ಜಿಲ್ಲೆ

Yakshagana: ಜ.17 ರಂದು ಹೊನ್ನಾವರದಲ್ಲಿ ಚಂಡೆಯ ಪೆಟ್ಟಿಗೆ ಹೆಜ್ಜೆ ಹಾಕಲಿದ್ದಾರೆ ನಟಿ ಉಮಾಶ್ರೀ!!

Uttara Kannada - Subash Hegde

ಕಾರವಾರ /Yakshagana: ಕನ್ನಡ ಸಿನೆಮಾ ರಂಗದ ಖ್ಯಾತ ಅಭಿನೇತ್ರಿ ಡಾ. ಉಮಾಶ್ರಿ. ಕನ್ನಡದ 125 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿ ಹೆಸರಾದ ಕಲಾವಿದೆ. ರಂಗಭೂಮಿ, ಕಿರುತೆರೆಯಲ್ಲೂ ಅವರ ಹೆಜ್ಜೆ ಗುರುತುಗಳು ಅಚ್ಚಳಿಯದೇ ಉಳಿದಿವೆ. ಈಗ ಮೊದಲ ಬಾರಿಗೆ ಅವರು ಯಕ್ಷಗಾನದಲ್ಲಿ ಹೆಜ್ಜೆ ಹಾಕಲಿದ್ದಾರೆ.

ಹೌದು, ಜಿಲ್ಲೆಯ ಹೊನ್ನಾವರ ಪ್ರಭಾತ ನಗರದ ಸೇಂಟ್ ಅಂತೋನಿ ಮೈದಾನದಲ್ಲಿ ಯಕ್ಷ ಅಭಿಮಾನಿ ಬಳಗದಿಂದ ಆಯೋಜಿಸಿರುವ ಪೆರ್ಡೂರಿನ ಅನಂತ ಪದ್ಮನಾಭ ಯಕ್ಷಗಾನ ಮಂಡಳಿಯ ಯಕ್ಷಗಾನದಲ್ಲಿ ಅವರು ಅಭಿನಯಿಸಲಿದ್ದಾರೆ.

ಜ.17 ರಂದು ರಾತ್ರಿ 9.30 ರಿಂದ ಶ್ರೀರಾಮ ಪಟ್ಟಾಭಿಷೇಕ, ಮಾಯಾಮೃಗಾವತಿ ಪ್ರಸಂಗಗಳು ಪ್ರದರ್ಶನಗೊಳ್ಳಲಿದೆ. ಯಕ್ಷಗಾನದ ಪ್ರಸ್ತುತ ಖ್ಯಾತ ಕಲಾವಿದರಾದ ಕಾರ್ತಿಕ ಚಿಟ್ಟಾಣಿ, ಉದಯ ಹೆಗಡೆ ಕಡಬಾಳ, ವಿನಯ ಬೇರೊಳ್ಳಿ, ಅಣ್ಣಪ್ಪ ಗೌಡ ಮಾಗೋಡು ಮುಂತಾದ ಕಲಾವಿದರು. ಪಾಲ್ಗೊಳ್ಳುವರು.

Yakshagana

ಶ್ರೀರಾಮನ ಪಟ್ಟಾಭಿಷೇಕದಲ್ಲಿ ಡಾ.ಉಮಾಶ್ರೀ ಅವರು ಮಂತರೆಯಾಗಿ ಅಭಿನಯಿಸಲಿದ್ದಾರೆ. ಸಾಮಾನ್ಯವಾಗಿ ಯಕ್ಷಗಾನದಲ್ಲಿ ಪುರುಷರೇ ಹೆಣ್ಣು ವೇಷ ಧರಿಸಿ, ಮಂತರೆ ಎಂಬ ಮುದುಕಿಯ ಪಾತ್ರ ವಹಿಸಲಿದ್ದಾರೆ. ನಂತರ ಅವರನ್ನು ಸನ್ಮಾನ ಮಾಡಲಾಗುವುದು ಎಂದು ಆಯೋಜಕ ಅಪ್ಪಿ ಹೆಗಡೆ ಸಣ್ಮನೆ ತಿಳಿಸಿದ್ದಾರೆ.