ಯಾದಗಿರಿ: ರತ್ನಾಕರನಿಂದ ಆದಿಕವಿಯಾಗಿ ಮಾರ್ಪಟ್ಟ ಮಹರ್ಷಿ ವಾಲ್ಮೀಕಿ ಅವರ ಜೀವನ ಪ್ರತಿಯೊಬ್ಬರಿಗೂ ದೊಡ್ಡ ಪ್ರೇರಣೆಯಾಗಿದೆ ಎಂದು ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಿತಿಯಿಂದ ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಸೋಮವಾರ ಹಮ್ಮಿಕೊಂಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಮಾಯಣದ ಮೂಲಕ ವಾಲ್ಮೀಕಿ ಅವರು ಸಮಾಜಕ್ಕೆ ಪ್ರತಿಯೊಂದು ಪಾತ್ರದ ಸ್ಪಷ್ಟ ಆದರ್ಶ ನೀಡಿದ್ದಾರೆ. ಮರ್ಯಾದಾ ಪುರುಷೋತ್ತಮನಾಗಿ ಒಬ್ಬ ಪುರುಷ, ಮಗ, ಮಗಳು ಹಾಗೂ ತಂದೆ ಹೇಗಿರಬೇಕು, ಒಬ್ಬ ಆದರ್ಶ ಪತ್ನಿ, ಭ್ರಾತೃ (ಸೋದರ) ಹಾಗೂ ಭಕ್ತನ ಲಣಗಳೇನು ಎಂಬುದನ್ನು ವಿವರಿಸಿದ್ದಾರೆ. ಅಷ್ಟೇ ಅಲ್ಲದೆ ರಾವಣನ ಚರಿತ್ರೆಯ ಮೂಲಕ ಒಬ್ಬ ಆದರ್ಶ ತಪಸ್ವಿ ಹೇಗಿರಬೇಕು ಎಂದು ತಿಳಿಸಿಕೊಟ್ಟಿದ್ದಾರೆ. ಮಹರ್ಷಿ ವಾಲ್ಮೀಕಿ ಅವರು ನೀಡಿದ ಮಾರ್ಗದರ್ಶನ ಮತ್ತು ಆದರ್ಶ ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಶ್ರದ್ಧಾಂಜಲಿಯಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರನ್ನು "ಆದಿಕವಿ' ಎಂದು ಕರೆಯಲಾಗುತ್ತದೆ. ರಾಮಾಯಣ ಮಹಾಕಾವ್ಯವು ಎಲ್ಲರಿಗೂ ಒಂದು ಮೌಲ್ಯಯುತ ಜೀವನ ಹೇಗೆ ನಡೆಸಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಜೀವನದಲ್ಲಿ ತಪ್ಪುಗಳಾಗಿದ್ದರೂ, ಅವುಗಳನ್ನು ತಿದ್ದಿಕೊಂಡು ಹೇಗೆ ಸುಧಾರಣೆ ಮಾಡಿಕೊಳ್ಳಬಹುದು ಮತ್ತು ಉತ್ತಮ ರೀತಿಯಲ್ಲಿ ಮುನ್ನಡೆಯಬಹುದು ಎಂಬ ಮಹತ್ವದ ಸಂದೇಶವನ್ನು ಇದು ನೀಡುತ್ತದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಜೀವನ ಮತ್ತು ರಾಮಾಯಣದ ಮೂಲಕ ನಾವೆಲ್ಲರೂ ಜೀವನದ ಸರಿಯಾದ ಮಾರ್ಗದರ್ಶನವನ್ನು ತಿಳಿದುಕೊಳ್ಳಬಹುದು ಎಂದು ಹೇಳಿದರು.
ವಾಲ್ಮೀಕಿ ನಾಯಕ ಸಂದ ಜಿಲ್ಲಾಧ್ಯ ಗೌಡಪ್ಪಗೌಡ ಅಲ್ದಾಳ ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಸರ್ಕಾರ ಪ್ರತಿಯೊಂದು ಜಯಂತಿಗಳನ್ನು ಆಚರಿಸುತ್ತದೆ ಎಂದರು. ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ನಾಗಪ್ಪ ವೈ. ಮಾನ್ಯದಾರ ವಿಶೇಷ ಉಪನ್ಯಾಸ ನೀಡಿದರು.
ಉಪಸ್ಥಿತ ಗಣ್ಯರು
ಈ ವೇಳೆ ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಿದ್ದಣ್ಣ ಅಣಬಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಸರೋಜಾ ಜಿ.ಟಿ., ಯುವಜನ ಕ್ರೀಡಾ ಇಲಾಖೆ ಅಧಿಕಾರಿ ರಾಜು ಭಾವಿಹಳ್ಳಿ, ಮಿನುಗಾರಿಗೆ ಇಲಾಖೆ ಅಧಿಕಾರಿ ಶರಣಬಸವ, ಪಿಂಚಣಿ ಮತ್ತು ಸಂ ಉಳಿತಾಯ ಅಧಿಕಾರಿ ಶಂಕರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಸಾಧಕರಿಗೆ ಸನ್ಮಾನ, ಅದ್ಧೂರಿ ಮೆರವಣಿಗೆ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವನ್ನು ಸನ್ಮಾನಿಸಲಾಯಿತು. ಆರಂಭದಲ್ಲಿ ನಗರದ ತಹಸೀಲ್ದಾರ್ ಕಚೇರಿಯಿಂದ ವಾಲ್ಮೀಕಿ ಭಾವಚಿತ್ರದ ಅದ್ದೂರಿ ಮರೆವಣಿಗೆ ಸಮಾಜದ ಮುಖಂಡರು ಚಾಲನೆ ನೀಡಿದರು. ಶಾಸಿ ವೃತ್ತ, ಸುಭಾಶಚಂದ್ರ ಬೋಸ್ ವೃತ್ತ, ವಾಲ್ಮೀಕಿ ವೃತ್ತದ ಮೂಲಕ ವಾಲ್ಮೀಕಿ ಭವನದವರೆಗೆ ಬೈಕ್ ಮತ್ತು ಡೊಳ್ಳುಗಳ ಮೂಲಕ ಪಾದಯಾತ್ರೆಯೊಂದಿಗೆ ಅದ್ದೂರಿಯಾಗಿ ನಡೆಯಿತು.
ಬಾಕ್ಸ್
ಕಪ್ಪು ಬಟ್ಟಿ ಧರಿಸಿ ಜಯಂತಿಯಲ್ಲಿ ಭಾಗಿ
ಇದೇ ವೇಳೆ ವಾಲ್ಮೀಕಿ ನಾಯಕ ಸಮಾಜದ ಉತ್ತರ ಕರ್ನಾಟಕ ರಾಜ್ಯಾಧ್ಯ ಮಾರೆಪ್ಪ ನಾಯಕ ಮಗದಂಪುರ ನೇತೃತ್ವದಲ್ಲಿ ಸಮಾಜದ ಕೆಲವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿದಂತೆ ಆಗಿರುವ ಅನ್ಯಾಯದ ವಿರುದ್ಧ ಕಪ್ಪು ಪಟ್ಟಿ ಧರಿಸಿ ಶಾಂತಿಯುತವಾಗಿ ಜಯಂತಿಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು. ಈ ಕುರಿತಂತೆ ವಿವಿಧ ಬೇಡಿಕೆಗಳತ್ತ ಸರ್ಕಾರ ಗಮನ ಹರಿಸಬೇಕೆಂಬ ಒತ್ತಾಯ ಅವರದ್ದಾಗಿತ್ತು. ಶರಣಪ್ಪ ಜಾಲಹಳ್ಳಿ, ದೊಡ್ಡಯ್ಯ ನಾಯಕ ಹಳಿಗೇರ, ಅಂಬುರಾಜ್ ನಾಯಕ, ಲ್ಮಣ ನಾಯಕ ಜಿನಕೆರಾ, ರುಪತಿ ಗೌಡಗೇರ, ಶರಣು ನಾಯಕ ನಗಲಪುರ್, ಬಸವರಾಜ ದೊರೆ ಗೌಡಗೇರ, ರಾಮಚಂದ್ರ ಗೌಡ, ಮಲ್ಲಿಕಾರ್ಜುನ ಗೌಡಗೇರಿ, ಸದಾಶಿವ ನಾಯಕ, ಸಾಬು ನಾಯಕ ನೀಲ್ಹಳ್ಳಿ, ದೇವೇಂದ್ರ ನಾಯಕ, ಸಾಬಯ್ಯ ಬಳಿ ಚಕ್ರ, ಸುಭಾಷ್ ನಾಯಕ, ಭೀಮಣ್ಣ ನಾಯಕ, ಮಹೇಶ ಕೂಡ್ಲೂರು, ಹರ್ಷವರ್ಧನ ಮುದ್ನಾಳ, ಶಶಾಂಕ್ ನಾಯಕ, ಈಶಪ್ಪ ನಾಯಕ ಹೇಡಗಿಮದ್ರ, ಹಣಮಂತ ವರ್ಕನಳ್ಳಿ, ಮುನಿಯಪ್ಪ ಗೌಡ ವರ್ಕನಳ್ಳಿ, ದೇವಪ್ಪ ನಾಯಕ ವರ್ಕನಳ್ಳಿ ಇತರರಿದ್ದರು.