ಯಲಬುರ್ಗಾದ ತಾಪಂ ಕಚೇರಿಯಲ್ಲಿ ಡಾ.ಬಾಬು ಜಗಜೀವನ ರಾಮ್ ಜಯಂತಿ ಆಚರಿಸಲಾಯಿತು. ತಾಪಂ ಇಒ ಸಂತೋಷ ಪಾಟೀಲ್, ಲೆಕ್ಕಾಧಿಕಾರಿ ಹಜರತ್ ಅಲಿ, ವ್ಯವಸ್ಥಾಪಕ ಚಂದ್ರಶೇಖರ ಹಿರೇಮಠ, ಸಿಬ್ಬಂದಿ ಬಸವರಾಜ ಹಳ್ಳಿ ಇತರರಿದ್ದರು.  
ಜಿಲ್ಲೆ

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ

Gangavati - Desk - Veeresh S Ullagaddi

ಯಲಬುರ್ಗಾ: ಹಸಿರು ಕ್ರಾಂತಿಯ ಹರಿಕಾರ, ಸಮಾಜ ಸುಧಾರಕ ಬಾಬು ಜಗಜೀವನ ರಾಮ್ ಆದರ್ಶ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದು ತಾಪಂ ಇಒ ಸಂತೋಷ ಪಾಟೀಲ್ ಹೇಳಿದರು.

ಪಟ್ಟಣದ ತಾಪಂ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗಜೀವನ್ ರಾಮ್ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಹಾಗೂ ದಕ್ಷ ಆಡಳಿತಗಾರರಾಗಿದ್ದರು. ಸಮಾಜ ಸುಧಾರಣೆ ಹಾಗೂ ಎಲ್ಲರೂ ಸಮಾನವಾಗಿ ಜೀವನ ನಡೆಸಬೇಕು ಎನ್ನುವ ಮಹತ್ವಾಕಾಂಕ್ಷೆ ಹೊಂದಿದ್ದರು. ದೇಶದ ಜನರು ಆಹಾರ ಕೊರತೆ ಅನುಭವಿಸುತ್ತಿರುವುದನ್ನು ಕಂಡು ಹಸಿರುಕ್ರಾಂತಿ ಪ್ರಾರಂಭಿಸಿ ನೆರವಾದರು ಎಂದರು. ಸಿಬ್ಬಂದಿಗಳಾದ ಬಸವರಾಜ ಮಾಲಿಪಾಟೀಲ್, ಶೇಖಪ್ಪ ಉಪ್ಪಾರ, ಶರಣಪ್ಪ ಇಂಡಿ, ಪವನ್, ರತ್ನಾ, ಪ್ರಶಾಂತ ಬಡಿಗೇರ್, ಉಮೇಶ ಇತರರಿದ್ದರು.