ಬದಿಯಡ್ಕ: ಕಾಸರಗೋಡಿನ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ನೇತೃತ್ವದಲ್ಲಿ ದೀಪದ ಬೆಳಕಿನಲ್ಲಿ ಯಕ್ಷಗಾನ ಪ್ರದರ್ಶನ ಕುಂಬಳೆ ಶ್ರೀ ಗೋಪಾಲಕೃಷ್ಣ ಸನ್ನಿಧಿಯಲ್ಲಿ ವಿಶೇಷ ದೀಪದ ಬೆಳಕಿನಲ್ಲಿ ನಡೆಯಿತು.
ವಿದ್ಯಾರ್ಥಿಗಳಿಂದ ಕಾಲನೇಮಿ ಕಾಳಗ ಹಾಗೂ ಜಾಂಬವತಿ ಕಲ್ಯಾಣ ಪ್ರದರ್ಶನಗಳು ನಡೆದವು. ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ನಿರ್ದೇಶಿಸಿದ್ದರು. ಚೌಕಿಯಲ್ಲಿ ಕೂಡಾ ದೀಪದ ಬೆಳಕಿನ ವ್ಯವಸ್ಥೆ ಮಾತ್ರ ಇತ್ತು.
ಡಾ.ಶ್ರೀಶಕುಮಾರ ಪಂಜಿತ್ತಡ್ಕ, ಡಾ.ವಿದ್ಯಾ ಆನಂದ್ ಕೆಕ್ಕಾರು, ಶಶಿಧರ ಕುದಿಂಗಿಲ, ಅಭಿಜ್ಞಾ ಭಟ್ ಬೊಳುಂಬು, ಮನ್ವಿತ್ ಕೃಷ್ಣ ನಾರಾಯಣಮಂಗಲ, ದೃಶ್ಯಾ ಕುಂಟಾರು, ಪ್ರಜ್ವಲ್ ಅಂಬುಕುಂಜೆ, ಮೋಕ್ಷಾ ಶೆಟ್ಟಿ, ಸುಮನ್, ಬಾನ್ವಿ ಪಾತ್ರ ನಿರ್ವಹಿಸಿದರು. ಭಾಗವತರಾಗಿ ವಾಸುದೇವ ಕಲ್ಲೂರಾಯ ಮಧೂರು, ಚೆಂಡೆ-ಮದ್ದಳೆಗಳಲ್ಲಿ ವೇಣುಗೋಪಾಲ ಭಟ್ ಬರೆಕರೆ, ಸೂರ್ಯನಾರಾಯಣ ಪದಕಣ್ಣಾಯ ಹಾಗೂ ನೇಪಥ್ಯದಲ್ಲಿ ಕೇಶವ ಕಿನ್ಯ, ರಾಜೇಂದ್ರ ವಾಂತಿಚ್ಚಾಲು ಸಹಕರಿಸಿದರು.