು. ಶಿವನಾಗಯ್ಯಶಾಸ್ತ್ರಿ ಹಿರೇಮಠ, ಅಮರಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು.

ಪ್ರಮುಖರಾದ ಬಸವರಾಜ ಉಳ್ಳಾಗಡ್ಡಿ, ಎ.ಜಿ.ಬಾವಿಮನಿ, ಮಹೇಶ ಹಳ್ಳಿ, ಷಣ್ಮುಖಪ್ಪ ಬಳ್ಳಾರಿ, ರುದ್ರಪ್ಪ ಮರಕಟ್, ಅಮರೇಶಪ್ಪ ಬಳ್ಳಾರಿ, ನಿರುಪಾದೆಪ್ಪ ಹುಣಸಿಹಾಳ, ಶರಣೇಗೌಡ ಪಾಟೀಲ್, ಹನುಮಂತಪ್ಪ ಹುಣಸಿಹಾಳ, ದೊಡ್ಡಪ್ಪ ಮುಸಲಾಪುರ, ನಿಂಗಪ್ಪ ಬಳ್ಳಾರಿ ಇತರರಿದ್ದರು.