ಜಿಲ್ಲೆ

ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಯದುವೀರ್ ಭರ್ಜರಿ ಪ್ರಚಾರ

ಮೈಸೂರು: ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಮುಂದುವರೆಸಿದ್ದೂ, ಭಾನುವಾರ ಭರ್ಜರಿ ಮತಬೇಟೆ ನಡೆಸಿದರು.

ಉದ್ಬೂರು ಗ್ರಾಮದಿಂದ ಪ್ರಚಾರ ಆರಂಭಿಸಿದ ಯದುವೀರ್ ದಿನವಿಡೀ ಕ್ಷೇತ್ರದ ಹತ್ತಾರು ಗ್ರಾಮಗಳಿಗೆ ಭೇಟಿ ನೀಡಿ ಮತ ಬೇಟೆ ನಡೆಸಿದರು. ಕೆಂಚಲಗೂಡು, ಡಿ.ಸಾಲುಂಡಿ, ಧನಗಳ್ಳಿ, ದೇವಗಳ್ಳಿ, ಮುಳ್ಳೂರು, ಅನಗನಹಳ್ಳಿ, ಗೋಪಾಲಪುರ, ಮಾವಿನಹಳ್ಳಿ, ಜಯಪುರ, ಎಸ್.ಕಲ್ಲಹಳ್ಳಿ, ಚುಂಚರಾಯನಹುಂಡಿ, ಮದ್ದೂರು, ಮದ್ದೂರು ಹುಂಡಿ, ಮಂಡನಹಳ್ಳಿ, ಗುಜ್ಜೇಗೌಡನಪುರ, ಹಾರೋಹಳ್ಳಿ, ಅರಸನಕೆರೆ, ಮಾರ್ಬಳ್ಳಿಹುಂಡಿ, ಟಿ.ಕಾಟೂರು, ದಾರಿಪುರ, ಬರಡನಪುರ, ಕೆಲ್ಲಹಳ್ಳಿ, ಮುರುಡಗಳ್ಳಿ, ದೂರ, ದೊಡ್ಡಕಾಟೂರು, ತಳೂರು, ಸಿಂಧುವಳ್ಳಿ, ಬ್ಯಾತಹಳ್ಳಿ, ಕಡಕೊಳ, ಮಂಡಕಳ್ಳಿ, ಗಬಂಡಿಪಾಳ್ಯ, ಹೊಸಹುಂಡಿ ಸೇರಿದಂತೆ ನಾನಾ ಗ್ರಾಮದಲ್ಲಿ ಭರ್ಜರಿ ಪ್ರಚಾರ ನಡೆಸಿದರು.