ಜಿಲ್ಲೆ

ಯಕ್ಷಗಾನ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ

ಉಡುಪಿ: ಜ್ಞಾನಪೀಠ ಪುರಸತ ಸಾಹಿತಿ ಡಾ. ಶಿವರಾಮ ಕಾರಂತರಿಂದಾಗಿ ಯಕ್ಷಗಾನ ವಿಶ್ವಗಾನವಾಗಿ ಬೆಳೆದಿದ್ದು, ಮುಂದಿನ ಪೀಳಿಗೆಗೆ ಯಕ್ಷಗಾನ ಕಲೆಯನ್ನು ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ. ನೀ.ಬೀ. ವಿಜಯ ಬಲ್ಲಾಳ್​ ಹೇಳಿದರು.

ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ನಡೆದ ಯಕ್ಷಗಾನ ಅಕಾಡೆಮಿಯ 2024ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಹಾಗೂ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕರಾವಳಿ ಜನರಿಗೆ ಧರ್ಮ ಸಂಸತಿ, ಮಹಾಭಾರತ, ರಾಮಾಯಣ, ಪುರಾಣ ಕಥೆಗಳ ತಿಳಿವಳಿಕೆ ನೀಡಿರುವುದು ಯಕ್ಷಗಾನ ಕಲೆ ಎಂದು ಹೇಳಿದರು.

ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ್​ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಹೆ ಸಹಕುಲಪತಿ ಡಾ. ನಾರಾಯಣ ಸಭಾಹಿತ್​, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಯಕ್ಷಗಾನ ಕಲಾರಂಗ ಅಧ್ಯಕ್ಷ ಗಂಗಾಧರ ರಾವ್​, ಕನ್ನಡ ಸಂಸತಿ ಇಲಾಖೆ ಸಹಾಯಕ ನಿರ್ದೆಶಕಿ ಪೂರ್ಣಿಮಾ, ಅಕಾಡೆಮಿ ರಿಜಿಸ್ಟ್ರಾರ್​ ನಮ್ರತಾ ಮೊದಲಾದವರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ

ಹಿಮ್ಮೇಳ ವಾದಕ ಮಾಂಬಾಡಿ ಸುಬ್ರಹ್ಮಣ್ಯ ಭಟ್​ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ, ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ, ಕೋಡಿ ವಿಶ್ವನಾಥ ಗಾಣಿಗ, ರಾಘವ ದಾಸ್​, ಸುಬ್ರಾಯ ಹೊಳ್ಳ, ಮೂಡಲಪಾಯ ಯಕ್ಷಗಾನ ಕಲಾವಿದ ಕಾಂತರಾಜು ಅವರಿಗೆ ಅಕಾಡೆಮಿಯ ಗೌರವ ಪ್ರಶಸ್ತಿ, ಅಡ್ಕ ಗೋಪಾಲಕೃಷ್ಣ ಭಟ್​, ಜಗನ್ನಾಥ ಆಚಾರ್ಯ ಎಳ್ಳಂಪಳ್ಳಿ, ಮವ್ವಾರು ಬಾಲಕೃಷ್ಣ ಮಣಿಯಾಣಿ, ಉಮೇಶ್​ ಕುಪ್ಪೆಪದವು, ಶಿವಾನಂದ ಗೀಜಗಾರು, ಮುಗ್ವಾ ಗಣೇಶ್​ ನಾಯ್ಕ, ಸುರೇಂದ್ರ ಮಲ್ಲಿ, ಅಂಡಾಲ ದೇವಿಪ್ರಸಾದ ಶೆಟ್ಟಿ, ಕೃಷ್ಣಪ್ಪ, ಹಳುವಳ್ಳಿ ಜ್ಯೋತಿ ಅವರಿಗೆ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ಕರ್ಗಲ್ಲು ವಿಶ್ವೇಶ್ವರ ಭಟ್ಟ ಅವರಿಗೆ ಕರ್ಕಿ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಭಾರತ ಹಲವು ಸಂಸತಿಗಳ ತವರು ನೆಲ. ಯಕ್ಷಗಾನ ಜನಸಾಮಾನ್ಯರ ಕಲೆಯಾಗಿದ್ದು, ಸೀಮಾತೀತ, ಕಾಲಾತೀತ, ಜಾತ್ಯತಿತವಾಗಿದೆ. ಕಲೆಗಾಗಿ ಜೀವನ ಮುಡುಪಾಗಿಟ್ಟ ಕಲಾವಿದರ ಜೀವನ ನಮಗೆಲ್ಲಾ ಆದರ್ಶವಾಗಿದೆ. -ಗುರ್ಮೆ ಸುರೇಶ್​ ಶೆಟ್ಟಿ, ಶಾಸಕರು, ಕಾಪು -------- ಯಕ್ಷಗಾನ, ನಾಗಾರಾಧನೆ, ದೈವಾರಾಧನೆ ಕರಾವಳಿಯ ಸಂಸತಿ. ರಾಜ್ಯಸರ್ಕಾರ ಕಲೆಗೆ ಪ್ರೋತ್ಸಾಹ ನೀಡಬೇಕು. ಅನೇಕ ಕಡೆಗಳಲ್ಲಿ ರಾತ್ರಿವೇಳೆ ಯಕ್ಷಗಾನಕ್ಕೆ ತಡೆಯೊಡ್ಡುವ ಕೆಲಸ ನಡೆಯುತ್ತಿದೆ. ಜನರ ಭಾವನಾತ್ಮಕ ವಿಷಯಗಳಿಗೆ ಧಕ್ಕೆ ತರಬಾರದು. -ಯಶ್​ಪಾಲ್​ ಸುವರ್ಣ, ಶಾಸಕರು ಉಡುಪಿ -------- ಯಕ್ಷಗಾನದಿಂದ ಭಾಷಾ ಸ್ಪಷ್ಟತೆ ಪ್ರಾಪ್ತಿಯಾಗುತ್ತದೆ. ಲೌಕಿಕ ಶಿಕ್ಷಣ ಪಡೆಯದ ಕಲಾವಿದರೂ ಹೆಚ್ಚಿನ ಪ್ರೌಢಿಮೆ ಹೊಂದಿದ್ದಾರೆ. ನಮ್ಮ ಹಿರಿಯರು ಕಲೆಯನ್ನು ನಮಗೆ ನೀಡಿದ್ದಾರೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ಅರ್ಜಿ ಹಾಕದೇ ಇರುವ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವುದು ಅಗತ್ಯ. -ಮಂಜುನಾಥ ಭಂಡಾರಿ, ವಿಪ ಸದಸ್ಯರು.