ಜಿಲ್ಲೆ

ದೇವಸ್ಥಾನಗಳು ಸಾಮಾಜಿಕವಾಗಿಯೂ ತೆರೆದುಕೊಳ್ಳಬೇಕು

ಉಡುಪಿ: ಇಂದಿನ ಕಾಲಟ್ಟದಲ್ಲಿ ದೇವಸ್ಥಾನಗಳು ಧಾರ್ಮಿಕತೆಯೊಂದಿಗೆ ಸಾಮಾಜಿಕವಾಗಿ ಮತ್ತು ಸಾಂಸತಿಕವಾಗಿ ತೆರೆದುಕೊಳ್ಳುವುದು ಅಗತ್ಯ. ಆರಾಧನಾಲಯಗಳು ಸಂಸತಿಯನ್ನು ಪಸರಿಸುವ ಕೆಲಸವನ್ನು ಮಾಡುತ್ತಿವೆ. ಇದರೊಂದಿಗೆ ಕೃಷಿ ಸಂಸತಿಯನ್ನು ಯುವಜನತೆಗೆ ಪರಿಚಯಿಸುತ್ತಿರುವುದು ಶ್ಲಾನೀಯ ಕಾರ್ಯ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

ಸೋಮವಾರ ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಶಿವರಾತ್ರಿಯ ಅಂಗವಾಗಿ ದೇವಳದ ಅಭಿವೃದ್ಧಿ ಟ್ರಸ್ಟ್​ ಹಾಗು ಶಿವಪಾಡಿ ವೈಭವ ಆಚರಣಾ ಸಮಿತಿಯ ವತಿಯಿಂದ ಆಯೋಜಿಸಿರುವ ಯಕ್ಷಗಾನ, ಕೃಷಿ, ಆರೋಗ್ಯ, ಆಹಾರ ಮೇಳ 'ಶಿವಪಾಡಿ ವೈಭವ" ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಉತ್ಸವಗಳಲ್ಲಿ ಜನರು ಜಾತಿ&ಭೇದ, ಬಡವ&ಬಲ್ಲಿದನೆಂಬ ತಾರತಮ್ಯವಿಲ್ಲದೆ ಒಂದಾಗುವುದನ್ನು ಸನಾತನ ಧರ್ಮದಲ್ಲಿ ಮಾತ್ರ ನೋಡಲು ಸಾಧ್ಯವಿದೆ ಎಂದರು.

ಶಾಸಕ ಸುರೇಶ್​ ಶೆಟ್ಟಿ ಗುರ್ಮೆ ಮಾತನಾಡಿದರು. ಶಿವಪಾಡಿ ವೈಭವ ಆಚರಣಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ.ರಘುಪತಿ ಭಟ್​, ದೇವಳದ ಆಡಳಿತ ಮೊಕ್ತೇಸರ ಮಹೇಶ್​ ಠಾಕೂರ್​, ಕೃಷಿ ವಿಜ್ಞಾನಿ ಡಾ. ಶಂಕರ್​, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ನಂಜಪ್ಪ, ಆಸರೆ ಟ್ರಸ್ಟ್​ ಅಧ್ಯಕ್ಷ ಜೈವಿಠಲ್​, ಪರೀಕ ಎಸ್​ಡಿಎಂ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಗೋಪಾಲ ಪೂಜಾರಿ, ದಿವಾಕರ ಭಟ್​, ಮಂಜುನಾಥ್​, ಕಮಲಾಕ್ಷ ಹೆಬ್ಬಾರ್​, ಶಿವಾನಂದ ಪ್ರಭು, ಮಂಜುನಾಥ್​ ಪಾಟೀಲ್​, ಶ್ರೀನಿವಾಸ ಪೂಜಾರಿ, ರತ್ನಾಕರ ರಾವ್​, ವಿಷ್ಣುದಾಸ್​ ಪಾಟೀಲ್​, ಬಾಬು ನಾಯ್ಕ , ದೇವಸ್ಥಾನದ ಶಾಶ್ವತ ಟ್ರಸ್ಟಿ ದಿನೇಶ್​ ಸಾಮಂತ್​, ಟ್ರಸ್ಟಿಗಳಾದ ಸತೀಶ್​ ಪಾಟೀಲ್​, ಶುಭಕರ್​ ಸಾಮಂತ್​, ಪ್ರಕಾಶ್​ ಪ್ರಭು, ಅಶೋಕ್​ ಸಾಮಂತ್​, ಸಾಂಸತಿಕ ಕಾರ್ಯದರ್ಶಿ ನಾಗರಾಜ್​ ಕಾಮತ್​, ಶಿವಪಾಡಿ ವೈಭವ ಆಚರಣಾ ಸಮಿತಿಯ ಪ್ರ.ಕಾರ್ಯದರ್ಶಿ ಪ್ರಕಾಶ್​ ಕುಕ್ಕೆಹಳ್ಳಿ, ದೇವಳದ ಅಭಿವೃದ್ಧಿ ಟ್ರಸ್ಟ್​ನ ಕಾರ್ಯದರ್ಶಿ ಗೋಪಾಲಕೃಷ್ಣ್ಣ ಪ್ರಭು ಉಪಸ್ಥಿತರಿದ್ದರು.