ಜಿಲ್ಲೆ

"ಯಕ್ಷ ಸಿಂಧೂರ' ಕಾರ್ಯಕ್ರಮ 21ರಂದು

ಬೆಂಗಳೂರು: ಟೀಮ್​ ಕದಳಿ ವತಿಯಿಂದ ರವೀಂದ್ರ ಕಲಾ ಕ್ಷೇತ್ರದಲ್ಲಿ ಜೂ.21ರಂದು ರಾತ್ರಿ 10ರಿಂದ "ಯಕ್ಷ ಸಿಂಧೂರ' ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ತೆಂಕು&ಬಡಗಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶ್ರೀರಾಮ ಪಟ್ಟಾಭಿಷೇಕ, ಸುದರ್ಶನ ವಿಜಯ ಹಾಗೂ ರುಕ್ಮಿಣಿ ಕಲ್ಯಾಣ ಪ್ರಸಂಗಗಳು ಪ್ರದರ್ಶನಗೊಳ್ಳಲಿದೆ. ಕಲಾವಿದರಾದ ಕೊಳಗಿ ಕೇಶವ ಹೆಗಡೆ, ರಾಮಕೃಷ್ಣ ಹೆಗಡೆ ಹಿಲ್ಲೂರು, ವಿನಯ್​ ಆರ್​.ಶೆಟ್ಟಿ, ಶ್ರೇಯಾ ಆಚಾರ್ಯ ಅಲಂಕಾರು, ಸುರೇಶ ಶೆಟ್ಟಿ ಶಂಕರ ನಾರಾಯಣ, ಬಳ್ಕೂರು ಕೃಷ್ಣಯಾಜಿ, ಅಶೋಕ್​ ಭಟ್​ ಸಿದ್ಧಾಪುರ, ತೋಟಿಮನೆ ಗಣಪತಿ ಹೆಗಡೆ, ಸುಧೀರ್​ ಉಪ್ಪೂರು, ಜಲವಳ್ಳಿ ವಿದ್ಯಾಧರ ರಾವ್​, ಪೆಮುರ್ದೆ ಜಯಪ್ರಕಾಶ್​ ಶೆಟ್ಟಿ, ವಿಶ್ವನಾಥ್​ ಹೆನ್ನಾಬೈಲ್​, ಪ್ರಜ್ವಲ್​ ಕುಮಾರ್​ ಗುರುವಾಯನಕೆರೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಮಾಹಿತಿಗೆ 9036963626, 9945668196 ಸಂಪರ್ಕಿಸಿ.