ಜಿಲ್ಲೆ

ಶಿವಳ್ಳಿ ತುಳುವಿನಲ್ಲಿ ಯಕ್ಷಗಾನ ತಾಳಮದ್ದಳೆ

ಕಾರ್ಕಳ: ನಂದಳಿಕೆಯ ವಿಶಾಲ ಯಕ್ಷಕಲಾ ಬಳಗ ವತಿಯಿಂದ ಪ್ರಥಮ ಬಾರಿ ಶಿವಳ್ಳಿ ಭಾಷೆಯಲ್ಲಿ ‘ಬಜಿಲ್ ನೇವೇದ್ಯೊ ಸುದಾಮ ಚರಿತ್ರೆ’ ಪ್ರಸಂಗದ ತಾಳಮದ್ದಳೆ ನಂದಳಿಕೆ ಸುಬ್ರಹ್ಮಣ್ಯ ಬೈಪಾಡಿತ್ತಾಯರ ನಿವಾಸದಲ್ಲಿ ನಡೆಯಿತು. ಕವಿ ಅಷ್ಟಾವಧಾನಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ರಚಿಸಿದ ಈ ಪ್ರಸಂಗ ಶಿವಳ್ಳಿ ಬ್ರಾಹ್ಮಣ ತುಳು ಭಾಷೆ ಸಾಹಿತ್ಯ ಹೊಂದಿದೆ. ಹಿಮ್ಮೇಳದಲ್ಲಿ ಗಣೇಶ ಮಯ್ಯ ವರ್ಕಾಡಿ, ಶಶಿಧರ್ ರಾವ್ ಚಿತ್ರಾಪು, ಕಟೀಲು ಮುರಳೀಧರ ಭಟ್, ದೇವಾನಂದ ಭಟ್ ಬೆಳುವಾಯಿ, ಲಕ್ಷ್ಮೀ ನಾರಾಯಣ ಹೊಳ್ಳ ಕೃಷ್ಣಾಪುರ ಮತ್ತು ಸ್ಕಂದರಾಜಮಯ್ಯ ಸಹಕರಿಸಿದ್ದು, ಅರ್ಥಧಾರಿಗಳಾಗಿ ಕಟೀಲು ಮೇಳದ ಕಲಾವಿದ ಡಾ.ವಾದಿರಾಜ ಕಲ್ಲೂರಾಯ, ಸುಬ್ರಹ್ಮಣ್ಯ ಬೈಪಾಡಿತ್ತಾಯ, ಶಾಂತಾ ಬೈಪಾಡಿತ್ತಾಯ, ಶಾಂತಾ ಬೈಪಾಡಿತ್ತಾಯ ಭಾಗವಹಿಸಿದರು.