ಸುರಪುರ: ರಾಜ್ಯದಲ್ಲಿ ಉರ್ದು ಭಾಷೆ ಹಾಗೂ ಸಾಹಿತ್ಯದ ಅಭಿವೃದ್ಧಿಗೆ ಕರ್ನಾಟಕ ಉರ್ದು ಅಕಾಡೆಮಿ ನಿರಂತರವಾಗಿ ಶ್ರಮಿಸುತ್ತಿದ್ದು, ಉರ್ದು ಸಾಹಿತ್ಯದ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವ ಸಾಹಿತಿಗಳು ಹಾಗೂ ಕವಿಗಳನ್ನು ಪೋತ್ಸಾಹಿಸಲು ಅಕಾಡೆಮಿ ಸದಾ ಬದ್ಧವಾಗಿದೆ ಎಂದು ಕರ್ನಾಟಕ ಉರ್ದು ಅಕಾಡೆಮಿ ಅಧ್ಯ ಮುಫ್ತಿ ಮೊಹಮ್ಮದ್ ಅಲಿ ಖಾಜಾ ಸಾಹೇಬ್ ಹೇಳಿದರು.
ತಿಮ್ಮಾಪುರದ ಯೂಸುಫಿಯಾ ಮೈದಾನದಲ್ಲಿ ಕರ್ನಾಟಕ ಉರ್ದು ಅಕಾಡೆಮಿಯಿಂದ ಶನಿವಾರ ರಾತ್ರಿ ಆಯೋಜಿಸಿದ್ದ ಅಖಿಲ ಭಾರತ ಮುಶಾಯಿರಾ (ಕವಿ ಸಮ್ಮೇಳನ)ದ ಅಧ್ಯತೆ ವಹಿಸಿ ಮಾತನಾಡಿ, ಉರ್ದು ಭಾಷೆಯ ಮಧುರತೆ ಹಾಗೂ ಶ್ರೀಮಂತ ಸಾಹಿತ್ಯಿಕ ಮತ್ತು ಸಾಂಸತಿಕ ಪರಂಪರೆ ಗಮನಾರ್ಹವಾಗಿದೆ. ಈ ಪರಂಪರೆಯನ್ನು ಇಂದಿನ ಹಾಗೂ ಮುಂದಿನ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಕವಿ ಸಮ್ಮೇಳನ, ಕವಿಗೋಷ್ಠಿ ಸೇರಿ ವಿವಿಧ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಉರ್ದು ಸಾಹಿತ್ಯ ೇತ್ರಕ್ಕೆ ಗಣನೀಯ ಕೊಡುಗೆ ನೀಡಿದ ಹಿರಿಯ ಸಾಹಿತಿ ಇಕ್ಬಾಲ್ ರಾಹಿ ತಿಮ್ಮಾಪುರಿ ಅವರನ್ನು ಅಕಾಡೆಮಿಯಿಂದ ಸನ್ಮಾನಿಸಲಾಯಿತು.
ಅಕಾಡೆಮಿ ಸದಸ್ಯರಾದ ಡಾ.ಅನೀಸ್ ಸಿದ್ಧಿಕಿ, ಶರೀಫ್ ಅಹಮದ್ ಶರೀಫ್, ಪ್ರಮುಖರಾದ ಖಾಲಿದ್ ಅಹಮದ್ ತಾಳಿಕೋಟೆ, ಅಬ್ದುಲ್ ಗಫಾರ್ ನವಲಗುಂದ, ಪ್ರಕಾಶಚಂದ ಜೈನ್, ಅಕೀಲ್ ಮುಲ್ಲಾ, ಹವುಸಫ್ ಮುಜಾಯಿದ್ದ, ಅಫು ತಿಮ್ಮಾಪುರಿ ಇತರರಿದ್ದರು. ಪತ್ರಕರ್ತ ಖಲೀಮ್ ಫರೀದಿ ಸನ್ಮಾನಿತರ ಪರಿಚಯ ಮಾಡಿಕೊಟ್ಟರು. ತೌಫೀಕ್ ಅಸದ್ ತಿಮ್ಮಾಪುರಿ ನಿರೂಪಣೆ ಮಾಡಿ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನಡೆದ ಕವಿಗೋಷ್ಠಿಯಲ್ಲಿ ಬೆಂಗಳೂರು, ಬೆಳಗಾವಿ, ರಾಯಚೂರು, ಕಲಬುರಗಿ, ಯಾದಗಿರಿ, ಶಹಾಪುರ, ಮಾಲೆಗಾಂವ್ ಹಾಗೂ ಭೂಪಾಲ್ ಸೇರಿ ವಿವಿಧೆಡೆಯಿಂದ ಆಗಮಿಸಿದ್ದ ಕವಿಗಳು ಭಾಗವಹಿಸಿ ತಮ್ಮ ಕವನಗಳನ್ನು ವಾಚಿಸಿದರು. ಕವಿಗಳ ಕಾವ್ಯವಾಚನಕ್ಕೆ ಸಾಹಿತ್ಯಾಸಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಶನಿವಾರ ರಾತ್ರಿ ಆರಂಭವಾದ ಕವಿಗೋಷ್ಠಿ ಭಾನುವಾರ ಬೆಳಗಿನ ಜಾವ 2.30ರವರೆಗೆ ನಡೆಯಿತು. ಕಾವ್ಯ, ಸಾಹಿತ್ಯ ಹಾಗೂ ಶಾಯರಿಗಳ ಸೊಬಗಿನಲ್ಲಿ ಸಾಗಿದ ಕಾರ್ಯಕ್ರಮದಲ್ಲಿ ನೂರಾರು ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಕಾವ್ಯಧಾರೆಯನ್ನು ಆಸ್ವಾದಿಸಿದರು.