ಯಲಬುರ್ಗಾ: ವಚನಕಾರ ಬಸವಣ್ಣರಂತೆ ಸಮ ಸಮಾಜದ ಒಳಿತಿಗಾಗಿ ಹಾನಗಲ್ ಕುಮಾರಸ್ವಾಮಿ ಶ್ರಮಿಸಿದರು ಎಂದು ಶಿವಯೋಗಮಂದಿರ-ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.
ಚಿಕ್ಕೊಪ್ಪ ಗ್ರಾಮದಲ್ಲಿ ಹಾನಗಲ್ ಕುಮಾರ ಶ್ರೀಗಳ 155ನೇ ಜಯಂತಿ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರೂ ಗಳಿಸಿದ್ದರಲ್ಲಿ ಸಮಾಜಕ್ಕೆ ದಾನ ಧರ್ಮ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು. ಶರಣರ ಕುರಿತ ಪ್ರವಚನ ಆಲಿಸುವುದರಿಂದ ನೆಮ್ಮದಿ ಸಿಗುತ್ತದೆ ಎಂದರು. ಕರುಣೆಯ ಗೋಡೆ ಸಾಮಾಜಿಕ ಸೇವೆಗೆ ಸಜ್ಜಾಗಿದೆ. ಬಡವರು, ಹಿಂದುಳಿದವರಿಗೆ ಇದು ಸಹಕಾರಿಯಾಗಲಿದೆ. ಬೇಡವಾದ ವಸ್ತು ಬಿಸಾಡುವ ಬದಲು ಕರುಣೆಯ ಗೋಡೆಗೆ ಸಲ್ಲಿಸಬೇಕು. ಅಂದಾಗ ಬಡವರ ಬದುಕಿನ ಗೋಡೆಯಾಗಿ ಪರಿವರ್ತನೆಯಾಗಲಿದೆ. ಎಲ್ಲರಲ್ಲೂ ನಿಸ್ವಾರ್ಥದ ಸೇವೆ ಇರಬೇಕು ಎಂದ ತಿಳಿಸಿದರು. ಪ್ರವಚನಕಾರ ಅನ್ನದಾನೇಶ್ವರ ಶಾಸ್ತ್ರಿಗಳು, ಸಂಗೀತ ಕಲಾವಿದ ಮಲ್ಲಿಕಾರ್ಜುನ ಹಿರೇಗೌಡ್ರ, ಪ್ರಮುಖರಾದ ಶೇಖರಗೌಡ ಪಾಟೀಲ್, ನಾಗಪ್ಪ ವಡ್ಡರ, ಶಂಕರಗೌಡ ದ್ಯಾಂಪುರ, ಬಸನಗೌಡ ದಳಪತಿ, ಫಕೀರಶೆಟ್ಟಿ ಕಜ್ಜಿ, ಬಸಯ್ಯ ಬೆಣಕಲ್, ಸಿದ್ದಪ್ಪ, ಮಲ್ಕಾಜಪ್ಪ, ಶರಣಪ್ಪ ಕೊಪ್ಪಳ, ತಿಪ್ಪಣ್ಣ ಹಡಗಲಿ, ಗೂಳಪ್ಪ ಮೇಟಿ, ದೊಡ್ಡಪ್ಪ ನಾಗನಗೌಡ್ರ, ಅಂದಪ್ಪ ಹಕಾರಿ ಇತರರಿದ್ದರು.