ಜಿಲ್ಲೆ

ಪಠ್ಯದಲ್ಲಿ ಯಕ್ಷಗಾನ ಸೇರಿಸಲು ಯತ್ನ: ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಮಾಹಿತಿ

Dakshina Kannada

ಮಂಗಳೂರು: ಪಠ್ಯದಲ್ಲಿ ಯಕ್ಷಗಾನ ಸೇರಿಸಲು ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಪ್ರಯತ್ನ ನಡೆಯುತ್ತಿದೆ ಎಂದು ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ತಿಳಿಸಿದರು.

ಸಂಗೀತ, ಯೋಗ, ನೃತ್ಯ ಮಾದರಿ ಪ್ರೌಢಶಾಲೆ ಹಂತದಲ್ಲಿ ಯಕ್ಷಗಾನವನ್ನು ಪಠ್ಯದಲ್ಲಿ ಅಳವಡಿಸುವ ಪ್ರಸ್ತಾವ ಸರ್ಕಾರದ ಪಠ್ಯ ಪುಸ್ತಕ ಸಮಿತಿ ಮುಂದಿದೆ. ತುಳು ತಿಟ್ಟು ರಚನೆ ಸಂಬಂಧಿಸಿ ಕೆಲಸಗಳು ನಡೆಯುತ್ತಿವೆ. ಈ ದಿಕ್ಕಿನಲ್ಲಿ ಉತ್ತಮವಾದ ತುಳು ಪ್ರಸಂಗಗಳ ಸಂಗ್ರಹ ನಡೆಯುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಯಕ್ಷಗಾನದಂತಹ ಕಲಾ ಪ್ರಕಾರಗಳನ್ನು ಜಾತಿ, ಮತ, ಗಡಿಗಳನ್ನು ಮೀರಿ ವಿಶಾಲ ಮನೋಭಾವದಿಂದ ಸ್ವೀಕರಿಸಬೇಕು ಎಂದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಕೆಲ ಯಕ್ಷಗಾನ ಚರ್ಚೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.