ಜಿಲ್ಲೆ

ಸಾವಯವ ಕೃಷಿಯಿಂದ ಭೂಮಿ ಫಲವತ್ತತೆ: ಗ್ರೇಡ್-2 ತಹಸೀಲ್ದಾರ್ ನಾಗಪ್ಪ ಸಜ್ಜನ್ ಹೇಳಿಕೆ

ಶಾಮಸುಂದರ್ ಕೊಪ್ಪಳಕರ್

ಯಲಬುರ್ಗಾ: ರೈತರು ಸಾವಯವ ಕೃಷಿಗೆ ಆದ್ಯತೆ ನೀಡಿದಾಗ ಆರೋಗ್ಯಯುತ ಜೀವನ ನಡೆಸುವುದರ ಜತೆಗೆ ಭೂಮಿಯ ಫಲವತ್ತತೆ ಕಾಪಾಡಬಹುದು ಎಂದು ಗ್ರೇಡ್-2 ತಹಸೀಲ್ದಾರ್ ನಾಗಪ್ಪ ಸಜ್ಜನ್ ಹೇಳಿದರು.

ಚಿಕ್ಕೊಪ್ಪ ಗ್ರಾಮದ ಹೈಟೆಕ್ ನಂದಿ ನರ್ಸರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೃಷಿ-ಖುಷಿ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತೋಟಗಾರಿಕೆ, ಕೃಷಿ ಇಲಾಖೆಗಳ ಮೂಲಕ ಸರ್ಕಾರ ರೈತರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದ್ದು, ಸದುಪಯೋಗ ಪಡೆದುಕೊಳ್ಳಬೇಕು. ಈ ಮೂಲಕ ಕೃಷಿ ಕ್ಷೇತ್ರದಲ್ಲಿ ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಕೃಷಿ ಇಲಾಕೆ ಸಹಾಯಕ ನಿರ್ದೇಶಕ ಪ್ರಾಣೇಶ ಹಾದಿಮನಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಲಿಂಗಣ್ಣವರ್ ಮಾತನಾಡಿ, ತೋಟಗಾರಿಕೆ, ಕೃಷಿ ಚಟುವಟಿಕೆಯಲ್ಲಿ ರೈತರು ತಾಂತ್ರಿಕ, ವೈಜ್ಞಾನಿಕತೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಗತಿಪರ ರೈತರಾದ ಅಂದಾನಗೌಡ ಪಾಟೀಲ್, ರಸೂಲ್‌ಸಾಬ್ ದಮ್ಮೂರು ಮಾತನಾಡಿದರು. ಕೊಪ್ಪಳ ಕೃಷಿ ವಿಸ್ತಾರಣಾ ಶಿಕ್ಷಣ ಕೇಂದ್ರದ ಪ್ರಾಧ್ಯಾಪಕ ವಾಮನಮೂರ್ತಿ, ನಿವೃತ್ತ ಉಪನ್ಯಾಸಕ ಬಿ.ಎ.ಕೆಂಚರೆಡ್ಡಿ, ತಾಪಂ ಸಹಾಯಕ ನಿರ್ದೇಶಕ ಫಕೀರಪ್ಪ ಕಟ್ಟಿಮನಿ, ಹೈಟೆಕ್ ನಂದಿ ನರ್ಸರಿಯ ಶರಣಪ್ಪಗೌಡ ಪಾಟೀಲ್, ಬಿಇಒ ಪದ್ಮನಾಭ ಕರ್ಣಂ, ಪ್ರಮುಖರಾದ ನಾಗಪ್ಪ ವಡ್ಡರ, ಶಂಕರಗೌಡ ಪಾಟೀಲ್, ನಿಂಗನಗೌಡ ಕಳಕವ್ವನವರ್, ಬಸವರಾಜಗೌಡ ಪಾಟೀಲ್, ಬಸವನಗೌಡ ಪಾಟೀಲ್, ಫಕ್ಕೀರಶೆಟ್ಟಿ ಕಜ್ಜಿ, ಜೀವನ್‌ಸಾಬ್ ಸುಂಕದ, ನಾಗರಾಜ ಕಜ್ಜಿ ಇತರರಿದ್ದರು.