ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರಿಗೆ ಪಲಿಮಾರು ಶ್ರೀಗಳು 'ಯಕ್ಷ ವಿದ್ಯಾಮಾನ್ಯ' ಪ್ರಶಸ್ತಿ ಪ್ರದಾನ ಮಾಡಿದರು. ಕಾಣಿಯೂರು ಶ್ರೀ, ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಶ್ರೀ, ಭೀಮನಕಟ್ಟೆ ಶ್ರೀ, ಚೇತನಾ ಹೆಗಡೆ ಉಪಸ್ಥಿತರಿದ್ದರು. 
ಜಿಲ್ಲೆ

ಯಕ್ಷಗಾನದ ಶ್ರೇಷ್ಠ ಕಲಾವಿದ ಕೊಂಡದಕುಳಿ

ಪಲಿಮಾರು ಶ್ರೀ ಆಶೀರ್ವಚನ -- 'ಯಕ್ಷ ವಿದ್ಯಾಮಾನ್ಯ' ಪ್ರಶಸ್ತಿ ಪ್ರದಾನ

ಉಡುಪಿ: ಎರಡು ದಶಕದ ಹಿಂದೆ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ನಿರ್ವಹಿಸಿದ್ದ ಹನುಮಂತನ ಪಾತ್ರ ಇಂದಿಗೂ ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ಯಕ್ಷಗಾನದ ಇಂತಹ ಶ್ರೇಷ್ಠ ಕಲಾವಿದ ಇನ್ನಷ್ಟು ಸಮಯ ರಂಗದಲ್ಲಿ ಪಾತ್ರ ನಿರ್ವಹಿಸುವಂತಾಗಲಿ ಎಂದು ಉಡುಪಿ ಪಲಿಮಾರು ಮಠದ ವಿದ್ಯಾಧಿಶತೀರ್ಥ ಶ್ರೀಪಾದರು ಆಶೀರ್ವದಿಸಿದರು.

ಪಲಿಮಾರಿನಲ್ಲಿ ಇತ್ತೀಚೆಗೆ ನಡೆದ ಹನುಮ ಜಯಂತಿ ಸಂದರ್ಭದಲ್ಲಿ ಪಲಿಮಾರು ಶ್ರೀಗಳು ತಮ್ಮ ಗುರುಗಳಾದ ವಿದ್ಯಾಮಾನ್ಯ ಶ್ರೀಪಾದರ ಹೆಸರಿನಲ್ಲಿ ಪ್ರತಿವರ್ಷ ನೀಡುವ 50 ಸಾವಿರ ರೂ. ನಗದು ಹಾಗೂ ಪುರಸ್ಕಾರವನ್ನೊಳಗೊಂಡ 'ಯಕ್ಷ ವಿದ್ಯಾಮಾನ್ಯ' ಪ್ರಶಸ್ತಿ'ಯನ್ನು ಬಡಗುತಿಟ್ಟಿನ ಶ್ರೇಷ್ಠ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರಿಗೆ ಪ್ರದಾನಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಣಿಯೂರು ಶ್ರೀ, ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಶ್ರೀ, ಭೀಮನಕಟ್ಟೆ ಶ್ರೀ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್​ ಅಭಿನಂದನೆಯ ಮಾತುಗಳನ್ನಾಡಿದರು.

ಕೊಂಡದಕುಳಿ ಅವರ ಪತ್ನಿ ಚೇತನಾ ಹೆಗಡೆ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್​, ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು.

ಈ ದಿನ ನನ್ನ ಪಾಲಿಗೆ ಸಂತಸದ ಕ್ಷಣ. ಕಲಾವಿದನಾದವನು ಅಧ್ಯಯನಶೀಲ ಆಗಿರಬೇಕು. ಕಲಾವಿದರು ತಪಸ್ವಿಗಳು ಎಂದು ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಹೇಳುತ್ತಿದ್ದರು. ಶ್ರದ್ಧೆ ಮತ್ತು ದುಡಿಮೆ ಕಲಾವಿದನನ್ನು ಎತ್ತರಕ್ಕೇರಿಸುತ್ತದೆ. ಕೊಂಡದಕುಳಿ ರಾಮಚಂದ್ರ ಹೆಗಡೆ. ಯಕ್ಷಗಾನ ಕಲಾವಿದ