ಶಹಾಪುರನ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿ ಜಟ್ಟಿ ಕುಸಮಕುಮಾರ, ಶಾಸಕ ಶರಣಬಸಪ್ಪ ದರ್ಶನಾಪುರ, ಜಿ¯್ಲÁಧ್ಯಕ್ಷ ಬಸರಡ್ಡಿ ಅನಪುರ ಇತರರಿದ್ದರು. 
ಯಾದಗಿರಿ

ದೇಶದ ಪ್ರಗತಿಗೆ ಕಾಂಗ್ರೆಸ್ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿಕೆ
  • ಶಹಾಪುರದಲ್ಲಿ ಸಂಘಟನ್ ಸೃಜನ್ ಅಭಿಯಾನ
ಶಹಾಪುರ :

ಶತಮಾನಗಳ ಭವ್ಯ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದು, ಸುಮಾರು ಏಳು ದಶಕಗಳ ಕಾಲ ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ನಾಂದಿಯಾಗಿ ಕೆಲಸ ಮಾಡಿದೆ ಎಂದು ಮಾಜಿ ಸಚಿವರೂ ಆದ ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.

ಇಲ್ಲಿನ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಘಟನ್ ಸೃಜನ್ ಅಭಿಯಾನ ನಿಮಿತ್ತ ಶಹಾಪುರ ಬ್ಲಾಕ್ ಮಟ್ಟದ ಪದಾಽಕಾರಿಗಳ, ಪ್ರಮುಖರ ಮತ್ತು ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
ಜಿ¯್ಲÁ, ಬ್ಲಾಕ್ ಮಟ್ಟದ ಅಧ್ಯಕ್ಷರ ಆಯ್ಕೆಗಾಗಿ ನಡೆದಿರುವ ಅಭಿಯಾನವು ದೇಶದ ಎಲ್ಲೆಡೆ ನಡೆದಿದ್ದು, ಪಕ್ಷದ ಸಂಘಟನೆ ಕೆಳಹಂತದಿAದ ಮಾಡುವ ಮೂಲಕ ಮುಂದಿನ ಎಲ್ಲ ಚುನಾವಣೆಗಳಲ್ಲಿ ಗೆಲ್ಲಬೇಕೆಂಬ ಮೂಲ ಉದ್ದೇಶ ಹೊಂದಿದೆ ಎಂದರು.
ಬಡವರ, ದೀನ ದಲಿತ, ರೈತರ, ಕೂಲಿ ಕಾರ್ಮಿಕರು ಎಲ್ಲ ಜನರ ಹಿತ ಬಯಸುವ ಪಕ್ಷ ಎಂದರೆ ಅದು ಕಾಂಗ್ರೆಸ್. ಕಾರಣ ಶಹಾಪುರ ಸೇರಿ ಇಡೀ ಜಿ¯್ಲೆಯಲ್ಲಿ ಪಕ್ಷವನ್ನು ಗಟ್ಟಿಯಾಗಿ ಕಟ್ಟೊಣ ಎಂದು ಹೇಳಿದರು.
ಎಐಸಿಸಿ ಕಾರ್ಯದರ್ಶಿ ಜಟ್ಟಿ ಕುಸಮಕುಮಾರ ಮಾತನಾಡಿ, ಸಂಘಟನೆ ಸೃಜನ್ ಅಭಿಯಾನವು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲï ಗಾಂಽ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಹಳ್ಳಿಯಿಂದ ದಿಲ್ಲಿಯವರೆಗೂ ಪಕ್ಷದ ಸಂಘಟನೆಯಾಗಬೇಕು. ಮತ್ತು ಪಕ್ಷದ ಪ್ರಮುಖರ, ಕಾರ್ಯಕರ್ತರ, ಖಾಸಗಿ ಎನ್‌ಜಿಒಗಳಿಂದ ಅಭಿಪ್ರಾಯ ಸಂಗ್ರಹಿಸಿ ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳಲ್ಲಿ ಪಕ್ಷಕ್ಕಾಗಿ ದುಡಿಯುವವರನ್ನು ಹೈಕಮಾಂಡ್ ನೇಮಕ ಮಾಡಲಿದೆ. ಜಿ¯್ಲÉಯಲ್ಲಿ ಪಕ್ಷಕ್ಕೆ ಗಟ್ಟಿನೆಲೆ ಇದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಬೇಕೆಂಬ ಸಂಕಲ್ಪದೊAದಿಗೆ ಸಂಘಟನೆ ಮಾಡಬೇಕು ಎಂದು ಹೇಳಿದರು.
ಶಹಾಪುರ ಬ್ಲಾಕ್ ಅಧ್ಯಕ್ಷ ಶಿವುಮಾಂತಪ್ಪ ಸಾಹು ಚಂದಾಪುರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ಕೆಪಿಸಿಸಿ ಉಪಾಧ್ಯಕ್ಷ ಪುಂಡಲಿಕರಾವ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಾಜಗೊಪಾಲರಡ್ಡಿ, ಶ್ರೀದೇವಿ, ಜಿ¯್ಲÁಧ್ಯಕ್ಷ ಬಸರಡ್ಡಿ ಪಾಟೀಲ್ ಅನಪುರ, ಜಿ¯್ಲÁ ವಕ್ತಾರ ಶ್ಯಾಮಸನ್ ಮಾಳಿಕೇರಿ, ಕೆಂಭಾವಿ ಬ್ಲಾಕ್ ಅಧ್ಯಕ್ಷ ಬಸನಗೌಡ ಯಾಳಗಿ, ಹಿರಿಯ ಮುಖಂಡರಾದ ಅಯ್ಯಣ್ಣ ಕನ್ಯಾಕೊಳೂರ, ಶಂಕ್ರಣ್ಣ ವಣಿಕ್ಯಾಳ, ಸಿದ್ದನಗೌಡ ಕೆಂಭಾವಿ, ಮಹಿಪಾಲರಡ್ಡಿ ದಿಗಾಂವಿ, ಸಿದ್ದು ಸಾಹು ಆರಬೊಳ, ಮಾಹಾದೇವಪ್ಪ ಸಾಲಿಮನಿ, ನೀಲಕಂಠ ಬಡಿಗೇರ, ಅ¯್ಲÁಪಟೇಲï ಮಕ್ತಾಪುರ, ಮೌನೇಶ ನಾಟೇಖಾರ, ರುದ್ರಪ್ಪ ಹುಲಿಮನಿ ಇತರರಿದ್ದರು.