ಯಾದಗಿರಿಯಲ್ಲಿ ಭಾನುವಾರ ನಡೆದ ಹಿಂದುಳಿದ ವರ್ಗಗಳ ಚಿಂತನಾ ಮಂಥನ ಸಭೆಯಲ್ಲಿ ಕರ್ನಾಟಕ ಸ್ವಾಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ಜಿ.ಬಿ ವಿನಯಕುಮಾರ ಮಾತನಾಡಿದರು. ಕುರುಬ ಸಂಘದ ಜಿಲ್ಲಾಅಧ್ಯಾಕ್ಷ ಮಲ್ಲಣ್ಣ ಐಕೂರ, ವಿಶ್ವನಾಥ್ ನೀಲಹಳ್ಳಿ, ಕಾಳಪ್ಪ ಕವತಿ, ರಾಜಶೇಖರ್.ಕೆ, ಹೊನ್ನಪ್ಪ ಇತರರಿದ್ದರು. 
ಯಾದಗಿರಿ

ಮೂರು ಪಕ್ಷಗಳಿಂದ ಅನ್ಯಾಯ

ಅಧ್ಯಕ್ಷ ಜಿ.ಬಿ ವಿನಯಕುಮಾರ ಆರೋಪ | ಹಿಂದುಳಿದ ವರ್ಗಗಳ ಚಿಂತನಾ ಮಂಥನ ಸಭೆ

ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ವರ್ಗಗಳ ಸಮಾಜಕ್ಕೆ ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ರಾಜಕೀಯವಾಗಿ ದೊಡ್ಡಮಟ್ಟದ ಅನ್ಯಾಯಾವಾಗಿದೆ ಎಂದು ಕರ್ನಾಟಕ ಸ್ವಾಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ಜಿ.ಬಿ.ವಿನಯಕುಮಾರ ಆರೋಪಿಸಿದ್ದಾರೆ.

ನಗರದ ತಾಲೂಕು ಕುರುಬ ಸಂಘದ ಕಚೇರಿಯಲ್ಲಿ ಭಾನುವಾರ ಕರೆದಿದ್ದ ಚಿಂತನ ಮಂಥನ ಸಭೆಯಲ್ಲಿ ಮಾತನಡಿದ ಅವರು, ಕಕ ಭಾಗದಲ್ಲಿ ಹಿಂದುಳಿದ ಸಮುದಾಯ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ರಾಜಕೀಯ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದು ಇದಕ್ಕೆ ಪ್ರಮುಖ ಕಾರಣ ಎಂದರೆ ಈ ಮೂರು ಪಕ್ಷಗಳು. ಇವು ಕೇವಲ ನಮ್ಮನ್ನು ಮತಬ್ಯಾಂಕ್ ಆಗಿ ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣ ಮರೆದಿದ್ದಾರೆ ಎಂದು ಅವರು ದೂರಿದರು.

ಹಿಂದುಳಿದ ವರ್ಗದವರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸುವುದರ ಜತೆಗೆ ಶೈಕ್ಷಣಿಕ, ಆರ್ಥಿಕವಾಗಿ ಸದೃಢರಾಗಬೆಕು. ಜತೆಗೆ ಎಲ್ಲರೂ ಸೇರಿ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಬೇಕಿದೆ ಅಂದಾಗ ಮಾತ್ರ ನಾವು ಕೂಡ ರಾಜಕೀಯವಾಗಿ ಬೆಳೆಯಲು ಸಾಧ್ಯ ಎಂದರು.

ಕುರುಬ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ ಪ್ರಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಮುಖಂಡರುಗಳಾದ ವಿಶ್ವನಾಥ್ ನೀಲಹಳ್ಳಿ, ಕಾಳಪ್ಪ ಕವತಿ, ರಾಜಶೇಖರ್.ಕೆ, ಹೊನ್ನಪ್ಪ ಮುಸ್ಟೂರ, ಹಣಮಂತ್ರಾಯಗೌಡ ಪೊಲೀಸ್ ಪಾಟೀಲ್, ಸೂರ್ಯಕಾಂತ ಅಲಿಪುರ, ಶ್ರೀಶೈಲ್ ಪೂಜಾರಿ, ನರಸಪ್ಪ ಕವಡಿ, ಹೊನ್ನೇಶ್ ಬಳಿಚಕ್ರ, ಯಂಕಪ್ಪ ಬಂಗ್ಲಿ, ಮೊಹಮ್ಮದ್ ಜಾವಿದ, ದೇವೇಂದ್ರಪ್ಪ ಕುಂಬಾರ ಇತರರಿದ್ದರು. ಕುರುಬ ಸಂಘ ಜಿಲ್ಲಾಧ್ಯಕ್ಷ ಶಿವಕುಮಾರ ಮುನಗಲ್ ನಿರೂಪಿಸಿ ವಂದಿಸಿದರು.