ಜಿಲ್ಲೆ

ಮಕ್ಕಳಲ್ಲಿ ಕೃಷಿ ಆಸಕ್ತಿ ಬೆಳೆಸುವುದು ಅಗತ್ಯ

ಉಡುಪಿ: ಯುವಜನತೆ ಕೃಷಿಯಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ಮಕ್ಕಳಲ್ಲಿ ಕೃಷಿ ಆಸಕ್ತಿ ಬೆಳೆಸುವುದು ಅಗತ್ಯ. ಶಿವಪಾಡಿ ವೈಭವ ಮೂಲಕ ಆರೋಗ್ಯ, ಕೃಷಿ, ಮನೋರಂಜನ ಮೇಳ ಹಮ್ಮಿಕೊಂಡಿರುವುದು ಶ್ಲಾನೀಯ ಕಾರ್ಯ ಎಂದು ಧರ್ಮಸ್ಥಳದ ಧಮಾರ್ಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಶಿವರಾತ್ರಿಯ ಅಂಗವಾಗಿ ದೇವಳದ ಅಭಿವೃದ್ಧಿ ಟ್ರಸ್ಟ್​ ಹಾಗು ಶಿವಪಾಡಿ ವೈಭವ ಆಚರಣಾ ಸಮಿತಿಯ ವತಿಯಿಂದ  22 ರಿಂದ 26ರವರೆಗೆ ಆಯೋಜಿಸಿರುವ ಯಕ್ಷಗಾನ, ಕೃಷಿ, ಆರೋಗ್ಯ, ಆಹಾರ ಮೇಳ ಸಂಯುಕ್ತ ಕಾರ್ಯಕ್ರಮ ಶಿವಪಾಡಿ ವೈಭವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಿಂದದ್ದನ್ನು ಆರಗಿಸಿಕೊಳ್ಳಲು ಆರೋಗ್ಯಬೇಕು. ಮಾನಸಿಕ ಮತ್ತು ದೈಹಿಕ ಆರೋಗ್ಯವಿದ್ದರೆ ಮಾತ್ರ ಸಾಧನೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಆರೋಗ್ಯ ಮೇಳ ಪೂರಕವಾಗಿದೆ ಎಂದರು.

ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್​.ಎಸ್​ ಬಲ್ಲಾಳ್​ ಅಧ್ಯಕ್ಷತೆ ವಹಿಸಿ, ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಶೇ.40ರಷ್ಟು ಮಂದಿ ಕೃಷಿಯನ್ನು ಆಧರಿಸಿದ್ದಾರೆ. ಯುವಕರಲ್ಲಿ ಕೃಷಿ ಬಗಹ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಕೃಷಿ ಮೇಳ ಆಯೋಜಿಸಲಾಗಿದ್ದು, ಯುವಜನರು ಇದರ ಪ್ರಯೋಜನ ಪಡೆಯಬೇಕು ಎಂದರು.

ವಿದ್ವಾನ್​ ರಾಮಚಂದ್ರ ಕುಂಜಿತ್ತಾಯ, ಮಾಜಿ ಸಚಿವರಾದ ವಿನಯಕುಮಾರ್​ ಸೊರಕೆ, ಪ್ರಮೋದ್​ ಮಧ್ವರಾಜ್​, ಉದ್ಯಮಿ ಉದಯ್​ ಕುಮಾರ್​ ಶೆಟ್ಟಿ ಮುನಿಯಾಲ್​, ದೇವಸ್ಥಾನದ ಶಾಶ್ವತ ಟ್ರಸ್ಟಿ ದಿನೇಶ್​ ಸಾಮಂತ್​, ಟ್ರಸ್ಟಿಗಳಾದ ಸತೀಶ್​ ಪಾಟೀಲ್​, ಶುಭಕರ್​ ಸಾಮಂತ್​, ಪ್ರಕಾಶ್​ ಪ್ರಭು, ಅಶೋಕ್​ ಸಾಮಂತ್​, ಸಾಂಸತಿಕ ಕಾರ್ಯದರ್ಶಿ ನಾಗರಾಜ್​ ಕಾಮತ್​, ಶಿವಪಾಡಿ ವೈಭವ ಆಚರಣಾ ಸಮಿತಿಯ ಪ್ರ.ಕಾರ್ಯದರ್ಶಿ ಪ್ರಕಾಶ್​ ಕುಕ್ಕೆಹಳ್ಳಿ, ದೇವಳದ ಅಭಿವೃದ್ಧಿ ಟ್ರಸ್ಟ್​ನ ಕಾರ್ಯದರ್ಶಿ ಗೋಪಾಲಕೃಷ್ಣ್ಣ ಪ್ರಭು ಉಪಸ್ಥಿತರಿದ್ದರು. ಶಿವಪಾಡಿ ವೈಭವ ಆಚರಣಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ.ರಘುಪತಿ ಭಟ್​ ಪ್ರಸ್ತಾವಿಕವಾಗಿ ಮಾತನಾಡಿದರು. ದೇವಳದ ಆಡಳಿತ ಮೊಕ್ತೇಸರ ಮಹೇಶ್​ ಠಾಕೂರ್​ ಸ್ವಾಗತಿಸಿದರು. ಪತ್ರಕರ್ತ ರಾಜೇಶ್​ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು.

-ಧರ್ಮ, ಸಂಸತಿ, ಬದುಕು ಕಟ್ಟಿಕೊಡುವ ಕೆಲಸ ಶಿವಪಾಡಿ ಉತ್ಸವದ ಮೂಲಕ ನಡೆಯುತ್ತಿದೆ. ಉಡುಪಿ ಮತ್ತು ದಕ ಜಿಲ್ಲೆ ಹೆಚ್ಚಿನ ಅಭಿವೃದ್ಧಿ ಕಾಣಲು ಸರ್ಕಾರ ಕಾರಣವಲ್ಲ. ನಮ್ಮ ಹಿರಿಯರು ಶಿಕ್ಷಣ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡಿದ್ದರಿಂದ ದೇಶದಲ್ಲಿ ಅವಿಭಜಿತ ದಕ ಜಿಲ್ಲೆ ಅಗ್ರಸ್ಥಾನದಲ್ಲಿದೆ. &ಕೋಟ ಶ್ರೀನಿವಾಸ ಪೂಜಾರಿ, ಸಂಸದರು