ಜಿಲ್ಲೆ

ವಿದ್ಯಾಪೋಷಕ್ ವಿದ್ಯಾರ್ಥಿನಿಗೆ ಉಚಿತ ಇಂಜಿನಿಯರಿಂಗ್ ಶಿಕ್ಷಣ: ಸೋದೆ ಶ್ರೀ

ಉಡುಪಿ: ಯಕ್ಷಗಾನ ಕಲಾರಂಗದ ಸದಸ್ಯರ ಪ್ರಮಾಣಿಕತೆ ಮತ್ತು ಕ್ರಿಯಾಶೀಲತೆಗೆ ಸಮಾಜ ಸ್ಪಂದಿಸುತ್ತಿದೆ. ಸಮಾಜಸೇವೆಗೆ ವಿದ್ಯಾಪೋಷಕ್ ಯೋಜನೆ ಮಾದರಿಯಾಗಿದ್ದು, ವಿದ್ಯಾರ್ಥಿನಿ ಚೈತ್ರಾಳಿಗೆ ಶ್ರೀ ಮಧ್ವ ವಾದಿರಾಜ ಇಂಜಿನೀಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಲಾಗುವುದು.  ಸಂಪೂರ್ಣ ವೆಚ್ಚವನ್ನು ಭರಿಸಲಾಗುವುದು ಎಂದು ಸೋದೆ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.

ಬುಧವಾರ ಕಾರ್ಕಳ ನೂರಾಲ್ಬೆಟ್ಟುವಿನಲ್ಲಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಲಾನುಭವಿ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿ ಚೈತ್ರಾಳಿಗೆ ನಿವೃತ್ತ ಅಧ್ಯಾಪಕ ಯು. ಎಸ್. ರಾಜಗೋಪಾಲ್ ಆಚಾರ್ಯ ಮತ್ತು ಸುಶೀಲಾ ಆರ್. ಆಚಾರ್ಯ ವಿವಾಹ ಸುವರ್ಣ ವರ್ಷಾಚರಣೆ ಸವಿನೆನಪಿನಲ್ಲಿ 7 ಲಕ್ಷ ರೂಪಾಯಿ ವೆಚ್ಚದಲ್ಲಿ  ನಿರ್ಮಿಸಿಕೊಟ್ಟ ನೂತನ ಮನೆ ಶ್ರೀನಿಲಯ ಉದ್ಘಾಟಿಸಿ  ಅನುಗ್ರಹ ಸಂದೇಶ ನೀಡಿದರು.

ಇದೇ ಸಂದರ್ಭದಲ್ಲಿ ಮನೆ ನಿಮಾರ್ಣದಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಅವರಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು.

ಪ್ರಾಯೋಜಕ ಯು. ಎಸ್. ರಾಜಗೋಪಾಲ್ ಆಚಾರ್ಯ ಮಾತನಾಡಿದರು. ಸುಶೀಲಾ ಆರ್. ಆಚಾರ್ಯ, ವೇಣುಗೋಪಾಲ ಭಟ್, ಡಾ. ಜೆ.ಎನ್. ಭಟ್, ಯು. ಶ್ರೀಧರ್, ಗುರುರಾಜ ಆಚಾರ್ಯ, ಮಾಧವ ಆಚಾರ್ಯ, ಪ್ರಸಾದ್ ರಾವ್, ಭಾಗ್ಯಲಕ್ಷಿ ಪಿ. ರಾವ್, ಸಂಸ್ಥೆಯ ಉಪಾಧ್ಯಕ್ಷರಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವರಾವ್, ಕಿಶೋರ್ ಕನ್ನರ್ಪಾಡಿ, ಎಸ್. ಗಣರಾಜ್ ಭಟ್, ಭುವನಪ್ರಸಾದ್ ಹೆಗ್ಡೆ, ಮಂಜುನಾಥ ಹೆಬ್ಬಾರ್, ವಿದ್ಯಾಪ್ರಸಾದ್, ನಟರಾಜ ಉಪಾಧ್ಯ, ಕೆ. ಅಜಿತ್ ಕುಮಾರ್, ಕಿಶೋರ್ ಸಿ. ಉದ್ಯಾವರ, ಅಶೋಕ ಎಂ., ಗಣೇಶ್ ಬ್ರಹ್ಮಾವರ, ಆನಂದ ಶೆಟ್ಟಿ, ನಾಗರಾಜ ಹೆಗಡೆ, ರಾಜೀವಿ ಉಪಸ್ಥಿತರಿದ್ದರು.

 ಗಣೇಶ್ ಎನ್. ಅಮೀನ್ ಇವರನ್ನು ಶಾಲು, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.  ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು.