ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ವಾದ್ರಾ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಯಾದಗಿರಿಯಲ್ಲಿ ಗುರುವಾರ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ನೀಲಕಂಠ ಬಡಿಗೇರ, ಬಾಷುಮೀಯಾ ವಡಗೇರಾ, ಭೀಮರಾಯ ಠಾಣಾಗುಂದಿ, ಇರ್ಪಾನ್ ಬಾದಲ್, ಮಾಯಾ ಆರ್.ನಾಯಕ ಇತರರಿದ್ದರು. 
ಯಾದಗಿರಿ

ಕೇಂದ್ರ ಸರ್ಕಾರದ ವಿರುದ್ಧ ಕೈ ಆಕ್ರೋಶ

ರಾಹುಲ್ ಗಾಂಧಿ-ಪ್ರಿಯಾಂಕಾ ವಾದ್ರಾ ಬಂಧನಕ್ಕೆ ಕಿಡಿ | ಪ್ರಕರಣ ವಾಪಸ್ ಪಡೆಯಲು ಆಗ್ರಹ

ಯಾದಗಿರಿ: ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್‌ಕುಮಾರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ವಾದ್ರಾ ಮತ್ತು ಕಾರ್ಯಕರ್ತರನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಗ್ರಾಮೀಣ ಮತ್ತು ನಗರ ಘಟಕಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಗುರುವಾರ ಸಂಜೆ ಸುಭಾಷ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಎಲ್ಲರಿಗೂ ಹಕ್ಕಿದೆ. ಈ ನಿಟ್ಟಿನಲ್ಲಿ ಎಸ್‌ಐಆರ್‌ನಲ್ಲಿ ನಡೆದ ತಪ್ಪುಗಳನ್ನ ಜನರಿಗೆ ತಿಳಿಸುವ ಮೂಲಕ ಚುನಾವಣಾ ಆಯೋಗದ ಆಯುಕ್ತರನ್ನು ವಜಾಗೊಳಿಸುವಂತೆ ಆಗ್ರಹಿಸಿ ಹೋರಾಟ ಮಾಡುತ್ತಿರುವ ನಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ವಾದ್ರಾ ಅವರನ್ನು ಕಾರಣವಿಲ್ಲದೆ ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು ಖಂಡನೀಯ. ಅವರ ವಿರುದ್ಧ ದಾಖಲಾಗಿರುವ ಪ್ರಕರಣ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ನೀಲಕಂಠ ಬಡಿಗೇರ, ಹಿರಿಯ ಮುಖಂಡ ಬಾಷುಮೀಯಾ ವಡಗೇರಾ, ಭೀಮರಾಯ ಠಾಣಾಗುಂದಿ, ಇರ್ಪಾನ್ ಬಾದಲ್, ಮಾಯಾ ಆರ್.ನಾಯಕ, ಜನವಿರೋಧ ಕೆಲಸಗಳಲ್ಲಿ ತೊಡಗಿರುವ ಕೇಂದ್ರ ಸರ್ಕಾರ ವಿನಾಃಕಾರಣ ನಮ್ಮ ಪಕ್ಷದ ನಾಯಕರನ್ನು ಬಂಧಿಸಿದ್ದನ್ನು ಖಂಡಿಸಿದರು. ಎಸ್‌ಐಆರ್‌ನಲ್ಲಿ ಅನೇಕ ದೋಷಗಳಿದ್ದು, ಅವುಗಳನ್ನು ಪ್ರಶ್ನೆ ಮಾಡಿದರೆ ಕೇಂದ್ರ ಸರ್ಕಾರವು ಸೇಡಿನ ಕ್ರಮಕ್ಕೆ ಮುಂದಾಗಿದೆ ಆಕ್ರೋಶ ವ್ಯಕ್ತಪಡಿಸಿ, ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್‌ಕುಮಾರ್ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಈಟೆ, ರಾಘವೇಂದ್ರ ಮಾನಸಗಲï, ಬಾಬುರಾವ ಕಾಡ್ಲೂರ, ಶರಣಗೌಡ ಕುರಕುಂದಿ, ಲಚ್ಚಮಾರೆಡ್ಡಿ, ಕೃಷ್ಣ ದಾಸನಕೇರಿ, ಬಾಬುಗೌಡ ಮಾಚನೂರ, ಲಕ್ಷ್ಮಣ ರಾಠೋಡ್, ಚಂದ್ರಕಾಂತ ಮುನಿಯಪ್ಪನೊರ, ಸಾಬರೆಡ್ಡಿ ಕಲಬುರಗಿ, ಕಾಂಗ್ರೆಸ್ ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ಸಾಯಿಬಣ್ಣ ಕೆಂಗೂರಿ, ನಿಜಲಿಂಗ ದೋರನಹಳ್ಳಿ, ಸುರೇಶ ಮಡ್ಡಿ, ಅಭೀಷೇಕ, ಹಣಮಂತರಾಯ ತೆಕರಾಳ, ಜಲಾಲಸಾಬ ಉಳ್ಳೆಸುಗುರು, ಶಿವು ಬೆಳಗುಂದಿ ಸೇರಿದಂತೆಯೇ ಇತರರಿದ್ದರು.ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಗೃಹ ಸಚಿವ ಅಮೀತಾ ಷಾ ಅವರ ವಿರುದ್ಧ ಘೋಷಣೆ ಕೂಗಿದರು.