ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ "ತಿತ್ತಿತೈ ಪೌರಾಣಿಕ ಯಕ್ಷ ಪರ್ವ'- ಕಾರ್ಯಕ್ರಮವನ್ನು ಸೆ.13ರಂದು ಹಮ್ಮಿಕೊಳ್ಳಲಾಗಿದೆ. ತೆಂಕು&ಬಡಗು ತಿಟ್ಟಿನ ಹೆಸರಾಂತ ಕಲಾವಿದರು "ದಮಯಂತಿ ಪುನ@ ಸ್ವಯಂವರ, ಭೃಗು ಶಾಪ, ಕೃಷ್ಣಸಂಕಲ್ಪ ಪ್ರಸಂಗಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಕೊಳಗಿ ಕೇಶವ ಹೆಗಡೆ, ಕಿಗ್ಗ ಹಿರಿಯಣ್ಣ ಆಚಾರ್, ನಾಗೇಶ್ ಕುಲಾಲ್, ಚಿನ್ಮಯ್ ಭಟ್ ಕಲ್ಲಡ್ಕ,
ಕೃಷ್ಣ ಯಾಜಿ ಬಳ್ಕೂರು, ಗೋಪಾಲ್ ಆಚಾರ್, ಕೊಂಡದಕುಳಿ ರಾಮಚಂದ್ರ ಹೆಗಡೆ, ಅಶೋಕ್ ಭಟ್ ಉಜಿರೆ, ಜಯಪ್ರಕಾಶ್ ಶೆಟ್ಟಿ ಪೆಮುರ್ದೆ, ವಿದ್ಯಾಧರ ಜಲವಳ್ಳಿ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಉದಯ ಕಡಬಾಳ್, ಸೀತಾರಾಮ್ ಕಟೀಲು ಮತ್ತಿತರ ಕಲಾವಿದರು ಪಾಲ್ಗೊಳ್ಳಲಿದ್ದಾರೆ.