ಜಿಲ್ಲೆ

ಕಾರಂತ ಥೀಂಪಾರ್ಕ್‌ನಲ್ಲಿ ಯಕ್ಷಗಾನ ಹೆಜ್ಜೆ ತರಗತಿ ಆರಂಭ

ಇಂದಿರಾ ಎನ್ ಕೆ

ಕೋಟ: ಕೋಟದ ಯಕ್ಷಾಂತರಂಗ ವ್ಯವಸಾಯೀ ಯಕ್ಷ ತಂಡದ 10ನೇ ವರ್ಷದ ಉಚಿತ ಯಕ್ಷಗಾನ ಹೆಜ್ಜೆ ತರಗತಿ ಇತ್ತೀಚೆಗೆ ಡಾ.ಕೋಟ ಶಿವರಾಮ ಕಾರಂತ ಥೀಂಪಾರ್ಕ್‌ನಲ್ಲಿ ಆರಂಭಗೊಂಡಿತು.

ರಂಗಭೂಮಿ ನಿರ್ದೇಶಕಿ, ರಸರಂಗ ಕದ್ರಿಕಟ್ಟು ಸಂಸ್ಥೆಯ ಸಂಚಾಲಕಿ ಸುಧಾ ಮಣೂರು ಯಕ್ಷಗಾನ ತರಗತಿಯನ್ನು ಉದ್ಘಾಟಿಸಿ ಮಾತನಾಡಿ, ಮುಂದಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಉತ್ತಮ ಯಕ್ಷಗಾನ ಕಲಿಯುವಿಕೆಗಾಗಿ ಅನುಭವಿ ಯಕ್ಷ ಗುರುಗಳ ಅಗತ್ಯತೆ ಇದೆ. ಅಂತಹ ಗುರುಗಳು ಈ ತಂಡದಲ್ಲಿದ್ದು 10 ವರ್ಷಗಳಿಂದ ಉಚಿತವಾಗಿ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಡಾ.ಕಾರಂತ ಥೀಂ ಪಾರ್ಕ್‌ನ ಟ್ರಸ್ಟಿ, ಯಕ್ಷಾಂತರಂಗದ ಕಾರ್ಯಾಧ್ಯಕ್ಷ ಎಂ.ಸುಬ್ರಾಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಅಜಪುರ ಯಕ್ಷಗಾನ ಸಂಘದ ಕಾರ್ಯದರ್ಶಿ ಪ್ರತೀಶ ಕುಮಾರ್ ಉಪಸ್ಥಿತರಿದ್ದರು. ಸಂಸ್ಥೆ ಕಾರ್ಯದರ್ಶಿ ಹಾಗೂ ಗುರು ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ ಸ್ವಾಗತಿಸಿ, ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಗೆ ಕಲಿಕಾ ತರಗತಿ ಪ್ರಾರಂಭಿಸಲಾಯಿತು.