ಯಾದಗಿರಿ ತಾಲೂಕಿನ ಎಂ.ಹೊಸಳ್ಳಿಯಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಗ್ರಾಮಸ್ಥರು ಹಾಗೂ ತಾಂಡಾದ ನಿವಾಸಿಗಳು ಬುಧವಾರ ಡಿಸಿಗೆ ಮನವಿ ಸಲ್ಲಿಸಿದರು. ಭೀಮರೆಡ್ಡಿ ಪೊಲೀಸ್ ಪಾಟೀಲ್, ಮಹಿಪಾಲರೆಡ್ಡಿಗೌಡ ಪೊಲೀಸ್ ಪಾಟೀಲ್, ಭರತೇಶಗೌಡ ಪೊಲೀಸ್ ಪಾಟೀಲ್, ಬಸ್ಸುಗೌಡ ಹೊಸಳ್ಳಿ, ಭೀಮರೆಡ್ಡಿ ನಿಲಹಳ್ಳಿ ಇತರರಿದ್ದರು. 
ಯಾದಗಿರಿ

ಯುಜಿಡಿ ಕಾಮಗಾರಿ ಕೂಡಲೇ ನಿಲ್ಲಿಸಿ

ಎಂ.ಹೊಸಳ್ಳಿ ಹಾಗೂ ತಾಂಡಾ ನಿವಾಸಿಗಳಿಂದ ಜಿಲ್ಲಾಧಿಕಾರಿಗೆ ಮನವಿ

ಯಾದಗಿರಿ: ತಾಲೂಕಿನ ಎಂ.ಹೊಸಳ್ಳಿ ಗ್ರಾಮದಲ್ಲಿ ನಡೆದಿರುವ ಯುಜಿಡಿ ಕಾಮಗಾರಿ ಕೂಡಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ತಾಂಡಾ ನಿವಾಸಿಗಳು ಬುಧವಾರ ಜಿಲ್ಲಾಽಕಾರಿಗೆ ಮನವಿ ಸಲ್ಲಿಸಿದರು.

ಈ ಕಾಮಗಾರಿ ರದ್ದುಪಡಿಸುವಂತೆ ಈ ಹಿಂದೆ ಕೂಡ ಮನವಿ ಮಾಡಲಾಗಿತ್ತು. ಆದರೂ ಕಾಮಗಾರಿ ನಿರಂತರವಾಗಿ ನಡೆಯುತ್ತಿದೆ. ಕಾರಣ ಈ ಕಾಮಗಾರಿಯಿಂದ ಗ್ರಾಮ ಮತ್ತು ತಾಂಡಾ ಸೇರಿ ಕೋಯಿಲೂರು ಗ್ರಾಮಗಳಿಗೆ ವಾಯು ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹೀಗಾಗಿ ಕೂಡಲೇ ಇದನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

ಎಂ.ಹೊಸಳ್ಳಿ ಗ್ರಾಮ ನಗರಸಭೆ ವ್ಯಾಪ್ತಿಗೆ ಒಳಪಟ್ಟಿದ್ದು,ನ ಇಲ್ಲಿ ಎನ್‌ಎ ಮಾಡಿ ನಿವೇಶನ ಹಾಕಲಾಗಿದೆ. ಕಾರಣ ಕೂಡಲೇ ಇದನ್ನು ಸ್ಥಗಿತಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಭೀಮರೆಡ್ಡಿ ಪೊಲೀಸ್ ಪಾಟೀಲ್, ಮಹಿಪಾಲರೆಡ್ಡಿಗೌಡ ಪೊಲೀಸ್ ಪಾಟೀಲ್, ಭರತೇಶಗೌಡ ಪೊಲೀಸ್ ಪಾಟೀಲ್, ಬಸ್ಸುಗೌಡ ಹೊಸಳ್ಳಿ, ಭೀಮರೆಡ್ಡಿ ನಿಲಹಳ್ಳಿ, ಅಶೋಕರೆಡ್ಡಿ, ಯಂಕಪ್ಪ ನಾಟಿಕಾರ, ದೇವೇಂದ್ರಪ್ಪ ನಾಟಿಕಾರ, ಬಾಲಪ್ಪ, ಮಹಾದೇವ ಇತರರಿದ್ದರು.