ಅಬ್ಬೆತುಮಕೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯಾದಗಿರಿ&ಹಾವೇರಿ ಬಸ್​ಗಳಿಗೆ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಶ್ರೀ ಡಾ.ಗಂಗಾಧರ ಸ್ವಾಮೀಜಿ ಚಾಲನೆ ನೀಡಿದರು. ಡಾ.ಸುಭಾಷಚಂದ್ರ ಕೌಲಗಿ, ರಮೇಶ ತಾಳಿಕೋಟೆ, ಪಾಂಡುರಂಗ ಕುಲಕರ್ಣಿ, ಪ್ರಶಾಂತ ಪಾಟೀಲ್​, ಸಂಜೀವಕುಮಾರ ಇತರರಿದ್ದರು. 
ಯಾದಗಿರಿ

ಯಾದಗಿರಿ-ಹಾವೇರಿ ಬಸ್​ ಆರಂಭ

ಯಾದಗಿರಿ: ಜಿಲ್ಲಾ ಕೇಂದ್ರದಿಂದ ರಾಣೆಬೆಣ್ಣೂರ-ಹಾವೇರಿಗೆ ನಿತ್ಯ ಸಂಚರಿಸುವ ನಾನ್​ ಎಸಿ ಸ್ಲೀಪರ್​ ಅಮೋವರ್ಷ ಹೆಸರಿನ ಎರಡು ಬಸ್​ಗಳಿಗೆ ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಆವರಣದಲ್ಲಿ ಭಾನುವಾರ ಶ್ರೀ ಡಾ.ಗಂಗಾಧರ ಸ್ವಾಮೀಜಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಶ್ರೀಗಳು, ಲಿಂಗಸೂಗುರು, ಗಂಗಾವತಿ, ಸಿಂಧನೂರ, ವಿಜಯನಗರ (ಹೊಸಪೇಟೆ), ಹರಿಹರ, ರಾಣೆಬೆಣ್ಣೂರ ಮತ್ತು ಹಾವೇರಿಗಳಿಂದ ಅಬ್ಬೆತುಮಕೂರಿಗೆ ಬರುವ ಸಾವಿರಾರು ಭಕ್ತರು ಬಹುದಿನಗಳಿಂದ ನೇರ ಸಾರಿಗೆ ಸಂಪರ್ಕದ ಕೊರತೆ ಬಗ್ಗೆ ತಿಳಿಸಿದ್ದರು. ನಂತರ ತಾವು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ, ಕೆಕೆಆರ್​ಟಿಸಿ ಅಧ್ಯ ಅರುಣಕುಮಾರ ಪಾಟೀಲ್​, ವ್ಯವಸ್ಥಾಪಕ ನಿರ್ದೇಶಕಿ ಡಾ.ಸುಶೀಲಾ, ವಿಭಾಗೀಯ ನಿಯಂತ್ರಣಾಧಿಕಾರಿ ಮಂಜುನಾಥ ಜತೆ ಮಾತನಾಡಿ, ಯಾದಗಿರಿಯಿಂದ ಹಾವೇರಿಗೆ ಬಸ್​ ಸೌಲಭ್ಯದ ಕಲ್ಪಿಸುವಂತೆ ಕೋರಿದ್ದೆ. ಸ್ಪಂದಿಸಿದ ಕೆಕೆಆರ್​ಟಿಸಿ ನೂತನ ಬಸ್​ಗಳಿಗೆ ಚಾಲನೆ ನೀಡಿದೆ ಎಂದು ಹೇಳಿದರು.

ಮಠದ ಮಾಧ್ಯಮ ವಕ್ತಾರ ಡಾ.ಸುಭಾಷಚಂದ್ರ ಕೌಲಗಿ, ಟಕ ವ್ಯವಸ್ಥಾಪಕ ರಮೇಶ ತಾಳಿಕೋಟೆ, ಸಂಚಾರಿ ಅಧೀಕ ಪಾಂಡುರಂಗ ಕುಲಕರ್ಣಿ, ಪತ್ತಿನ ಸಹಕಾರ ಸಂದ ಅಧ್ಯ ಪ್ರಶಾಂತ ಪಾಟೀಲ್​, ಸಹಾಯಕ ಸಂಚಾರಿ ನಿಯಂತ್ರಕ ಸಂಜೀವಕುಮಾರ, ವಾಹನ ಚಾಲಕರಾದ ಹಣಮಂತ, ಪರಶುರಾಮ, ಡಿಸಿ ಆಪ್ತ ಹರೀಶ, ವಿರುಪಾ, ಚಂದ್ರಶೇಖರ ಇತರರಿದ್ದರು.

ನಾಳೆ ಇಲ್ಲವೆ ನಾಡಿದ್ದು ಸಂಚಾರ ಆರಂಭಗೊಳ್ಳಲಿದೆ. ಯಾದಗಿರಿಯಿಂದ ಸಂಜೆ 7.30ಕ್ಕೆ ಹೊರಡುವ ಬಸ್​ ಹಾವೇರಿಗೆ ಬೆಳಗ್ಗಿನ ಜಾವ 5.30ಕ್ಕೆ ತಲುಪಲಿದೆ. ಹಾವೇರಿಯಿಂದ ಸಂಜೆ 7.45ಕ್ಕೆ ಬಿಡುವ ಬಸ್​ ಮರುದಿನ ಬೆಳಗ್ಗೆ 6ಕ್ಕೆ ಯಾದಗಿರಿ ತಲುಪಲಿದೆ.
> ರಮೇಶ ತಾಳಿಕೋಟಿ ಕೆಕೆಆರ್​ಟಿಸಿ ಟಕ ವ್ಯವಸ್ಥಾಪಕ