ಜಿಲ್ಲೆ

ಸುಣ್ಣಂಬಳ ವಿಶ್ವೇಶ್ವರ ಭಟ್‌ರಿಗೆ ಯಕ್ಷ ನಿಧಿ ಪ್ರಶಸ್ತಿ

Mangaluru - Hariprasad Rai



ಮಂಗಳೂರು : ಬಿರುವ ಜವಣೆರ್ ಮಸ್ಕತ್ ಇದರ ವತಿಯಿಂದ ಮಸ್ಕತ್‌ನಲ್ಲಿ ನಡೆದ ಶ್ರೀ ದೇವೀ ಮಹಾತ್ಮೆ ಯಕ್ಷಗಾನ ಪ್ರದರ್ಶನದ ವೇದಿಕೆಯಲ್ಲಿ ಹಿರಿಯ ಯಕ್ಷಗಾನ ವೇಷಧಾರಿ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರಿಗೆ ಯಕ್ಷ ನಿಧಿ ಹಾಗೂ
ಉಪನ್ಯಾಸಕ, ಅರ್ಥಧಾರಿ, ಡಾ. ವಾದಿರಾಜ ಕಲ್ಲೂರಾಯ ಅವರಿಗೆ ಯುವ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗಣ್ಯರಾದ ಆನಂದ ಸನಿಲ್, ಗಂಗಾಧರ ಪೂಜಾರಿ, ಮಿತ್ರ ಹೆರಾಜೆ, ಶಶಿಧರ ಶೆಟ್ಟಿ ಮಲ್ಲಾರ್, ದಿವಾಕರ ಶೆಟ್ಟಿ ಮಲ್ಲಾರ್, ಡಾ. ಅಂಚನ್ ಸಿ ಕೆ , ನರೇಶ್ ಪೈ, ದಿನೇಶ್ ಪೂಜಾರಿ, ಎಸ್. ಡಿ. ಪ್ರಸಾದ್ , ಸೂರ್ಯ ಕುಮಾರ್ ಸುವರ್ಣ, ಲೀಲಾಕ್ಷ ಬಿ ಕರ್ಕೇರ ಮತ್ತು ಸುಚೇತನ ಅಂಚನ್ ಸನ್ಮಾನ ನೆರವೇರಿಸಿದರು.
ನಿತಿನ್ ಹುಣ್ಸೆಕಟ್ಟೆ ಸನ್ಮಾನ ಪತ್ರ ವಾಚನ ವಾಚಿಸಿದರು. ಕದ್ರಿ ನವನೀತ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಗುರುಪ್ರಸಾದ್ ರಾಮ ಅಮೀನ್ ಸ್ವಾಗತಿಸಿ, ಉತ್ತಮ ಕೋಟ್ಯಾನ್ ವಂದಿಸಿದರು.