ಮಲ್ಲಾಬಾದ ಏತ ನೀರಾವರಿಯ ಮುಖ್ಯ ಕಾಲುವೆಗೆ ಹೊಂದಿರುವ ಏತ ನೀರಾವರಿ ಟೆಂಡರ್ ಪ್ರಕ್ರಿಯೆ ಸೇರಿ ವಿವಿಧ ಬೇಡಿಕೆಗೆ ಆಗ್ರಹಿಸಿ ಸಗರನಾಡು ಜಿಲ್ಲಾ ರೈತ ಕ್ಷೇಮಾಭಿವೃದ್ಧಿ ಸಂಘದ ಪದಾಽಕಾರಿಗಳು ಗುರುವಾರ ಕೆಂಭಾವಿಯಲ್ಲಿ ಶಾಸಕ ಶರಣಬಸಪ್ಪ ದರ್ಶನಾಪುರ ಅವರಿಗೆ ಮನವಿ ಸಲ್ಲಿಸಿದರು. ಭೀಮನಗೌಡ ಕಾಚಾಪುರ, ಎಚ್. ಆರ್. ಬಡಿಗೇರ, ಶಿವನಗೌಡ ಮಾಲಿಪಾಟೀಲ್, ಮಂಜುನಾಥ ದೇಸಾಯಿ, ಹಳ್ಳೆಪ್ಪ ಇದ್ದರು. 
ಯಾದಗಿರಿ

ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ

ಸಂಘದ ಜಿಲ್ಲಾಧ್ಯಕ್ಷ ಭೀಮನಗೌಡ ಆಗ್ರಹ | ಶಾಸಕ ದರ್ಶನಾಪುರಗೆ ಮನವಿ

ಕೆಂಭಾವಿ: ಮಲ್ಲಾಬಾದ ಏತ ನೀರಾವರಿಯ ಮುಖ್ಯ ಕಾಲುವೆಗೆ ಹೊಂದಿರುವ ಏತ ನೀರಾವರಿ ಟೆಂಡರ್ ಪ್ರಕ್ರಿಯೆ ಸೇರಿ ವಿವಿಧ ಬೇಡಿಕೆಗೆ ಆಗ್ರಹಿಸಿ ಗುರುವಾರ ಸಗರನಾಡು ಜಿಲ್ಲಾ ರೈತ ಕ್ಷೇಮಾಭಿವೃದ್ಧಿ ಸಂಘದ ಪದಾಽಕಾರಿಗಳು ಶಾಸಕ ಶರಣಬಸಪ್ಪ ದರ್ಶನಾಪುರ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಭೀಮನಗೌಡ ಕಾಚಾಪುರ, ರೈತರ ಜೀವನಾಡಿಯಾಗಿ ಹೊರಹೊಮ್ಮಲಿರುವ ಮಲ್ಲಾಬಾದ ಏತ ನೀರಾವರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಲ್ಲಿ ಈ ಭಾಗದ ರೈತರಿಗೆ ವರದಾನವಾಗಲಿದೆ. ಸುಮಾರು ೧೦೦ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲು ಸರ್ಕಾರ ಮುಂದಾಗಿದೆ ಎಂದು ಶಾಸಕರು ಕಳೆದ ವರ್ಷ ನಗನೂರನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ವೇಳೆ ಭರವಸೆ ನೀಡಿದ್ದರು. ಆದರೆ ಸದರಿ ಏತ ನೀರಾವರಿಯ ಕಾಲುವೆಗೆ ಹೊಂದಿಕೊAಡಿರುವ ಕಾಲುವೆ ಸಂಖ್ಯೆ ೧, ೨ ೩ರಲ್ಲಿ ಈಗಾಗಲೇ ೨ ಮತ್ತು ೩ರಲ್ಲಿ ಕಾಮಗಾರಿ ಪೂರ್ಣಹಂತಕ್ಕೆ ಬಂದಿರುತ್ತದೆ. ಆದರೆ ಮುಖ್ಯವಾಗಿ ಇರುವ ಕಾಲುವೆ ಸಂಖ್ಯೆ ೧ರಲ್ಲಿ ಈವರೆಗೆ ಯಾವುದೇ ತರಹದ ಕಾಮಗಾರಿ ಆರಂಭವಾಗಿಲ್ಲ. ಹೀಗಾಗಿ ಶೀಘ್ರ ಈ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ರೈತ ಮುಖಂಡ ಎಚ್.ಆರ್.ಬಡಿಗೇರ, ಶಿವನಗೌಡ ಮಾಲಿಪಾಟೀಲ್, ಮಂಜುನಾಥ ದೇಸಾಯಿ, ಹಳ್ಳೆಪ್ಪ, ಗೊಲ್ಲಾಳಪ್ಪ, ನಾಗಪ್ಪ, ಪ್ರವೀಣ, ಮಡಿವಾಳಪ್ಪ ಇತರರಿದ್ದರು.