ಜಿಲ್ಲೆ

ಸಮಾಜದ ಸಂಕಷ್ಟಕ್ಕೆ ಸ್ಪಂದಿಸುವುದೇ ನೈಜ ಸಮಾಜ ಸೇವೆ

ಉಡುಪಿ : ಸಮಾಜದ ಕಷ್ಟಕ್ಕೆ ಸ್ಪಂದಿಸುವುದೇ ನಿಜವಾದ ಸೇವೆ. ನಿಸ್ಪೃಹ ಕಾರ್ಯಕರ್ತರಿಂದ ಕೂಡಿದ ಯಕ್ಷಗಾನ ಕಲಾರಂಗ ಮಾದರಿ ಸಂಸ್ಥೆ ಎಂದು ಹಾದಿಗಲ್ಲು ಅಭಯಲಕ್ಷ್ಮಿ ನರಸಿಂಹ ದೇವಸ್ಥಾನದ ಧರ್ಮದರ್ಶಿ ಹಾದಿಗಲ್ಲು ಲಕ್ಷ್ಮಿನಾರಾಯಣ ಹೇಳಿದರು.

ಬುಧವಾರ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್​ ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿ ಬ್ರಹ್ಮಾವರ ತಾಲೂಕಿನ ನಿಂಜೂರುಬೆಟ್ಟಿನ ಜಯಲಕ್ಷಿ$್ಮ ಇವರಿಗೆ ಪಿ. ಉಪೇಂದ್ರ ನಾಯಕ್​ ಸ್ಮರಣಾರ್ಥ ಯು. ಎಸ್​. ನಾಯಕ್​ ಮೆಮೋರಿಯಲ್​ ಚಾರಿಟೇಬಲ್​ ಟ್ರಸ್ಟ್​ ಪ್ರಾಯೋಜಕತ್ದಲ್ಲಿ ನಿರ್ಮಿಸಿದ ಉಪೇಂದ್ರ ನಿಲಯ ಮನೆ ಹಸ್ತಾಂತರಿಸಿ ಅವರು ಮಾತನಾಡಿದರು.

ಯು. ಎಸ್​.ನಾಯಕ್​ ಮೆಮೋರಿಯಲ್​ ಚಾರಿಟೇಬಲ್​ ಟ್ರಸ್ಟ್​ನ ವಿಶ್ವಸ್ಥ ಪಿ. ಸುರೇಶ್​ ನಾಯಕ್​ ದೀಪ ಬೆಳಗಿದರು. ಕೆ. ಬಾಲಕೃಷ್ಣ ಹೆಗ್ಡೆ ಅಭ್ಯಾಗತರಾಗಿದ್ದರು. ವಿನ್ಸೆಂಟ್​ ಲುಯಿಸ್​, ಜಾನೆಟ್​ ಲುಯಿಸ್​, ಸಂಸ್ಥೆಯ ದಾನಿಗಳಾದ ಯು. ವಿಶ್ವನಾಥ ಶೆಣೈ, ಯು. ಶ್ರೀಧರ್​, ಸಂಸ್ಥೆಯ ಉಪಾಧ್ಯಕ್ಷರಾದ ಎಸ್​. ವಿ. ಭಟ್​, ಪಿ. ಕಿಶನ್​ ಹೆಗ್ಡೆ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್​, ಸದಸ್ಯರುಗಳಾದ ಅನಂತರಾಜ್​ ಉಪಾಧ್ಯ, ವಿಜಯಕುಮಾರ್​ ಮುದ್ರಾಡಿ, ಭುವನಪ್ರಸಾದ್​ ಹೆಗ್ಡೆ, ಕೃಷ್ಣಮೂರ್ತಿ ಭಟ್​, ಅಜಿತ್​ ಕುಮಾರ್​, ಎಚ್​. ಎನ್​. ವೆಂಕಟೇಶ್​, ಗಣೇಶ್​ ಬ್ರಹ್ಮಾವರ, ಸುದರ್ಶನ ಬಾಯರಿ ಹಾಗೂ ಕೆ. ಎಸ್​. ಶ್ರೀನಿವಾಸ್​ ನಾಯಕ್​ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್​ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್​ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಮ್​. ಹೆಗಡೆ ವಂದಿಸಿದರು. ಎಚ್​. ಎನ್​. ಶೃಂಗೇಶ್ವರ ಸಹಕರಿಸಿದರು.