ಯಲಬುರ್ಗಾದಲ್ಲಿ ಭಗೀರಥ ಮಹರ್ಷಿ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ವಿಠಲ್ ಚೌಗಲೆ, ತಾಪಂ ಇಒ ಸಂತೋಷ್ ಪಾಟೀಲ್, ಭಗೀರಥ ಸಮುದಾಯದ ಅಧ್ಯಕ್ಷ ಈರಪ್ಪ ದಸ್ತಾನಿ, ಪ್ರಮುಖರಾದ ಬಸವರಾಜ ಪೂಜಾರ್, ವೈ.ಬಿ.ಮೇಟಿ, ಶರಣಪ್ಪ ಇತರರಿದ್ದರು. 
ಜಿಲ್ಲೆ

ಭಗೀರಥ ಮಹರ್ಷಿ, ಛಲ ಮತ್ತು ದೃಢ ಸಂಕಲ್ಪದ ಪ್ರತೀಕ

ಯಲಬುರ್ಗಾ: ಛಲ ಮತ್ತು ದೃಢ ಸಂಕಲ್ಪದ ಪ್ರತೀಕವಾದ ಭಗೀರಥ ಮಹರ್ಷಿ ಆದರ್ಶವನ್ನು ಎಲ್ಲರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ವಿಠಲ್ ಚೌಗಲೆ ಹೇಳಿದರು.

ಪಟ್ಟಣದಲ್ಲಿ ಭಗೀರಥ ಸಮುದಾಯ ಮತ್ತು ತಾಲೂಕು ಆಡಳಿತ ಗುರುವಾರ ಹಮ್ಮಿಕೊಂಡಿದ್ದ ಭಗೀರಥ ಮಹರ್ಷಿ ಜಯಂತಿ ನಿಮಿತ್ತ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾತ್ಮರನ್ನು ಗೌರವದಿಂದ ಕಾಣಬೇಕು. ಮನುಷ್ಯನಿಗೆ ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ಭಗೀರಥ ಮಹರ್ಷಿ ಸಾಕ್ಷಿಯಾಗಿದ್ದಾರೆ. ಮನುಕುಲದ ಒಳಿತಿಗಾಗಿ ಸತತ ತಪಸ್ಸಿನ ಮೂಲಕ ಭೂಮಿಗೆ ಗಂಗೆಯನ್ನು ಕರೆ ತರುವಲ್ಲಿನ ಅವರ ಶ್ರಮ ಎಂದಿಗೂ ಮರೆಯುವಂತಿಲ್ಲ. ಇಂತಹ ಶರಣರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸಾರ್ಥಕತೆ ಸಾಧ್ಯ ಎಂದರು.

ಕುಷ್ಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಭಗೀರಥ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಡಾ.ಎಸ್.ವಿ. ಡಾಣಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಅಶೋಕ ಕೆಂಚರಡ್ಡಿ, ಕನ್ನಡ ವಿಭಾಗದ ಮುಖ್ಯಸ್ಥ ಎಚ್.ರವಿ, ಉಪನ್ಯಾಕರಾದ ವೀರಣ್ಣ ದ್ಯಾಮವ್ವನಗುಡಿ, ಭೀಮಣ್ಣ, ರಾಘವೇಂದ್ರ ಪತ್ತಾರ, ಹನುಮಗೌಡ ಪಾಟೀಲ್, ಸಕ್ಕೂಬಾಯಿ ಕಬಾಡಿ, ರಾಜಶೇಖರ ಕಲಕಬಂಡಿ, ಎಸ್.ಸಿ.ಬಂಡಿಹಾಳ, ಪಂಪಾಪತಿ, ನಿಂಗಪ್ಪ ಗೋಟೂರು, ಸುರೇಶ ಪಲ್ಲಿ, ಚೌಡಪ್ಪ ಇದ್ದರು.

ಭಗೀರಥ ಸಮುದಾಯದ ತಾಲೂಕು ಅಧ್ಯಕ್ಷ ಈರಪ್ಪ ದಸ್ತಾನಿ, ತಾಪಂ ಇಒ ಸಂತೋಷ್ ಪಾಟೀಲ್, ಪ್ರಮುಖರಾದ ಬಸವರಾಜ ಪೂಜಾರ್, ವೈ.ಬಿ.ಮೇಟಿ, ಶರಣಪ್ಪ ಉಪ್ಪಾರ್, ಹನುಮಂತಪ್ಪ ಕೆರಳ್ಳಿ, ಮೈಲಾರಪ್ಪ ಚಾಮಲಾಪುರ, ಯಲ್ಲಪ್ಪ ಮಡಿಕೇರಿ, ಕರಿಯಪ್ಪ ಗುರಿಕಾರ, ಆನಂದ ಮುದಕಪ್ಪ, ರಾಮನಗೌಡ, ಶಿವಕುಮಾರ ಇತರರಿದ್ದರು.