ಯಾದಗಿರಿ: ಸ್ಪರ್ಧಾತ್ಮಕ ಯುಗದಲ್ಲಿ ಆರ್ಯವೈಶ್ಯ ಯುವಜನತೆ ಉದ್ಯಮ, ನವೋದ್ಯಮ ಹಾಗೂ ಜಾಗತಿಕ ಮಟ್ಟದ ಸದುಪಯೋಗ ಪಡಿಸಿಕೊಂಡು ಮುನ್ನಡೆಯಲು ವೇದಿಕೆ ಕಲ್ಪಿಸುವ ಉದ್ದೇಶದಿಂದ ಡಿಸೆಂಬರ್‌ನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಷನ್ ಸಮ್ಮಿಟ್ (ಜಿಎವಿಎಸ್) ಆಯೋಜಿಸಲಾಗಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಜಿಲ್ಧ್ಯಲಾಧ್ಕ್ಷಯಾ ಸುದರ್ಶನ್ ಚಿತ್ರಾಳ ತಿಳಿಸಿದ್ದಿರೆ ಅರೆ.
ಕಾರ್ಯಕ್ರಮವನ್ನು ದೇಶದ ಉಪರಾಷ್ಟçಪತಿ ಉದ್ಘಾಟಿಸಲಿದ್ದು, ೯ ಕೇಂದ್ರ ಸಚಿವರು, ೬ ರಾಜ್ಯಗಳ ಮುಖ್ಯಮಂತ್ರಿ, ೩೫೦ಕ್ಕೂ ಅಽಕ ನವೋದ್ಯಮಿಗಳು. ೩೫ಕ್ಕೂ ಹೆಚ್ಚು ಅಂತಾರಾಷ್ಡ್ರೀಯ ಭಾಷಣಕಾರರು, ೩೫ ವಿಶ್ವವಿದ್ಯಾಲಯಗಳು ಹಾಗೂ ೨೦೦ ಕಾಲೇಜುಗಳ ವಿದ್ಯಾರ್ಥಿಗಳು ಸೇರಿ ರಾಷ್ಟç ಮತ್ತು ಅಂತಾರರಾಷ್ಟ್ರೀಯ ಮಟ್ಟದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಲಕ್ಷಕ್ಕೂ ಅಽಕ ಸಮಾಜದ ಬಾಂಧವರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಯುವಜನತೆಯ ಭವಿಷ್ಯಕ್ಕೆ ಹೊಸ ದಿಕ್ಕು ತೋರಿಸುವ ವೇದಿಕೆಯಾಗಲಿದೆ ಎಂದು ಅವರು ಮಾಹಿತಿ ನೀಡಿದರು. ಸ್ಪರ್ಧಾತ್ಮಕ ಯುಗದಲ್ಲಿ ಉದ್ಯಮ ಕ್ಷೇತ್ರದಲ್ಲಿ ಆರ್ಯವೈಶ್ಯ ಸಮುದಾಯದ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದೊಂದಿಗೆ ಮಹಾಸಭಾಧ್ಯಕ್ಷ ಆರ್.ಪಿ. ರವಿಶಂಕರ್ ಅವರ ದೂರದೃಷ್ಟಿಯ ಸಂಕಲ್ಪದಲ್ಲಿ ಕಾರ್ಯಕ್ರಮ ರೂಪುಗೊಂಡಿದ್ದು, ಸಮುದಾಯದ ಯುವಜನತೆಗೆ ಹೊಸ ಅವಕಾಶಗಳ ಬಾಗಿಲು ತೆರೆಯಲಿದೆ ಎಂದರು.
ಜಿಎವಿಎಸ್ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶುಕ್ರವಾರದಿಂದ ೭ರವರೆಗೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸುಮಾರು ೭೫೦ ಕಿಮೀ. ಬೈಕ್‌ಯಾತ್ರೆ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಬೀದರ್‌ನಲ್ಲಿ ಆರ್ಯವೈಶ್ಯ ಮಹಾಸಭಾದ ಹಿರಿಯ ಉಪಾಧ್ಯಕ್ಷ ಕುಂಟ್ನಳ್ಳಿ ವೆಂಕಟೇಶ ರಾಯಚೂರು ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಈ ಬೈಕ್ ಯಾತ್ರೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯನಗರ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಮಾರ್ಗಮಧ್ಯೆ ಆಯ್ದ ಪಟ್ಟಣ ಹಾಗೂ ನಗರಗಳಲ್ಲಿ ಸಮಾಜದ ಬಾಂಧವರೊಂದಿಗೆ ಸಭೆ ನಡೆಸಿ ಜಿಎವಿಎಸ್ ಉದ್ದೇಶ, ಯುವಜನತೆಗೆ ದೊರೆಯಬಹುದಾದ ಅವಕಾಶು ಹಾಗೂ ಕಾರ್ಯಕ್ರಮದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಬೀದರ್, ಹುಮ್ನಾಬಾದ್, ಕಲಬುರಗಿ, ಸೇಡಂ, ಗುರುಮಠಕಲ್, ಸೈದಾಪುರ, ಯಾದಗಿರಿ, ರಂಗಂಪೇಟೆ, ಸುರಪುರ, ಗುರುಗುಂಟಾ, ಲಿಂಗಸೂಗೂರು, ಮುದಗಲ್, ಕವಿತಾಳ, ರಾಯಚೂರು, ಮಾನವಿ, ಪೋತ್ನಾಳ್, ಜವಳಗೇರಾ, ಸಿಂಧನೂರು , ಶ್ರೀಪುರಂ ಜಂಕ್ಷನ್, ಕಾರಟಗಿ, ಗಂಗಾವತಿ, ಕನಕಗಿರಿ, ತಾವರಗೇರಾ, ಕುಷ್ಟಗಿ, ಕೊಪ್ಪಳ, ಹೊಸಪೇಟೆ, ಕಮಲಾಪುರ, ಕಂಪ್ಲಿ, ಎಮ್ಮಿಗನೂರು, ಕುರುಗೋಡು, ಸಿರಿಗೇರಿ, ಸಿರುಗುಪ್ಪ, ಬಳ್ಳಾರಿ ತಲುಪಿ ಅ.೭ರಂದು ಯಾತ್ರೆ ಸಮಾರೊಪಗೊಳ್ಳಲಿದೆ.