ಜಿಲ್ಲೆ

ಅ.21 ರಿಂದ 27ರ ತನಕ ಯಕ್ಷಗಾನ ಸಪ್ತಾಹ

ಇಂದಿರಾ ಎನ್ ಕೆ

ಕೋಟ: ಹಂಗಾರಕಟ್ಟೆ-ಐರೋಡಿ ಯಕ್ಷಗಾನ ಕಲಾಕೇಂದ್ರ ವತಿಯಿಂದ ಅ.21ರಿಂದ 27ರ ತನಕ ಸದಾನಂದ ರಂಗ ಮಂಟಪದಲ್ಲಿ ಯಕ್ಷಸಪ್ತೋತ್ಸವ ನಡೆಯಲಿದೆ. 21ರಂದು ಸಂಜೆ 5ಕ್ಕೆ ಶ್ರೀ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು ಉದ್ಘಾಟಿಸಲಿದ್ದಾರೆ.

ಪ್ರತಿನಿತ್ಯ 5ಗಂಟೆಯಿಂದ ಉಪನ್ಯಾಸ, ಸಭಾಕಾರ್ಯಕ್ರಮ, ಕಲಾಕೇಂದ್ರದ ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ಬರುವ ತರತರಹದ ಯುದ್ಧ ಕುಣಿತಗಳು, ಸಾಂಪ್ರದಾಯಿಕ ಪೂರ್ವರಂಗ ಕುಣಿತಗಳು ನಂತರ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ.

ಕಳೆದ ಎರಡು ವರ್ಷಗಳಿಂದ ಮಹಾಭಾರತ, ರಾಮಾಯಣಗಳಿಂದ ಆರಿಸಲ್ಪಟ್ಟ ಅಪರೂಪದ ಪ್ರಸಂಗ ಪ್ರದರ್ಶಿಸಲ್ಪಟ್ಟಿದ್ದು ಈ ವರ್ಷ ಶ್ರೀಕೃಷ್ಣ ಚರಿತದ ಅಪರೂಪದ ಪ್ರಸಂಗಗಳಾದ ಶ್ರೀ ಕೃಷ್ಣ ಜನ್ಮ, ಕಾಲಯವನ ಸಂಹಾರ, ಪ್ರದ್ಯುಮ್ನ ವಿಜಯ, ಶ್ಯಮಂತಕ ವಿಲಾಸ, ಉಷಾ ಪರಿಣಯ, ಗಾಂಧಾರಿ ಶಾಪ, ಕೃಷ್ಣ ಪರಂಧಾಮ ಕಥಾನಕಗಳು ಪ್ರದರ್ಶಿಸಲಡುತ್ತವೆ ಎಂದು ಕಲಾಕೇಂದ್ರ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.