ಜಿಲ್ಲೆ

ಯಕ್ಷಧ್ರುವ ಪಟ್ಲಾಶ್ರಯ ಯೋಜನೆಯ 26ನೇ ಮನೆ ಹಸ್ತಾಂತರ

Mangaluru - Hariprasad Rai



ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಯಕ್ಷಧ್ರುವ ಪಟ್ಲಾಶ್ರಯ ಯೋಜನೆಯಡಿ 26ನೇ ಮನೆಯ ಹಸ್ತಾಂತರ
ಕಾರ್ಯಕ್ರಮ ವಿಶಿಷ್ಟ ಚೇತನ ಯಕ್ಷಗಾನ ಕಲಾವಿದ ಮನೋಜ್ ಕುಮಾರ್ ವೇಣೂರು ಇವರಿಗೆ ಟ್ರಸ್ಟ್‌ನ ಅಧ್ಯಕ್ಷ
ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಬೆಳ್ತಂಗಡಿ ಘಟಕದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನೆರವೇರಿತು.
ಈ ಮನೆಯ ನಿರ್ಮಾಣದ ವೆಚ್ಚವನ್ನು ಉದ್ಯಮಿ ಶಶಿಧರ ಶೆಟ್ಟಿ, ಬರೋಡ ಇವರು ಕೊಡುಗೆಯಾಗಿ ನೀಡಿದ್ದರು.
ಕಲಾವಿದ ಮನೋಜ್ ಕುಮಾರ್ ಒಂದು ಕಾಲು ಕಳೆದುಕೊಂಡರೂ ಎದೆಗುಂದದೆ ಕೃತಕ ಕಾಲನ್ನು ಜೋಡಿಸಿ ಯಕ್ಷಗಾನ
ಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷ. ಪಟ್ಲಾಶ್ರಯ ಯೋಜನೆಯ 12 ಮನೆಗಳು ನಿರ್ಮಾಣದ
ಕೊನೆಯ ಹಂತದಲ್ಲಿದ್ದು 100 ಮನೆಗಳ ನಿರ್ಮಾಣದ ಯೋಜನೆ ಶೀಘ್ರದಲ್ಲಿ ಸಾಕಾರಗೊಳ್ಳಲಿದೆ ಎಂದು ಪಟ್ಲ ಸತೀಶ್ ಶೆಟ್ಟಿ ಈ ಸಂದರ್ಭ ತಿಳಿಸಿದರು.