ಹನುಮೇಗೌಡ ಬೀರನಕಲ್ 
ಯಾದಗಿರಿ

ಶಾಸಕ ಶರಣಗೌಡ ಬಹಿರಂಗ ಕ್ಷಮೆ ಕೇಳಲಿ

ಜಿಲ್ಲಾ ಟಿಪ್ಪರ್ ಮಾಲೀಕರ ಸಂಘ ಆಗ್ರಹ | 200ಕ್ಕೂ ಹೆಚ್ಚು ಟಿಪ್ಪರ್‌ಗಳೊಂದಿಗೆ ಪ್ರತಿಭಟನೆ ನಾಳೆ

ಶಶಾಂಕ
ಉಮೇಶ ಮುದ್ನಾಳ

ಯಾದಗಿರಿ: ಅಕ್ರಮ ಮರಳು ಸಾಗಿಸುವ, ನಂಬರ್ ಪ್ಲೇಟ್ ಇಲ್ಲದೆ ಓಡಾಡುವ ಮತ್ತು ಓವರ್‌ಲೋಡ್ ಟಿಪ್ಪರ್‌ಗಳಿಗೆ ಬೆಂಕಿ ಹಚ್ಚುವುದಾಗಿ ಶಾಸಕ ಶರಣಗೌಡ ಕಂದಕೂರ ಹೇಳಿಕೆ ವಿರುದ್ಧ ಸಿಡಿದೆದ್ದಿರುವ ಜಿಲ್ಲಾ ಟಿಪ್ಪರ್ ವಾಹನ ಮಾಲೀಕರ ಸಂಘದ ಪದಾಽಕಾರಿಗಳು, ಕೂಡಲೇ ಶಾಸಕರು ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಸೋಮವಾರ ಬೆಳಗ್ಗೆ ೧೦.೩೦ಕ್ಕೆ 100ಕ್ಕೂ ಅಧಿಕ ಟಿಪ್ಪರ್‌ಗಳೊಂದಿಗೆ ಗಂಜ್ ಏರಿಯಾದಿಂದ ಮೆರವಣಿಗೆ ಹೊರಟು ಸುಭಾಷ ಸರ್ಕಲ್‌ನಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಶನಿವಾರ ಮಧ್ಯಾಹ್ನ ತುರ್ತು ಸುದ್ದಿಗೋಷ್ಠಿ ನಡೆಸಿದ ಸಂಘದ ಜಿಲ್ಲಾಧ್ಯಕ್ಷ ರಘಪತಿ ಗೌಡಗೇರಿ, ಖಜಾಂಚಿ ಶಂಶಾಕ್ ನಾಲಡಗಿ, ಅಹಿಂದ ಸಂಘಟನೆ ರಾಜ್ಯ ಮುಖಂಡ ಹನುಮೇಗೌಡ ಬೀರನಕಲ್, ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಕಾರ್ಯದರ್ಶಿ ಉಮೇಶ ಮುದ್ನಾಳ್ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮುಖವಾಗಿ ಮೂರು ಅಂಗಗಳು ಕೆಲಸ ನಿರ್ವಹಿಸುತ್ತವೆ. ಆದರೆ ಶಾಸಕಾಂಗ ವ್ಯಾಪ್ತಿಯಲ್ಲಿರುವ ಕಂದಕೂರ ಟಿಪ್ಪರ್‌ಗಳಿಗೆ ಬೆಂಕಿ ಹಚ್ಚುವುದಾಗಿ ಜಿಲ್ಲಾಽಕಾರಿಗಳಿಗೆ ಹೇಳಿರುವುದನ್ನು ಖಂಡಿಸಿದರು.

ತಕ್ಷಣ ಕ್ಷಮೆ ಕೇಳದಿದ್ದರೆ ಶಾಸಕರ ವಿರುದ್ಧ ಪ್ರಕರಣ ದಾಖಲಿಸುವುದರ ಜತೆ ಅಕ್ರಮ ಮರಳು ದಂಧೆಯಲ್ಲಿ ತೊಡಗುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ ಅವರು, ಅಕ್ರಮ ಮರಳು ಸಾಗಣೆ ಅಥವಾ ಓವರ್‌ಲೋಡ್ ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಆದರೆ ವಾಹನಗಳಿಗೆ ಬೆಂಕಿ ಹಚ್ಚುವ ಎಚ್ಚರಿಕೆ ನೀಡುವುದು ಸರಿಯಲ್ಲ. ಶಾಸಕರು ಜನರ ಮತ ಪಡೆದು ಆಯ್ಕೆಯಾಗಿರುವುದು ಕ್ಷೇತ್ರದ ಅಭಿವೃದ್ಧಿ ಮತ್ತು ಸಮಸ್ಯೆಗಳಿಗೆ ಸ್ಪಂದಿಸಲು. ಅಽಕಾರಿಗಳ ಮೇಲೆ ಒತ್ತಡ ಹೇರುವ ಬದಲು ಕಾನೂನುಬದ್ಧವಾಗಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಟಿಪ್ಪರ್ ಮಾಲೀಕರು ಸಾಲ ಮಾಡಿ ವಾಹನ ಖರೀದಿಸಿದ್ದು, ಕೆಲಸದ ಕೊರತೆಯಿಂದ ಈಗಾಗಲೇ ಸಂಕಷ್ಟದಲ್ಲಿದ್ದರೆ. ಇಂತಹ ಸಂದರ್ಭದಲ್ಲಿ ವಾಹನಗಳಿಗೆ ಬೆಂಕಿ ಹಚ್ಚುವ ಹೇಳಿಕೆ ಮಾಲೀಕರು ಮತ್ತು ಅವರ ಕುಟುಂಬಗಳಲ್ಲಿ ಆತಂಕ ಮೂಡಿಸಿದೆ. ಜನಪ್ರತಿನಿಽಗಳಾದವರು ಜವಾಬ್ದಾರಿ ಅರಿತು ಮಾತನಾಡಬೇಕು ಎಂದರು.

ಸಂಘದ ಪ್ರವೀಣಕುಮಾರ, ಮಲ್ಲಯ್ಯ ರವಿಕುಮಾರ, ಮಲ್ಲು ಮಾಳಿಕೇರಿ, ಭೀಮರಾಯ ಬಂಕಲಗಿ, ಮಲ್ಲಣ್ಣ, ಎಂ.ಡಿ. ಶೋಭ. ಪರುಶುರಾಮ ನಾಯಕ, ಕಾಶೀನಾಥ ಇತರರಿದ್ದರು.

ಸಂಬಂಧಿತ ಅಧಿಕಾರಿಗಳು ಕ್ರಮ ಜರುಗಿಸಲಿ

ಅಕ್ರಮ ಸಾಗಣೆ ನಡೆಯುತ್ತಿದ್ದರೆ ಸಂಬಂಧಿತ ಪೊಲೀಸ್, ಸಾರಿಗೆ ಹಾಗೂ ಗಣಿ ಮತ್ತು ಭೂವಿಜ್ನಾನ ಇಲಾಖೆ ಅಽಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಲಿ. ನಿಯಮ ಉಲ್ಲಂöಸಿದ ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ದಂಡ ವಿಽಸಲಿ. ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲೇಬೇಕು. ಆದರೆ ಶಾಸಕರು ಬೆದರಿಕೆಯ ಭಾಷೆ ಬಳಸುವುದು ಸರಿಯಲ್ಲ, ಹೀಗೆ ಮುಂದುವರಿದರೆ ನಾವು ಸುಮ್ಮನೆ ಕೂಡುವುದಿಲ್ಲ ಎಂದು ಅಹಿಂದ ಜಿಲ್ಲಾ ಮುಖಂಡ ಹನುಮೇಗೌಡ ಬೀರನಕಲ್ ಎಚ್ಚರಿಸಿದ್ದಾರೆ.

ವಾದ-ಪ್ರತಿವಾದ

ಅಕ್ರಮ ಸಾಗಣೆ ಹಲವು ವರ್ಷಗಳಿಂದ ನಡೆಯುತ್ತಿರುವಾಗ ಟಿಪ್ಪರ್ ಮಾಲೀಕರ ಸಂಘದ ಜವಾಬ್ದಾರಿ ಏನು? ಅಕ್ರಮ ಸಾಗಣೆಯಲ್ಲಿ ತೊಡಗಿರುವ ವಾಹನಗಳ ಮಾಹಿತಿ ಸಂಘದ ಬಳಿ ಇದೆಯೇ? ನಂಬರ್ ಪ್ಲೇಟ್ ಇಲ್ಲದ ವಾಹನಗಳ ವಿರುದ್ಧ ಸಂಘ ಏಕೆ ಕ್ರಮಕ್ಕೆ ಮುಂದಾಗಿಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹನುಮೇಗೌಡ, ಅಕ್ರಮ ಸಾಗಣೆಯನ್ನು ಸಂಘ ಸಮರ್ಥಿಸುವುದಿಲ್ಲ. ಅಕ್ರಮದಲ್ಲಿ ತೊಡಗಿರುವ ವಾಹನಗಳ ಮಾಹಿತಿ ದೊರೆತರೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲು ಸಿದ್ಧರಿದ್ದೇವೆ. ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಮ್ಮ ವಿರೋಧವಿಲ್ಲ ಎಂದರು. ಕೆಲ ಟಿಪ್ಪರ್‌ಗಳಲ್ಲಿ ನಂಬರ್ ಪ್ಲೇಟ್ ಇಲ್ಲದಿರುವುದಕ್ಕೆ ಹಣಕಾಸು ಸಂಸ್ಥೆ ಸಾಲದ ಕಂತುಗಳ ಹಿನ್ನೆಲೆ ಕಾರಣವಾಗಿರಬಹುದು ಎಂದು ಹೇಳಿದರು. ಈ ವಿಚಾರವಾಗಿ ಮತ್ತಷ್ಟು ಪ್ರಶ್ನೆಗಳನ್ನು ಮುಂದಿಟ್ಟಾಗ ಸಂಘದ ಪ್ರತಿನಿಽಗಳು ಮತ್ತು ಪತ್ರಕರ್ತರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಅಕ್ರಮ ಸಾಗಣೆ ತಡೆಯುವ ಜವಾಬ್ದಾರಿ ಅಽಕಾರಿಗಳು, ವಾಹನ ಮಾಲೀಕರು ಹಾಗೂ ಸಂಘ ಸೇರಿ ಎಲ್ಲರದ್ದಾಗಿದೆ ಎಂದು ಪತ್ರಕರ್ತರು ಪ್ರತಿಪಾದಿಸಿದರು.