ಜಿಲ್ಲೆ

ಯಕ್ಸಂಬಾ ಜನತಾ ಶಿಕ್ಷಣ ಸಂಸ್ಥೆ ಕಾರ್ಯ ಶ್ಲಾಘನೀಯ

ಪ್ರಶಾಂತ ಹೂಗಾರ

ಚಿಕ್ಕೋಡಿ ಗ್ರಾಮೀಣ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ನಿರಂತರ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿರುವ ಜನತಾ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಚಿಕ್ಕೋಡಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ವಿಭಾಗೀಯ ವ್ಯವಸ್ಥಾಪಕ ರಾಜೇಶಕುಮಾರ ಹೇಳಿದರು.

ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಜನತಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಜೇಂದ್ರ ಕರಾಳೆ, ಕಾರ್ಯದರ್ಶಿ ಸಂಜೀವ ಕರಾಳೆ, ನಿರ್ದೇಶಕರಾದ ಮಲ್ಲಿಕಾರ್ಜುನ ಕರಾಳೆ, ಯಕ್ಸಂಬಾ ಶಾಖೆ ವ್ಯವಸ್ಥಾಪಕ ರಾಮಕುಮಾರ ಗೌರ ಮಾತನಾಡಿದರು.

ಕೆನರಾ ಬ್ಯಾಂಕ್ ಅಧಿಕಾರಿ ಅರವಿಂದ ಎಂ.ಕೆ., ಭೂಮಿಕಾ ಭಗರಥ, ಮುಖಂಡ ಅರುಣ ಮಗದುಮ್ಮ, ಶಿಕ್ಷಕರಾದ ರಾಹುಲ ಪಾಟೀಲ, ಎಂ.ಎಂ.ಚೌಗಲಾ, ಎಂ.ಎಸ್.ಮುತ್ನಾಳೆ, ಎಸ್.ಆರ್.ಮೋರೆ, ಎಂ.ಎಂ.ಡಾಂಗೆ, ಸುಜಾತಾ ದೇಸಾಯಿ ಇತರರಿದ್ದರು.