ಮಂಜೇಶ್ವರ: ಮೀಯಪದವು ಶ್ರೀ ಗುರುನರಸಿಂಹ ಯಕ್ಷಬಳಗ ತಂಡದ ವಾರ್ಷಿಕ ಕಾರ್ಯಕ್ರಮ ಯಕ್ಷಚಿಗುರು ಇತ್ತೀಚೆಗೆ ದೇಲಂತೊಟ್ಟು ಬಜೆ ಶ್ರೀ ಮಹಾವಿಷ್ಣು ದೇವಸ್ಥಾನ ಕ್ಷೇತ್ರದಲ್ಲಿ ಜರುಗಿತು.
ಯಕ್ಷಚಿಗುರು ಪ್ರಶಸ್ತಿಯನ್ನು ಪೈವಳಿಕೆ ಶ್ರೀಗಣೇಶ ಕಲಾವೃಂದಕ್ಕೆ ಪ್ರದಾನಿಸಲಾಯಿತು. ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ.ಗಿರಿಧರ ರಾವ್ ಎಂ.ಎಸ್ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟಂ, ಮೀಯಪದವು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಕೋಶಾಧಿಕಾರಿ ಜಗದೀಶ ಶೆಟ್ಟಿ ಎಲಿಯಾಣ, ದಾಮೋದರ ಮಯ್ಯ ಬಜೆ ಉಪಸ್ಥಿತರಿದ್ದರು.
ಪೈವಳಿಕೆ ಶ್ರೀಗಣೇಶ ಕಲಾವೃಂದದ ಸಂಚಾಲಕ ದೇವಕಾನ ಶ್ರೀಕೃಷ್ಣ ಭಟ್, ಸುನಿತಾ ಭಟ್ ದೇವಕಾನ, ಗುರುನರಸಿಂಹ ಯಕ್ಷಬಳಗದ ಅಧ್ಯಕ್ಷ ಗಣೇಶ ನಾವಡ ಮೀಯಪದವು, ಗೋಪಾಲಕೃಷ್ಣ ಭಟ್ ಕಾನ, ಜಯಂತ ಸಜಂಕಿಲ, ರಾಧಾಕೃಷ್ಣ ಪೈವಳಿಕೆ ಉಪಸ್ಥಿತರಿದ್ದರು.
ಪ್ರಸಿದ್ಧ ಕಲಾವಿದರಿಂದ ಕರ್ಣ ಭೇದನ ತಾಳಮದ್ದಳೆ ಕೂಟ ಜರುಗಿತು. ಹಿಮ್ಮೇಳದಲ್ಲಿ ಕಾವ್ಯಶ್ರೀ ಅಜೇರು, ಲವಕುಮಾರ್ ಐಲ, ವಂದನಾ ಮಾಲೆಂಕಿ, ಗೌತಮ ನಾವಡ ಮಜಿಬೈಲು ಭಾಗವಹಿಸಿದ್ದು, ಅರ್ಥಧಾರಿಗಳಾಗಿ ವಾಸುದೇವ ರಂಗಾ ಭಟ್ ಮಧೂರು, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ನಾ.ಕಾರಂತ ಪೆರಾಜೆ ಪಾತ್ರ ನಿರ್ವಹಿಸಿದರು.
ರಾತ್ರಿ ಗುರು ನರಸಿಂಹ ಯಕ್ಷಬಳಗ ಮೀಯಪದವು ತಂಡದ ಸದಸ್ಯರು ಹಾಗೂ ಅತಿಥಿ ಕಲಾವಿದರಿಂದ ದಕ್ಷಾಧ್ವರ ಗಿರಿಜಾಕಲ್ಯಾಣ ಯಕ್ಷಗಾನ ಬಯಲಾಟ ಜರುಗಿತು.