ತೊಂಡಿಹಾಳದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚೆಂಡೂರು, ಮುಖಂಡರಾದ ವೀರನಗೌಡ ಬಳೂಟಗಿ, ಯಂಕಣ್ಣ ಯರಾಶಿ, ಕೆರಿಬಸಪ್ಪ ಇದ್ದರು. 
ಜಿಲ್ಲೆ

ಬಿಜೆಪಿಯವರಿಂದ ಅಪಪ್ರಚಾರ

Gangavati - Desk - Veeresh S Ullagaddi

ಯಲಬುರ್ಗಾ: ಕಳೆದ ಚುನಾವಣೆಯಲ್ಲಿ ನನ್ನ ಬಗ್ಗೆ ಬಿಜೆಪಿಯವರು ಅಪಪ್ರಚಾರ ಮಾಡಿದ್ದರಿಂದ ಸೋಲಬೇಕಾಯಿತು. ಈ ಸಲ ಅಂಥ ಮಾತುಗಳಿಗೆ ಜನ ಕಿವಿಗೊಡಲ್ಲ ಎಂಬ ವಿಶ್ವಾಸವಿದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ತೊಂಡಿಹಾಳ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಹಾಲಿ ಸಚಿವ ಹಾಲಪ್ಪ ಆಚಾರ್ ಏನು ಮಾಡಿದ್ದಾರೆ ಎಂಬುದು ಜನರು ನೋಡುತ್ತಿದ್ದಾರೆ. ನಾನು ಜಾತಿವಾದಿ, ಅವಕಾಶವಾದಿಯೂ ಅಲ್ಲ. ಜನರ ಏಳಿಗೆಗಾಗಿ ಅಭಿವೃದ್ಧಿ ಬಯಸುವ ವ್ಯಕ್ತಿ. ಕಾಂಗ್ರೆಸ್ ನಾಡಿನ ಜನತೆಗೆ ನಾಲ್ಕು ಉಚಿತ ಗ್ಯಾರಂಟಿ ಕಾರ್ಯಕ್ರಮಗಳನ್ನು ಘೋಷಿಸಿದೆ. ಅಧಿಕಾರಕ್ಕೆ ಬಂದ ತಕ್ಷಣವೇ ಯೋಜನೆ ಜಾರಿಗೆ ಬರಲಿವೆ ಎಂದರು.

ಕಾಂಗ್ರೆಸ್‌ಗೆ ಸೇರ್ಪಡೆ: ಬಿಜೆಪಿ ತೊರೆದ ಕಲ್ಲಪ್ಪ ರಾಮನಗೌಡ, ಶಿವಾನಂದ ಡೊಳ್ಳಿನ, ನಿಂಗನಗೌಡ ಕರಿಗೌಡ್ರು, ಆನಂದ, ರವಿ ಡೊಳ್ಳಿನ, ಚನ್ನಪ್ಪ ಬೊಮ್ಮನಾಳ, ನವೀನ, ರವಿಗೌಡ ಪಾಟೀಲ್ ಸೇರಿದಂತೆ ಅನೇಕರು ಕಾಂಗ್ರೆಸ್ ಸೇರ್ಪಡೆಯಾದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚೆಂಡೂರು, ಮುಖಂಡರಾದ ವೀರನಗೌಡ ಬಳೂಟಗಿ, ಯಂಕಣ್ಣ ಯರಾಶಿ, ಕೆರಿಬಸಪ್ಪ ನಿಡಗುಂದಿ, ಶೇಖರಗೌಡ ಪಾಟೀಲ್, ಎ.ಜಿ.ಬಾವಿಮನಿ, ಆನಂದ ಉಳ್ಳಾಗಡ್ಡಿ, ಶರಣಪ್ಪ ಗಾಂಜಿ, ಶಿವನಗೌಡ ದಾನರೆಡ್ಡಿ, ಮಲ್ಲು ಜಕ್ಕಲಿ, ಶಿವಾನಂದ ಬಣಕಾರ, ಶರಣಗೌಡ ಬಸಾಪೂರು, ಕಳಕೇಶ ಸೂಡಿ ಇತರರಿದ್ದರು.