ಯಾದಗಿರಿ: ಕಳೆದ ಎರಡು ವರ್ಷಗಳಿಂದ ತಾಲೂಕಿನ ಯಾದಗಿರಿ-ಶಹಾಪುರ-ಸುರಪುರ ರಾಜ್ಯ ಹೆದ್ದಾರಿಯ ವಡಗೇರಾ ಕ್ರಾಸ್ ಬಳಿಯ ವೃತ್ತ ಅಧಿಕಾರಿಗಳ ಕಣ್ಣಿಗೆ ಕಾಣದಿರುವುದು ದುರಂತವೇ ಸರಿ.
ಯಾದಗಿರಿ-ಶಹಾಪುರ-ಸುರಪುರ ರಾಜ್ಯ ಹೆದ್ದಾರಿಯ ವಡಗೇರಾ ಕ್ರಾಸ್ ಬಳಿ ಕಳೆದ ಎರಡು ವರ್ಷಗಳಿಂದ ಪಾಳು ಬಿದ್ದು ಹಾಳು ಕೊಂಪೆಯಾಗಿದೆ. ವೃತ್ತದ ಸುತ್ತಮುತ್ತ ಹಾಗೂ ಒಳಗಡೆ ಕಲ್ಲು ಮಣ್ಣಿನ ಗುಂಡೆ ಹಾಕಿ ವೃತ್ತವನ್ನು ಹಾಳುಗೆಡವಿದ್ದಾರೆ. ಇದಕ್ಕೆಲ್ಲ ಲೋಕೋಪಯೋಗಿ ಇಲಾಖೆ ಹಾಗೂ ರಾಜ್ಯ ಹೆದ್ದಾರಿಯ ಪ್ರಾಽಕಾರದ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಹೆದ್ದಾರಿ ಮೇಲೆ ಸಂಚರಿಸುವ ಹಲವು ವಾಹನ ಸವಾರರು ಹಾಗೂ ನೂರಾರು ಪ್ರಯಾಣಿಕರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕಳೆದ ಕೆಲ ತಿಂಗಳ ಹಿಂದೆ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು ಇದೇ ಹೆದ್ದಾರಿಯ ಮೂಲಕ ಹಾದು ಹೋದರೂ ಕೂಡ ಅಽಕಾರಿಗಳು ಮಾತ್ರ ಮೌನ ವಹಿಸಿರುವುದು ನಿರ್ಲಕ್ಷ÷್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ವಡಗೇರಾ ಕ್ರಾಸ್ದಿಂದ ಯಾದಗಿರಿ ನಗರ ಬಸ್ ನಿಲ್ದಾಣವರೆಗೆ 10 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೊಳಿಸಲಾಗಿದೆ. ಆದರೆ ಈ ವೃತ್ತ ಮಾತ್ರ ಅಭಿವೃದ್ಧಿಯಾಗದೆ ಹಾಳು ಬಿದ್ದಿರುವುದರಿಂದ ನೋಡುವವರ ಕಣ್ಣಿಗೆ ಮತ್ತು ವೃತ್ತದ ಮೂಲಕ ಹಾದು ಹೋಗುವವರಿಗೆ ತೀವ್ರ ಬೇಸರ ತರಿಸಿದೆ. ಈ ವೃತ್ತದ ಮೂಲಕ ರಾಜ್ಯ ಸೇರಿ ನೆರೆಯ ಆಂಧ್ರ, ತೆಲಂಗಾಣ ರಾಜ್ಯ ಅಲ್ಲದೆ ರಾಯಚೂರು, ಗುರಮಠಕಲ್, ಕಲಬುರಗಿ, ಸೆಡಂ, ವಾಡಿ, ಶಹಾಬಾದ್ ಮತ್ತು ಚಿತ್ತಾಪುರ ಸೇರಿ ಇತರೆ ನಗರಗಳಿಗೆ ಈ ವೃತ್ತ ಪ್ರಮುಖ ಕೊಂಡಿಯಾಗಿದೆ. ಶನಿವಾರ ತಿಂಥಣಿಗೆ ಲೋಕೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಆಗಮಿಸಲಿದ್ದು, ಸಚಿವರು ಇದರ ಬಗ್ಗೆ ಗಮನ ಹರಿಸಿ ಅಽಕಾರಿಗಳಿಗೆ ಭೀಮಾ ಬ್ರಿಜ್ ಕ್ರಾಸ್ನಲ್ಲಿರುವ ವೃತ್ತವನ್ನು ಅಭಿವೃದ್ಧಿಗೊಳಿಸುವರೇ ಎಂಬುದು ಕಾದು ನೋಡಬೇಕು.