ಯಾದಗಿರಿ : ಪ್ರಪಂಚ ಜ್ಞಾನ ಹೊಂದಲು ಅತ್ಯುತ್ತಮ ಮಾರ್ಗವೆ ಪ್ರವಾಸ, ಪ್ರವಾಸಿ ತಾಣಗಳಿಗೆ ಭಾರತ ದೇಶವು ವಿಶ್ವದಲ್ಲಿಯೆ ಜಗತ್ ಪ್ರಸಿದ್ದಿ ಹೊಂದಿದ ರಾಷ್ಟ್ರವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಮಚಂದ್ರ ಕಟ್ಟಿಮನಿ ಹೇಳಿದರು. ಜಿಲ್ಲಾಡಳಿತ, ಜಿಪಂ, ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಲುಂಬಿನಿ ಗಾರ್ಡನ್ನಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯಲ್ಲಿ ಯಾದಗಿರಿ ಕೋಟೆ, ಸಣ್ಣಕೆರೆ, ಹತ್ತಿಕುಣಿ ಆಣೆಕಟ್ಟು, ಧಬಧಬಿ ಜಲಪಾತ ಸೇರಿದಂತೇ ಒಟ್ಟು 21 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ ಎಂದರು. ಜಿಲ್ಲೆಯಲ್ಲಿನ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರ ಸುರಕ್ಷತೆ ಮತ್ತು ಮಾಹಿ ತಿಯ ಸಲುವಾಗಿ 20 ಪ್ರವಾಸಿ ಮಿತ್ರರನ್ನು ಇಲಾಖೆಯಿಂದ ತರಬೇತಿಗೊಳಿಸಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸರದಿಯ ಪ್ರಕಾರ 13 ಜನರಂತೆ ನಿಯೋಜಿಸಲಾಗಿದೆ ಎಂದು ರಾಮಚಂದ್ರ ಕಟ್ಟಿಮನಿ ಹೇಳಿದರು. ನಗರಾಭಿವೃದ್ಧಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಕಾಣ್ಣೂರ ಅವರು ಕಾಯ ರ್ಎಕ್ರಮಕ್ಕೆ ಚಾಲನೆ ನೀಡಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ ತಿಪ್ಪಣ್ಣ, ಜಿಲ್ಲಾ ಹೋಮಗಾರ್ಡ ಕಮಾಂಡರ್ ಈರಣ್ಣ, ಕಲಾಶಿಕ್ಷಕ ಮೇಘನಾಥ ಚವ್ಹಾಣ ಸೇರಿದಂತೆಯೇ ಇತರರಿದ್ದರು.