ಜಿಲ್ಲೆ

ಕ್ರಿಯಾಶೀಲ ಪ್ರವೃತ್ತಿಯಿಂದ ಬದಲಾವಣೆ

ಬಿಇಒ ಪದ್ಮನಾಭ ಕರ್ಣಂ ಅಭಿಮತ

ಯಲಬುರ್ಗಾ: ಶಿಕ್ಷಕರು ಕ್ರಿಯಾಶೀಲ ಪ್ರವೃತ್ತಿ ಬೆಳೆಸಿಕೊಂಡಾಗ ಸರ್ಕಾರಿ ಶಾಲೆಗಳಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಬಿಇಒ ಪದ್ಮನಾಭ ಕರ್ಣಂ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ನಂ.2 ಶಾಲೆಯಲ್ಲಿ ವಿಶ್ವಬಂಧು ಸೇವಾ ಗುರುಬಳಗ ಏರ್ಪಡಿಸಿದ್ದ ಗೋಡೆ ಬರಹ ಕಾರ್ಯ ಕ್ರಮದಲ್ಲಿ ಮಾತನಾಡಿದರು. ರಜಾ ದಿನಗಳಲ್ಲಿ ವಿನೂತನ ಕಾರ್ಯಕ್ರಮ ಹಾಗೂ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗುರುಬಳಗದ ಕಾರ್ಯ ಶ್ಲಾಘನೀಯ ಎಂದರು.

ಗುರುಬಳಗದ ಮುಖ್ಯಸ್ಥ ಸಿದ್ದಲಿಂಗಪ್ಪ ಶ್ಯಾಗೋಟಿ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಧರಣಾ ಮಾತನಾಡಿದರು. ಗೋಡೆ ಬರಹ ಸೇವೆಗೈದ ಕಳಕೇಶ ಬಳಿಗಾರ, ವೀರೇಶ ಮ್ಯಾಗಳೇಶಿ, ಮಲ್ಲಿಕಾರ್ಜುನ ಕುಂಬಾರ, ಅಮರೇಶ ಕೋಲಾರ, ಸಂತೋಷ ಕೋರಿ, ವಿನಯಕುಮಾರ ಪಾಟೀಲ್, ಶರಣು ಗಾಣದಾಳ, ನಾಗರಾಜ ಪಟಗಾರ, ವಸಂತಕುಮಾರ, ಶಿವಪ್ಪ ಕೃಷ್ಣಾಪುರ, ಪರಮೇಶ ಚಿಂತಾಮಣಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ರಾಮಣ್ಣ ಭಜಂತ್ರಿ, ಬಸವರಾಜ ಮುಳಗುಂದ, ಮಹಾವೀರ ಕಲ್ಭಾವಿ, ಸಿದ್ದಪ್ಪ ಸಜ್ಜಗಾರ, ಮಹಾಂತೇಶ ಹಿರೇಮಠ, ಪ್ರಭಯ್ಯ ಬಳಗೇರಿಮಠ, ಬಾಷಾ ಅಲಿ, ಮರ್ದಾನ್‌ಸಾಬ್ ನದಾಫ್, ಶಿವರುದ್ರಪ್ಪ, ಶಿವಕುಮಾರ ಮುತ್ತಾಳ, ಮುರ್ತುಜಾಸಾಬ್ ಮುಜಾವರ, ಬಸವರಾಜ ಬಿಲ್ಲಾರ ಇತರರಿದ್ದರು.