ಶಹಾಪುರ: ಕುರುಬ ಸಮಾಜವು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಬೇಕಿದೆ. ಯಾರು ಕೀಳಲ್ಲ, ಯಾರು ಮೆಲಲ್ಲ ನಾವೆಲ್ಲರೂ ಒಂದೆ. ಪಕ್ಷಗಳ ಭೇದ ಮರೆತು ಸಮಾಜದ ಒಳಿತಿಗೆ ಎಲ್ಲರ ಕೈಜೋಡಿಸಬೇಕು ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಹೇಳಿದರು.
ಇಲ್ಲಿನ ನಗರಸಭೆಯಲ್ಲಿ ತಾಲೂಕ ಆಡಳಿತದಿಂದ ಶುಕ್ರವಾರ ಆಯೋಜಿಸಿದ ದಾಸ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಅಕ್ಷರ ಜ್ಞಾನ ಬೆಳೆದಷ್ಟು, ಜಾತಿ ತಾರತಮ್ಯ ಕಡಿಮೆಯಾಗುತ್ತಿದೆ. ಪ್ರತಿಯೊಂದು ಸಮುದಾಯದ ಮಹಾನ್ ವ್ಯಕ್ತಿಗಳನ್ನು ಸಂಕುಚಿತಗೊಳಿಸಿ ಒಂದು ಜಾತಿಗೆ ಸೀಮಿತಗೊಳಿಸಬೇಡಿ, ಭಾರತದಲ್ಲಿ ಜಾತಿ ನಿರ್ನಾಮ ಸಾಧ್ಯವಿಲ್ಲ ಎನ್ನುಷ್ಟೆ ಮಟ್ಟಿಗೆ ಅದು ಬೇರೂರಿದ ಸಮಯದಲ್ಲಿ ಅನೇಕರು ಜಾತಿ ತಾರತಮ್ಯದ ವಿರುದ್ಧ ಹೋರಾಡಿದ್ದಾರೆ . ಮಹಾತ್ಮರನ್ನು ಎಲ್ಲ ವರ್ಗದ ಜನತೆ ಗೌರವಿಸಿ ಸ್ಮರಿಸುವಂಥ ವಾತಾವರಣ ನಿರ್ಮಾಣವಾಗಬೇಕು ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಯುವ ಸಾಹಿತಿ ಸಿದ್ದಣ್ಣ ಪೂಜಾರಿ ಯಕ್ಷಿಂತಿ, ಪ್ರತಿಯೊಬ್ಬರೂ ಸಹೋದರತೆ, ಸಮಾನತೆ, ಮಾನವೀಯತೆ ಬೆಳೆಸಿಕೊಳ್ಳಿ, ದಾಸರ ಸಾಲಿನಲ್ಲಿ ಕನಕದಾಸರಿಗೆ ವಿಶಿಷ್ಟ ಸ್ಥಾನವಿದೆ. ಕೀರ್ತನಕಾರರಾಗಿ, ಕವಿಗಳಾಗಿ, ಸಾಹಿತ್ಯ, ಸಂಗೀತ, ಆಧ್ಯಾತ್ಮ, ಸಮಾಜ ಧರ್ಮ ಹೀಗೆ ಹಲವು ಸ್ತರಗಳಲ್ಲಿ ಕನಕದಾಸರ ಸಾಧನೆ ಸ್ಮರಣೀಯವಾಗಿದೆ. ಪ್ರಸ್ತುತ ಕುರುಬ ಸಮುದಾಯ ದೊಡ್ಡ ಹಾಗೂ ಅತಿಸಹಿಷ್ಣತೆಯ ಸಮುದಾಯ ಆದರೆ ಪ್ರ ವಂತಿಕೆಯಲ್ಲಿ ಎಡುವುತ್ತಿದ್ದು, ಸಮಾಜದ ಹಿರಿಯರ ಮಾರ್ಗದರ್ಶನ ಅಗತ್ಯವಾಗಿದೆ ಎಂದರು.
ಅದ್ಧೂರಿ ಮೆರವಣಿಗೆ: ಸಾಮಾಜಿಕ ವ್ಯವಸ್ಥೆಯಲ್ಲಿ ಕನಕದಾಸರ ಕೊಡುಗೆ ಶ್ರೇಷ್ಠವಾಗಿದೆ. ಇವರ ಸಾಧನೆ ಎಂದಿಗೂ ಮರೆಯುವಂತಿಲ್ಲ. ಕನಕದಾಸರ ಕೀರ್ತನೆಗಳು ಸಾಮಾಜಿಕ ಸಮಾನತೆ ಎತ್ತಿ ಹಿಡಿಯುವ ಜತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಯುವ ಮುಖಂಡ ಬಾಪುಗೌಡ ಎಸ್. ದರ್ಶನಾಪುರ ಹೇಳಿದರು.
ಕನಕ ನಗರದಲ್ಲಿರುವ ಕನಕದಾಸರ ನಾಮ-ಫಲಕಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೇರವೇರಿಸಿದರು. ನಂತರ ಭಾವಚಿತ್ರ ಮೆರವಣಿಗೆ ಚಾಲನೆ ನೀಡಿ ಮಾತನಾಡಿದರು. ಈ ವೇಳೆ ಕುರುಬ ಸಮಾಜದ ಮುಖಂಡರು ಕಂಬಳಿ ಹೋದಿಸಿ ಸನ್ಮಾನಿಸಿದರು. ಬಳಿಕ ಡೊಳ್ಳು ಕುಣಿತದೊಂದಿಗೆ ಹಾಲಭಾವಿ ರಸ್ತೆಯಲ್ಲಿರುವ ಕನಕ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ನಗರಸಭೆ ವರೆಗೆ ಅದ್ದೂರಿ ಮೆರವಣಿಗೆ ಸಾಗಿತು.
ಈ ವೇಳೆ ಅಮಾತೆಪ್ಪ ಕಂದಕೂರ, ಶಿವುಮಹಾಂತ ಚಂದಾಪುರ, ಶರಣು ಗದ್ದುಗೆ, ಬಸವರಾಜಪ್ಪಗೌಡ ವಿಭೂತಿಹಳ್ಳಿ, ಗಿರೆಪ್ಪಗೌಡ ಬಾಣತಿಹಾಳ, ಕುರುಬ ಸಮಾಜದ ತಾಲೂಕ ಅಧ್ಯಕ್ಷ ಯಲ್ಲಪ್ಪ ನರಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ರಫೀಕ್ ಚೌಧರಿ, ತಹಸೀಲ್ದಾರ್ ಸಿದ್ಧರೂಢ ಬನ್ನಿಕೊಪ್ಪ, ಖಜಾನಾಧಿಕಾರಿ ಮೋನಪ್ಪ ಶಿರವಾಳ, ನೀಲಕಂಠ ಬಡಿಗೇರ, ಈರಣಗೌಡ ಮಲ್ಲಾಬಾದಿ, ಅಪ್ಪುಗೌಡ ಪಾಟೀಲ್, ಧರ್ಮಣ್ಣ ಹೊತಪೇಠ, ಅಲ್ಲಾ ಪಟೇಲ್ ಮಕ್ತಾಪುರ, ಮಲ್ಲಣ ಉಳ್ಳಂಡಗೇರ, ಶಾಂತಗೌಡ ನಾಗನಟಿಗಿ, ರಾಯಪ್ಪ ಚಲುವಾದಿ, ದೇವಿಂದ್ರಪ್ಪ ನಾಶಿ, ಹಣಮೇಗೌಡ ಮರಕಲ್, ಶಿವರಾಜ ಹೂಗಾರ, ರಾಯಪ್ಪ ಸಾಲಿಮನಿ, ಚನ್ನಬಸ್ಸು ವನದುರ್ಗ, ಮರೆಪ್ಪ ಪ್ಯಾಟಿ, ಶೇಖರ ದೊರಿ, ರಾಚಯ್ಯಸ್ವಾಮಿ, ಅಶೋಕ ದಿನ್ನಿ, ಸಂಗಣ್ಣ ದೊಡ್ಮನಿ, ಹಣಮಂತ್ರಾಯ ಬಿಓ, ಭೀಕ್ಷಣಗೌಡ ಕಾಡಂಗೇರ, ಅಯ್ಯಣ್ಣ ಇನಾಂದಾರ, ಯಮನಪ್ಪ ಅಗಸ್ತಾಳ, ಭೀಮಣ್ಣ ಹೂಗಾರ, ಮಲ್ಲಪ್ಪ ಆಂದೋಲ, ಮಾಳಿಂಗರಾಯ ಮಂಡಗಳ್ಳಿ, ಮಹೇಶ ರಸ್ತಾಪುರ, ಮಲ್ಲಣಗೌಡ ತಿಪ್ಪನಹಳ್ಳಿ, ರವಿ ರಾಜಾಪುರ, ಮುನಿಯಪ್ಪಗೌಡ ನಾಗನಟಿಗಿ, ಗುರು ದೊಡ್ಮನಿ, ಶಿವು ತಳವಾರ, ಬಸಮ್ಮ ರಾಂಪೂರ, ಭೀಮನಗೌಡ ದರಿಯಾಪುರ, ಪಿಐ ಎಸ್.ಎಂ ಪಾಟೀಲ್, ಹಣಮಂತ್ರಾಯಗೌಡ ರಾಕಂಗೇರ, ಮರ್ದಾನಿ ಸಲಾದಪುರ ಇತರರಿದ್ದರು.