ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ನೀಲಮ್ಮ ಶಿವಶಂಕರರಾವ್ ದೇಸಾಯಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಚಿಕ್ಕಮ್ಯಾಗೇರಿ ಹಾಗೂ ವಜ್ರಬಂಡಿ ವಲಯ ಮಟ್ಟದ ಕ್ರೀಡಾಜ್ಯೋತಿಯನ್ನು ಸದಸ್ಯ ಯಮನೂರಪ್ಪ ಕುರಿ ಸ್ವೀಕರಿಸಿದರು. ಜಿಪಂ ಮಾಜಿ ಉಪಾಧ್ಯಕ್ಷ ಶಿವಶಂಕರ ದೇಸಾಯಿ, ತಾಪಂ ಮಾಜಿ ಸದಸ್ಯ ಸುಧಾಕರ ದೇಸಾಯಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವೀರೇಶ ಅಂಗಡಿ, ಪಿಡಿಒ ವೆಂಕಟೇಶ ನಾಯಕ ಇದ್ದರು. 
ಜಿಲ್ಲೆ

ಸೋಲು-ಗೆಲುವು ಸಮನಾಗಿ ಸ್ವೀಕರಿಸಿ

ಪ್ರವೀಣ ಉದುಸಾ ದಲಬಂಜನ್

ಯಲಬುರ್ಗಾ: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಸೋಲು ಗೆಲುವು ಸಮನಾಗಿ ಸ್ವೀಕರಿಸಬೇಕು ಎಂದು ಭೂಮಿದಾನಿ ಹೇಮಂತಕುಮಾರ್ ಶಿವಶಂಕರರಾವ್ ದೇಸಾಯಿ ಹೇಳಿದರು.

ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ನೀಲಮ್ಮ ಶಿವಶಂಕರರಾವ್ ದೇಸಾಯಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಚಿಕ್ಕಮ್ಯಾಗೇರಿ ಹಾಗೂ ವಜ್ರಬಂಡಿ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಸದೃಢ ದೇಹದಲ್ಲಿ ಉತ್ತಮ ಮನಸ್ಸಿರಬೇಕಾದರೆ ಕ್ರೀಡೆ ಅತ್ಯವಶ್ಯ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರ ಜತೆಗೆ ವಿದ್ಯಾಭ್ಯಾಸ ಮಾಡುವ ಮೂಲಕ ತಾಲೂಕಿಗೆ ಕೀರ್ತಿ ತರಬೇಕು ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಶಿವಶಂಕರ ದೇಸಾಯಿ, ತಾಪಂ ಮಾಜಿ ಸದಸ್ಯ ಸುಧಾಕರ ದೇಸಾಯಿ, ಮುಖ್ಯಶಿಕ್ಷಕ ಸುರೇಶ ವೇದಪಾಠಕ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಈರಪ್ಪ ಕುಡಗುಂಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಶರಣಪ್ಪ ಕುರಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸದಸ್ಯ ಯಮನೂರಪ್ಪ ಕುರಿ ಕ್ರೀಡಾಜ್ಯೋತಿ ಸ್ವೀಕರಿಸಿದರು.

ಗ್ರಾಪಂ ಸದಸ್ಯ ಶರಣಕುಮಾರ ಅಮರಗಟ್ಟಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವೀರೇಶ ಅಂಗಡಿ, ಪಿಡಿಒ ವೆಂಕಟೇಶ ನಾಯಕ, ನೌಕರ ಸಂಘದ ತಾಲೂಕು ಅಧ್ಯಕ್ಷ ವೈ.ಜಿ.ಪಾಟೀಲ್, ಮಾಜಿ ಸೈನಿಕರಾದ ಜಗದೀಶಯ್ಯ ಮ್ಯಾಗಳಮಠ, ಶಿವಶಂಕರ್ ಮೇಣಸಿಗೇರಿ, ಮುಖಂಡರಾದ ಗುರುಸಿದ್ದಪ್ಪ ದೇಸಾಯಿ, ಮಾರುತಿ ಚಂಡೂರು, ವೀರಪ್ಪ ಅಂಗಡಿ, ಸೂಗಿರಪ್ಪ ಬಳಗೇರಿ, ಯಮನೂರ್‌ಸಾಬ್ ನಧಾಪ್, ಶರಣಪ್ಪ ಹಾದಿಮನಿ, ಪ್ರಭು ಮೇಟಿ, ಬಾಲಪ್ಪ ಕವಳಕೇರಿ, ಗೂಳಪ್ಪ ರೊಡ್ಡರ ಇತರರಿದ್ದರು.