ಜಿಲ್ಲೆ

ಯಕ್ಷಗಾನ ಸಂಸ್ಕಾರ ನೀಡುವ ಕಲೆ: ಅರ್ಚಕ ಸುಬ್ರಹ್ಮಣ್ಯ ಭಟ್​ ಅಭಿಮತ

ಕಿನ್ನಿಗೋಳಿ: ಯಕ್ಷಗಾನ ಸಂಸ್ಕಾರ ನೀಡುವ ಕಲೆಯಾಗಿದ್ದು, ಮಕ್ಕಳಿಗೆ ಇದನ್ನು ಕಲಿಸಿ ಕೊಡುವ ಕಾರ್ಯ ಅಭಿನಂದನೀಯ ಎಂದು ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್​ ಹೇಳಿದರು.

ಎಸ್​.ಕೋಡಿ ಪದ್ಮಾವತಿ ಲಾನ್​ ಸಭಾಭವನದಲ್ಲಿ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್​ ಸಂಯೋಜನೆಯಲ್ಲಿ ಶ್ರೀ ವಿನಾಯಕ ಯಕ್ಷ ಕಲೋತ್ಸವದಲ್ಲಿ ಮಾತನಾಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್​ ಎಂ.ರೈ, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಮುಂಬಯಿ ಉದ್ಯಮಿ ಬೋಳ ರವಿ ಪೂಜಾರಿ, ಉದ್ಯಮಿ ಧೀರಜ್​ ಶೆಟ್ಟಿ, ಎಸ್​.ಕೋಡಿ ಬಿಲ್ಲವ ಸಂಘದ ಅಧ್ಯಕ್ಷ ನವೀನ್​ ಹರಿಪಾದೆ, ಉದ್ಯಮಿ ದಿವಾಕರ ಕರ್ಕೇರ, ಕಿನ್ನಿಗೋಳಿ ರೋಟರಿ ಕ್ಲಬ್​ ಅಧ್ಯಕ್ಷ ಧನಂಜಯ ಶೆಟ್ಟಿಗಾರ್​, ಮಂಗಳೂರಿನ ಕಿಶೋರ್​ ಕುಮಾರ್​, ಯುವ ಉದ್ಯಮಿ ಗೋಪಾಲಕೃಷ್ಣ ಪುನರೂರು, ಜೀವನ ಕೌಶಲ ತರಬೇತುದಾರೆ ಜ್ಯೋತಿ ಪ್ರಶಾಂತ್​ ಉಪಸ್ಥಿತರಿದ್ದರು.

ಕಿನ್ನಿಗೋಳಿ ಮೆಸ್ಕಾಂನ ಸುಧಾಕರ ಪೂಜಾರಿ, ಕಾರ್ಕಳದ ಉದ್ಯಮಿ ದೇವದಾಸ್​ ಶೆಟ್ಟಿಗಾರ್​, ಮೂಡುಬಿದಿರೆ ಕಲಾಪೋಷಕ ನವೀನ್​ಚಂದ್ರ ಕರ್ಕೇರ ಹಾಗೂ ಪಕ್ಷಿಕೆರೆಯ ಶ್ರೀ ವಿನಾಯಕ ಮಿತ್ರ ಮಂಡಳಿಗೆ ಯಕ್ಷಕಲೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಕ್ಷಕಲಾ ಗೌರವ ಪುರಸ್ಕಾರವನ್ನು ಯುವ ಪ್ರತಿಭೆಗಳಾದ ನೀಲೇಶ್​ ಆಚಾರ್ಯ, ಶಶಾಂಕ್​ ಪೂಜಾರಿ, ತನುಶ್ರೀ ಕೆರೆಕಾಡು, ರಶ್ಮಿಕೆರೆಕಾಡು ಅವರಿಗೆ ನೀಡಲಾಯಿತು.

ಸಂಸ್ಥೆಯ ಅಧ್ಯಕ್ಷ ಜಯಂತ ಅಮೀನ್​ ಸ್ವಾಗತಿಸಿದರು. ಅಭಿಜಿತ್​ ಪ್ರಸ್ತಾವನೆಗೈದರು. ಲೋಹಿತ್​ ಅನ್ವಿತಾ, ರೇಷ್ಮಾ, ಮೂಕಾಂಬಿಕಾ ಸನ್ಯಾನ ಪತ್ರ ವಾಚಿಸಿದರು. ಅಜಿತ್​ ಕೆರೆಕಾಡು ಸನ್ಮಾನಿತರ ಬಗ್ಗೆ ಮಾತನಾಡಿದರು. ಸಾಂಸತಿಕ ಕಾರ್ಯಕ್ರಮದ ಅಂಗವಾಗಿ ಶ್ರೀಕೃಷ್ಣ ಪಾರಿಜಾತ, ಶ್ರೀರಾಮ ಕಥಾಸಾರ, ಲವಕುಶ ಕಾಳಗ ಯಕ್ಷಗಾನ ಪ್ರಸಂಗ ಪ್ರದರ್ಶನ ನಡೆಯಿತು.