ಯಲಬುರ್ಗಾ ತಾಲೂಕಿನ ಮರಕಟ್‌ನಲ್ಲಿ ಹಮ್ಮಿಕೊಂಡಿದ್ದ ವಚನ ಚಿಂತನಗೋಷ್ಠಿ ಹಾಗೂ ಬಸವ ಜಯಂತಿ ಕಾರ್ಯಕ್ರಮವನ್ನು ಬಸವ ಯೋಗಾಶ್ರಮದ ಅಲ್ಲಮಪ್ರಭು ಸ್ವಾಮೀಜಿ ಉದ್ಘಾಟಿಸಿದರು. ಜೇವರ್ಗಿಯ ಸಿದ್ಧಬಸವ ಕಬೀರ ಸ್ವಾಮೀಜಿ, ರಾಯಚೂರು ಬಸವಕೇಂದ್ರದ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಕುರಕುಂದಿ, ಕೊಪ್ಪಳದ ರಾಜೇಶ ಸಸಿಮಠ, ಬಸವರಾಜಪ್ಪ ಇಂಗಳದಾಳ ಇದ್ದರು. 
ಜಿಲ್ಲೆ

ಸಂತೃಪ್ತ ಬದುಕಿಗೆ ವಚನ ಸಾಹಿತ್ಯ ಅವಶ್ಯ, ಅಲ್ಲಮಪ್ರಭು ಶ್ರೀ ಹೇಳಿಕೆ

ಯಲಬುರ್ಗಾ: ಸಮಾನತೆಯ ಹರಿಕಾರ, ಮಹಾಮಾನವತಾವಾದಿ ಬಸವಣ್ಣನವರ ಆದರ್ಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಬಸವ ಯೋಗಾಶ್ರಮದ ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

ತಾಲೂಕಿನ ಮರಕಟ್ಟ ಗ್ರಾಮದ ಬಸವಕೇಂದ್ರ ಶಿವಯ್ಯ ಸ್ವಾಮೀಜಿ ಸ್ಮರಣಾರ್ಥ ಹಮ್ಮಿಕೊಂಡಿದ್ದ 221ನೇ ವಚನ ಚಿಂತನಗೋಷ್ಠಿ ಹಾಗೂ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ಬಸವಣ್ಣ ಪರಿಪೂರ್ಣ ವ್ಯಕ್ತಿತ್ವವುಳ್ಳ ಧೀಮಂತ ನಾಯಕರಾಗಿದ್ದು ಮಹಿಳೆಯರು, ಕೆಳ ವರ್ಗದವರ ಧ್ವನಿಯಾಗಿದ್ದಾರೆ. ಮೊಟ್ಟ ಮೊದಲ ಬಾರಿಗೆ ಪ್ರಜಾಪ್ರಭುತ್ವದ ಕಲ್ಪನೆ ಕೊಟ್ಟು, ಅನುಭವ ಮಂಟಪದ ಮೂಲಕ ಚರ್ಚೆಗೆ ವೇದಿಕೆ ಒದಗಿಸಿದ್ದಾರೆ. ಕಾಣದ ದೇವರನ್ನು ಹುಡುಕುವದಕ್ಕಿಂತ ಇಷ್ಟಲಿಂಗ ಧರಿಸಿ ಪೂಜೆಗೈದರೆ ಮಾನಸಿಕ ನೆಮ್ಮದಿ ಪಡೆಯಬಹುದು. ಸಂತೃಪ್ತ ಬದುಕಿಗೆ ವಚನ ಸಾಹಿತ್ಯದ ಅವಶ್ಯವಿದೆ ಎಂದರು.

ಜೇವರ್ಗಿಯ ಸಿದ್ಧಬಸವ ಕಬೀರ ಸ್ವಾಮೀಜಿ, ರಾಯಚೂರು ಬಸವಕೇಂದ್ರದ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಕುರಕುಂದಿ, ಕೊಪ್ಪಳದ ರಾಜೇಶ ಸಸಿಮಠ, ಬಸವರಾಜಪ್ಪ ಇಂಗಳದಾಳ, ಅಮರೇಶಪ್ಪ ಗಡಿಹಳ್ಳಿ, ಅಮರೆಶಪ್ಪ ಬಳ್ಳಾರಿ, ರುದ್ರಪ್ಪ ಹಳ್ಳಿ, ಹನುಮಗೌಡ ಬಳ್ಳಾರಿ, ಬಸವನಗೌಡ, ನಾಗನಗೌಡ ಜಾಲಿಹಾಳ, ರೇಣುಕಪ್ಪ ಮಂತ್ರಿ, ರುದ್ರಪ್ಪ ಮರಕಟ್ಟ, ದೇವಪ್ಪ ಕೋಳೂರು, ಪಂಪಣ್ಣ ಯರದೊಡ್ಡಿ, ಸಂಗಮೇಶ ಹುಣಶಿಹಾಳ ಇತರರಿದ್ದರು.