ಯಲಬುರ್ಗಾ: ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಉಳಿವಿಗಾಗಿ ರಜಾ ದಿನಗಳಲ್ಲಿ ಶಾಲೆಗಳಿಗೆ ಬಣ್ಣ ಬಳಿದು ಸುಂದರಗೊಳಿಸುವ ಕಾರ್ಯ ಪರಿಸರ ಪ್ರೇಮ ತಂಡದಿಂದ ನಡೆಯುತ್ತಿದೆ ಎಂದು ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.
ತಾಲೂಕಿನ ಹೊಸೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಪ್ರೇಮ ತಂಡದಿಂದ ಶಾಲೆಗೆ ಬಣ್ಣ ಹಚ್ಚುವ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಬಣ್ಣ ಬಳಿಯುವ ಜತೆಗೆ ಮಕ್ಕಳ ಕಲಿಕೆಗೆ ಉತ್ತೇಜನ ನೀಡುವ ಆಸಕ್ತಿ ಮೂಡಿಸುವಂಥ ಆಕರ್ಷಕ ಚಿತ್ರ ಬಿಡಿಸಲಾಗುತ್ತಿದೆ. ಸರ್ಕಾರಿ ಶಾಲೆ ಉಳಿವು, ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ಕಾರ್ಯಕ್ರಮ ಮೂಲಕ ಜಾಗೃತಿ ಮೂಡಿಸುವ ಸಮಾಜಮುಖಿ ಕಾರ್ಯ ಮಾಡಲಾಗುತ್ತಿದೆ ಎಂದರು. ಶಾಲಾ ಆವರಣದಲ್ಲಿ ಸಸಿ ನೆಟ್ಟು ಅವುಗಳ ಪೋಷಣೆ ಸಲುವಾಗಿ ವಿದ್ಯಾರ್ಥಿಗಳಿಗೆ ದತ್ತು ನೀಡಲಾಯಿತು.
ಹಿರೇಅರಳಿಹಳ್ಳಿ ಗ್ರಾಪಂ ಅಧ್ಯಕ್ಷೆ ದೇವಮ್ಮ ಶರಣಪ್ಪ ಭೂತಲ್, ಸದಸ್ಯರಾದ ಹುಚ್ಚಪ್ಪ ತಳವಾದ್, ರವಿಚಂದ್ರ ಭಾವಿಕಟ್ಟಿ, ಪಿಡಿಒ ಸೋಮಪ್ಪ ಪೂಜಾರ, ಎಸ್ಡಿಎಂಸಿ ಅಧ್ಯಕ್ಷ ಶಂಕರ ಮೂಲಿಮನಿ, ಪ್ರಮುಖರಾದ ಸಂಗನಗೌಡ ಪಾಟೀಲ್, ಲೋಕನಗೌಡ ಪೊಲೀಸ್ ಪಾಟೀಲ್, ರಾಮನಗೌಡ ಪಾಟಿಲ್, ಶರಣಗೌಡ ಗೌಡ್ರ ಹನುಮೇಶ ಮೂಲಿಮನಿ, ಮುಖ್ಯಶಿಕ್ಷಕ ಸಂಗಯ್ಯ ಹಿರೇಮಠ, ಶಿಕ್ಷಕರಾದ ಮುತ್ತಪ್ಪ ಪಮ್ಮಾರ, ಮಮತಾ.ಕೆ., ಲಕ್ಷ್ಮೀ ದುಂಡಸಿ, ಅನ್ನಪೂರ್ಣ ನಾಗೂರ, ನಂದಿನಿ ಮಾಲಿಪಾಟೀಲ್, ವಿಶಾಲಾಕ್ಷಿ ಮೂಲಿಮನಿ, ಸುವರ್ಣ ಇತರರಿದ್ದರು.