ಯಾದಗಿರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಫಾರ್ಮಾಸಿಸ್ಟ್ ದಿನ ಕಾರ್ಯಕ್ರಮದಲ್ಲಿ ಡಿಎಚ್‌ಒ ಡಾ.ಮಹೇಶ ಬಿರಾದಾರ, ಡಾ.ಡಿ.ಆರ್.ಶಿವಪ್ಪ, ಡಾ.ಮಲ್ಲನಗೌಡ ಎಸ್.ಪಾಟೀಲ್, ಸಂತೋಷ ಕುಸುಮಾ, ಡಾ.ರಿಜ್ವಾನಾ ಆಫ್ರೀನ್, ಡಾ.ಮಲ್ಲಪ್ಪ ಕೆ.ನಾಯ್ಕಲ್, ಡಾ.ಪದ್ಮಾನಂದ ಗಾಯಕ್ವಾಡ್, ಡಾ.ರಾಜಾ ವೆಂಕಪ್ಪ ನಾಯಕ್, ಮಲ್ಲನಗೌಡ ಕೌಳೂರು ಇತರರಿದ್ದರು. 
ಯಾದಗಿರಿ

ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಿ

ರಾಷ್ಟ್ರೀಯ ಅಧ್ಯಕ್ಷ ಡಾ.ದೇಸಾಯಿ ಸಲಹೆ | ಯಾದಗಿರಿಯಲ್ಲಿ ಫಾಮಾಸಿಸ್ಟ್ ದಿನ ಆಚರಣೆ

ಯಾದಗಿರಿ: ಫಾರ್ಮಾಸಿಸ್ಟ್ಗಳು ಭವಿಷ್ಯದ ಆರೋಗ್ಯದ ಕಾಳಜಿಯೊಂದಿಗೆ ಸಾರ್ವಜನಿಕರ ಆರೋಗ್ಯ ಕಾಳಜಿ ವಹಿಸಬೇಕು ಎಂದು ಅಖಿಲ ಭಾರತೀಯ ಫಾರ್ಮಾಸಿಸ್ಟ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಬಿ.ಎಸ್.ದೇಸಾಯಿ ಹೇಳಿದರು.

ನಗರದ ಡಿಎಚ್‌ಒ ಕಚೇರಿಯಲ್ಲಿ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದಿಂದ ಮಂಗಳವಾರ ಹಮ್ಮಿಕೊಂಡ ವಿಶ್ವ ಫಾರ್ಮಾಸಿಸ್ಟ್ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೈದ್ಯರು ರೋಗ ನಿರ್ಣಯ ಮಾಡಿದರೆ ಆ ಚಿಕಿತ್ಸೆಯನ್ನು ಯಶಸ್ಸು ಆಗಲು ಫಾರ್ಮಾಸಿಸ್ಟ್ಗಳು ಔಷಧ ನೀಡುವ ಮೂಲಕ ಗುಣಮುಖರಾಗುವಲ್ಲಿ ಮುಖ್ಯ ಪಾತ್ರವಹಿಸುತ್ತಾರೆ ಎಂದರು.

ರೋಗಿಗಳಿಗೆ ಔಷಧ ನೀಡುವ ಫಾರ್ಮಾಸಿಸ್ಟ್ಗಳು ಅವು ಕೊಡುವ ನೀಡುವ ಮುನ್ನ ಅವುಗಳ ಕಡ್ಡಾಯವಾಗಿ ಪರಿಶೀಲಿಸಿ, ಯಾವುದೇ ತಪ್ಪು ಆಗದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ತಪ್ಪು ಮಾಡಿದರೆ ರೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದರು.

ಸರ್ಕಾರಿ ಆಸ್ಪತ್ರೆ, ಕಚೇರಿಯಲ್ಲಿ ಕೆಲಸ ಮಾಡುವ ಫಾರ್ಮಾಸಿಸ್ಟ್ಗಳು ತಾಳ್ಮೆಯಿಂದ ಕೆಲಸ ಮಾಡಬೇಕು. ಪ್ರೀತಿ ವಿಶ್ವಾಸದಿಂದ ತಮ್ಮ ಸೇವೆ ಮಾಡಬೇಕಿದೆ. ಇತ್ತಿಚೆಗೆ ಮೇಡಿಕಲ್ ಸರ್ಟಿಫಿಕೇಟ್ ದುರುಪಯೋಗವಾಗುತ್ತಿದೆ ಇದನ್ನು ಕಡಿವಾಣ ಹಾಕಬೇಕಿದೆ. ರಾಜ್ಯದಲ್ಲಿ ಔಷಧಗಳ ಸಂಗ್ರಹಿಸಲು ಸರಿಯಾದ ಔಷಧ ಉಗ್ರಾಣಗಳ ಅವಶ್ಯಕತೆ ಇದೆ ಎಂದು ತಿಳಿಸಿದರು.

ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಿ

ಡಿಎಚ್‌ಒ ಡಾ.ಮಹೇಶ್ ಬಿರಾದಾರ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಎಲ್ಲ ಆಸ್ಪತ್ರೆಗಳಲ್ಲಿ ಫಾರ್ಮಾಸಿಸ್ಟ್ರು ಔಷಧಗಳನ್ನು ರೋಗಿಗಳಿಗೆ ಅರ್ಥವಾಗುವ ರೀತಿಯಲ್ಲಿ ತಿಳಿ ಹೇಳುತ್ತಾರೆ. ಅವರು ಸಹ ರೋಗಿಗಳ ಆರೋಗ್ಯದ ಕಾಳಜಿ ವಹಿಸುತ್ತಾರೆ ಎಂದರು. ಜಿಲ್ಲಾ ನೋಡಲ್ ಅಧಿಕಾರಿ ಡಾ.ಡಿ.ಆರ್.ಶಿವಪ್ಪ ಮಾತನಾಡಿ, ಫಾರ್ಮಾಸಿಸ್ಟ್ ಅವರ ಜವಾಬ್ದಾರಿ ಪ್ರಮುಖವಾಗಿದೆ. ವೈದ್ಯರು ಬರೆದ ಔಷಧಗಳನ್ನು ಸರಿಯಾಗಿ ನೀಡಬೇಕಿದೆ. ಔಷಧಗಳ ಸಂಗ್ರಹದ ಬಗ್ಗೆ ಆನ್‌ಲೈನ್ ಮಾಹಿತಿಯು ಸರಿಯಾಗಿ ಅಪಡೆಟ್ ಮಾಡಬೇಕಿದೆ. ಔಷಧಗಳನ್ನು ಕೊಟ್ಟಿಲ್ಲವೆಂದು ರೋಗಿಗಳು ವಾಪಸ್ ಹೋಗದಂತೆ ಎಚ್ಚರಿಕೆ ವಹಿಸಿ ಅಗತ್ಯ ಔಷಧಗಳನ್ನು ತಮ್ಮ ಸಂಸ್ಥೆಯಲ್ಲಿ ಇಟ್ಟುಕೊಳ್ಳಬೇಕು ಎಂದರು.

ಜಿಲ್ಲಾ ಸರ್ವೇಕ್ಷಣಾಽಕಾರಿ ಡಾ.ಮಲ್ಲನಗೌಡ ಎಸ್.ಪಾಟೀಲ್, ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ ಅಧ್ಯಕ್ಷ ಸಂತೋಷ ಕುಸುಮಾ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ರಿಜ್ವಾನಾ ಆಫ್ರೀನ್, ಡಾ.ಮಲ್ಲಪ್ಪ ಕೆ.ನಾಯ್ಕಲï, ಡಾ.ಪದ್ಮಾನಂದ ಗಾಯಕ್ವಾಡ್, ಡಾ.ರಾಜಾ ವೆಂಕಪ್ಪ ನಾಯಕ್, ಡಾ.ಹಣಮಂತರಡ್ಡಿ ಮದನಿ, ಡಾ.ಸಂಜೀವ್‌ಕುಮಾರ ರಾಯಚೂರುಕರ್, ಡಾ.ಎಂ.ಎ.ಸಾಜೀದ್, ಡಾ.ಜ್ಯೋತಿ ಕಟ್ಟಿಮನಿ, ಡಾ.ಯಲ್ಲಪ್ಪ, ಮಲ್ಲನಗೌಡ ಕೌಳೂರು, ರಾಯಪ್ಪಗೌಡ ಹುಡೇದ್, ಅಶೋಕ್ ಕಲಾಲ್, ವಿಜಯಕುಮಾರ್ ಸೌದ್ರಿ, ಅಬ್ದುಲ್ ರಫೀಕ್, ಮಹ್ಮದ್ ಇಲಿಯಾಸ್, ಸುರೇಶ್ ಮೊರಗೇರಿ, ವಿಜಯಕುಮಾರ್, ಉಮೇಶ್ ಬಾಬು, ಹಾರೂನ್ ರಷೀದ್, ಸಾಹೇಬಗೌಡ, ಎನ್.ಗಿರೀಶ್ ಇತರರಿದ್ದರು. ಮಲ್ಲಿಕಾರ್ಜುನ ಹುಬ್ಬಳ್ಳಿ ನಿರೂಪಿಸಿ ವಂದಿಸಿದರು.